

ಆದರೆ ನಮ್ಮ ಪ್ರಾಚಿನರ ದೃಷ್ಟಿಯಲ್ಲಿ ವಿಶೇಷ ಸಂಕಲ್ಪಶಕ್ತಿ ಯಿಂದ ಸೃಷ್ಟಿ ಸಾಧ್ಯ. ಬ್ರಹ್ಮನ ಉಗುರಿನಿಂದ ವೈಖಾನಸರು, ಬಾಲದಿಂದ ವಾಲಖಿಲ್ಯರು ಜನಿಸಿದರು ಎಂದು ಯಜುರ್ವೇದವು ವಣಿರ್ಸುವುದು! ನಾರದರು ಬ್ರಹ್ಮನತೊಡೆಯಿಂದ, ದ ಪ್ರಜಾ ಪತಿಯು ಬ್ರಹ್ಮನ ಅಂಗುಷ್ಠದಿಂದ ಜನಿಸಿದರೆಂದು ಭಾಗವತ ಹೇಳುವುದು. ಬ್ರಹ್ಮನ ಮಾನಸಪುತ್ರರಾಗಿ ಸನಕಾದಿಗಳು, ಸಪ್ತಬ್ರಹ್ಮರು ಜನಿಸಿದರು! ರಾಮಾಯಣದಲ್ಲಿಯೇ ಜಾಂಬ ವಂತನು ಬ್ರಹ್ಮನ ಆಕಳಿಕೆಯಲ್ಲಿ ಜನಿಸಿದ, ಇಂದ್ರನ ವೀರ್ಯ ಋರಜಸ್ಸಿನ ಬಾಲದ ಮೇಲೆ ಬಿದ್ದು ವಾಲಿಯೂ ಸೂರ್ಯನ ವೀರ್ಯ ಕಂಠದ ಮೇಲೆ ಬಿದ್ದು ಸುಗ್ರೀವನೂ ಜನಿಸಿದರು. ಸೀತೆಯು ಕಮಲದಲ್ಲಿ ಜನಿಸಿದಳು....
ಪಾಯಸದಿಂದ ಜನಿಸಿದವರು ದಶರಥನ ಮಕ್ಕಳು ಹೇಗಾದರು ಎನ್ನುವುದು ಒಂದು ವಿಶೇಷ ಪ್ರಶ್ನೆ ಯಾಗಿ ನಿಲ್ಲುವುದು! ಹಾಗಾಗಿ ಶ್ರೀರಾಮಾದಿಗಳು ಪಾಯಸದ ಮಕ್ಕಳು! ದಶರಥನ ಮಕ್ಕಳಲ್ಲವೆಂದು ವಾದಿಸುವವರುಂಟು. ಪಾಯಸವನ್ನು ದಶರಥ ನೀಡಿದ ಮಾತ್ರಕ್ಕೆ ಅವರೆಲ್ಲಾ ಅವನ ಮಕ್ಕಳಾದುದಲ್ಲ! ಹಾಗೆ ನೋಡಿದರೆ ಶಸಚಿಕಿತ್ಸೆಯನ್ನು ಮಾಡಿದ ವೈದ್ಯರೆಲ್ಲ ತಂದೆ ಆಗಬೇಕಾದೀತು! ನಂಬಿಗೆ ಇದ್ದವನಿಗೆ ಇಲ್ಲಿ ಕೆಲವು ಸ್ವಾರಸ್ಯವು ಅಡಗಿದೆ. ಪಾಯಸ, ಚರು, ಹಣ್ಣು, ರವನ್ನು ಸೇವಿಸು, ನಿನಗೆ ಉತ್ತಮಸಂತಾನವಾಗುವುದೆಂದು ಆಶೀರ್ವದಿಸಿ ನೀಡುವ ಮಹಿಮರು ಇಂದಿಗೂ ಇದ್ದಾರೆ!
ಪಾಯಸವೇ ಮಹಾವಿಷ್ಣು!: ಕೆರೆ-ಬಾವಿತೋಡಿಸುವುದು, ತೋಟದ ನಿರ್ಮಾಣ, ಅರವಟ್ಟಿಗೆ, ಆರಾಮ ಛತ್ರ, ಮಂಟಪಾದಿ ನಿರ್ಮಾಣ, ಗ್ರಂಥರಚನೆ, ಶಿಷ್ಯರ ತಯಾರಿ ಇವು ಸಪ್ತಸಂತಾನವೆಂದು ಸ್ಮೃತಿಯು ಉಲ್ಲೆಖಿಸುವುದು!
ಮಾನಸಿಕ ಸಂತಾನ, ವರಸಂತಾನ, ಮೈಥುನಸಂತಾನ, ಸಂಕಲ್ಪಸಂತಾನ ಹೀಗೆ ಹಲವಾರು ಉತ್ಪತ್ತಿಯ ಕ್ರಮವು ಈ ಭೂಮಂಡಲದ ಇತಿಹಾಸದಲ್ಲಿದೆ.
