ಆ ಪದ ಬಳಸಿದ್ದಕ್ಕೆ ಪಾಲಕರು ನನಗೆ ಎಚ್ಚರಿಸಿದ್ರು; ಹಳೇ ಘಟನೆ ನೆನೆದ ಸುಶ್ಮಿತಾ ಸೇನ್​​

Untitled-design-59
Published on

ಮುಂಬೈ: ಮಾಜಿ ವಿಶ್ವ ಸುಂದರಿ ಮತ್ತು ನಟಿ ಸುಶ್ಮಿತಾ ಸೇನ್ ಅವರು ಆಗಾಗ್ಗೆ ವೃತ್ತಿಜೀವನದಿಂದ ಮಾತ್ರವಲ್ಲ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಯಾವಾಗಲೂ ಮುಕ್ತವಾಗಿ ಮಾತನಾಡುವ ಈ ಪ್ರತಿಭಾವಂತ ನಟಿ ಇತ್ತೀಚೆಗೆ ನೀಡಿದ ಖಾಸಗಿ ವಾಹಿನಿಯ ಸಂದರ್ಶವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ಪ್ರಮುಖ ಮತ್ತು ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ.

ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಅವರು ಸಂದರ್ಶನವೊಂದರಲ್ಲಿ ಸೆಕ್ಸ್​ ಎಂಬ ಪದವನ್ನು ಬಳಸಿದ್ದೆ. ಆ ಸಂದರ್ಶನದ ಬಳಿಕ ನನ್ನ ಪಾಲಕರು ಆ ಪದವನ್ನು ಬಳಸದಂತೆ ಎಚ್ಚರಿಸಿದ್ದರು. ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ.

ಅಲ್ಲದೆ, ಆ ಸಮಯದಲ್ಲಿ ಸಮಾಜವು ಇಂದಿನಂತೆ ಮುಕ್ತವಾಗಿರಲಿಲ್ಲ. ಆ ಸಮಯದಲ್ಲಿ ಎಲ್ಲವೂ 'ಹೇಗೆ' ಎಂದರೆ ನನ್ನ ತಾಯಿ ಮತ್ತು ಬಾಬಾ (ತಾಯಿ ಮತ್ತು ತಂದೆ) ನನ್ನನ್ನು ಕೂರಿಸಿಕೊಂಡು ನಿಮ್ಮ ಹೆಗಲ ಮೇಲೆ ಸಾಕಷ್ಟು ಜವಾಬ್ದಾರೆ ಇದೆ. ನೀವು ಬಳಸುವ ಪದಗಳು ನಿಯಂತ್ರಣದಲ್ಲಿರಲಿ ಎಂದು ಹೇಳುವಷ್ಟರ ಮಟ್ಟಿಗೆ ಇತ್ತು. 18ನೇ ವಯಸ್ಸಿನಲ್ಲಿ ಸಂದರ್ಶನದಲ್ಲಿ 'ಸೆಕ್ಸ್' ಪದವನ್ನು ಏಕೆ ಬಳಸಬೇಕು? ಆ ಪದ ಬಳಸಿದ್ದಕ್ಕೆ ನಿಮ್ಮ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ಸುಶ್ಮಿತಾ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಆ ಪದ ಬಳಕೆಯ ಬಗ್ಗೆ ವಿವರಿಸಿದ ಅವರು, ನಾನು ಉದ್ದೇಶಪೂರ್ವಕವಾಗಿ ಸೆಕ್ಸ್ ಎಂಬ ಪದವನ್ನು ಬಳಸಿದ್ದೇನೆ. ಏಕೆಂದರೆ ನಾನು ಮಿಸ್ ಯೂನಿವರ್ಸ್ ಅಥವಾ ಅತ್ಯಂತ ಸುಂದರ ವ್ಯಕ್ತಿ ಆಗಲು ಬಯಸಲಿಲ್ಲ. ನಾನು ವಿವೇಚನೆವುಳ್ಳ ಸ್ವತಂತ್ರ ವ್ಯಕ್ತಿಯಾಗಲು ಬಯಸಿದೆ. ನನಗೆ ಸಿಕ್ಕ ಆ ಸ್ವಾತಂತ್ರ್ಯವೇ ಮಿಸ್ ಯೂನಿವರ್ಸ್ ಆಗಲು ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net