ತಂದೆ ಇಂಥವನೇ ಎಂದು ಗುರುತಿಸುವುದು ತಾಯಿ. ನಂತರ ತಂದೆ ಉಪನಯನ ಮಾಡಿ ತನ್ನ ಮಗನೆಂದು ಸ್ವೀಕರಿಸುವನು. ಯಾಗದಿಂದ ತೃಪ್ತನಾದ ಶ್ರೀಮನ್ನಾರಾಯಣನೇ ಸಂತುಷ್ಟ ಹೃದಯನಾಗಿ ಯಕುಂಡದಲ್ಲಿ ಆವಿರ್ಭವಿಸಿದನು. ಅವನ ಎಡಭಾಗದಲ್ಲಿ ಪಾಯಸವನ್ನು ಹಿಡಿದು ಲ್ಮಯಿದ್ದಳು. ಅವನು ಲ್ಮಯ ಕೈಯಲ್ಲಿರುವ ಪಾಯಸವನ್ನು ದಶರಥನಿಗೆ ನೀಡಿದನು! ಎಂದು ತತ್ತ$್ವಸಂಗ್ರಹ ರಾಮಾಯಣ ವಿವರಿಸುವುದು. ಆದರೆ ವಾಲ್ಮೀಕಿಗಳು ದೇವನಿಮಿರ್ತ ಪಾಯಸವನ್ನು ಮಹಾದ್ಭೂತವು ನೀಡಿತು ಎನ್ನುವರು! ಆದರೆ ಅದು ದೇವಸಂಕಲ್ಪವೇ! ಆದುದರಿಂದ ಪಾಯಸದಲ್ಲಿ ವಿಷ್ಣುತ್ತ$್ವವೇ ತುಂಬಿತ್ತು ಎನ್ನುವಲ್ಲಿ ಸಂಶಯವಿಲ್ಲ!
ರಾಮನ ನಂತರ ಲ್ಮಣನಲ್ಲ!: ನಾವು ರೂಢಿಯಲ್ಲಿ ರಾಮ- ಲ್ಮಣ-ಭರತ-ಶತ್ರ್ನು ಎನ್ನುತ್ತೇವೆ. ಆದರೆ ನಿಜವಾಗಿ ರಾಮನ ನಂತರ ಜನಿಸಿದವ ಭರತ! ಪಾಯಸವನ್ನು ನೀಡಿ ಹನ್ನೆರಡು ಮಾಸಗಳು ಕಳೆದನಂತರ ಚೈತ್ರಶುದ್ಧನವಮಿಯ ದಿನ ಅದಿತಿ ದೇವತಾಕವಾದ ಪುನರ್ವಸು ನತ್ರದಲ್ಲಿ, ಐದು ಗ್ರಹಗಳು ಉಚ್ಚಸ್ಥಾನದಲ್ಲಿರುವಾಗ, ಚಂದ್ರಸಮೇತನಾಗಿ ಬೃಹಸ್ಪತಿಯು ವಿಜೃಂಭಿಸುತ್ತಿರುವಾಗ, ಶ್ರೀರಾಮ ಜನಿಸಿದ. ಸಾಾದ್ವಿಷ್ಣುವಿನ ನಾಲ್ಕನೆಯ ಒಂದಂಶದಿಂದ ಕೂಡಿ ಭರತನು ಕೈಕೇಯಿಗೆ ಪುಷ್ಯಾನತ್ರದ ದಶಮಿಯಂದು ಜನಿಸಿದ. ವಿಷ್ಣುವಿನ ಅರ್ಧಾಂಶ ಸಮನ್ವಿತರಾದ ಸುಮಿತ್ರಾದೇವಿಯಲ್ಲಿ ಆಶ್ಲೇಷಾ ನತ್ರದಲ್ಲಿ ಲ್ಮಣ-ಶತ್ರ್ನುರೆಂಬ ಯಮಳರ ಜನನ ವಾಯಿತು. ವೈಾನಿಕವಾಗಿ ಯಮಳರು ಒಬ್ಬರೊಬ್ಬರನ್ನು ಹೊಂದಿಕೊಂಡಿರಬೇಕು. ಆದರೆ ರಾಮಾಯಣದಲ್ಲಿ ವೈಾನಿಕತೆ ಯನ್ನೂ ಮೀರಿದ ಹಲವು ಅಂಶಗಳನ್ನು ಕಾಣುತ್ತೇವೆ!
ರಾಮ-ಲ್ಮಣ; ಭರತ-ಶತ್ರ್ನು ಎಂದಾಗಲು ಕಾರಣ ಕೌಸಲ್ಯೆಯು ತನಗೆ ನೀಡಿದ ಪಾಯಸದಲ್ಲಿ ಅರ್ಧ ಭಾಗವನ್ನು ಸುಮಿತ್ರೆಗೆ ನೀಡಿದ್ದು ಹಾಗೂ ಕೈಕೇಯಿಯೂ ಪಾಯಸದಲ್ಲಿ ಅರ್ಧಭಾಗವನ್ನು ಸುಮಿತ್ರೆಗೆ ನೀಡಿದ್ದು. ಇದರಿಂದ ಲ್ಮಣ-ಶತ್ರ್ನುರು ಯಮಳರೇ ಆದರೂ ಲ್ಮಣನು ರಾಮನನ್ನೂ, ಶತ್ರ್ನುನು ಭರತನನ್ನೂ ಅನ್ಯೋನ್ಯವಾಗಿ ಅವಲಂಬಿಸಿದ್ದನ್ನು ಹೆಜ್ಜೆ-ಹೆಜ್ಜೆಗೂ ವಾಲ್ಮೀಕಿ ಮಹಷಿರ್ಗಳು ಪ್ರತಿಪಾದಿಸಿದ್ದಾರೆ.
ಆದ್ದರಿಂದ ರಾಮನ ಪತ್ನಿ ಸೀತೆ ಮಾತ್ರ ನಾಯಕಿಯಾದಳು! ಊಮಿರ್ಳೆಯನ್ನು ಬಿಟ್ಟು ಲ್ಮಣ ವನವಾಸಕ್ಕೆ ಹೋದನು! ಮಾಂಡವಿಯನ್ನು ಬಿಟ್ಟು ಭರತ ನಂದಿಗ್ರಾಮದಲ್ಲಿ ರಾಮನಂತೆಯೇ ನಾರುಮಡಿಯಲ್ಲಿ ಸಂನ್ಯಾಸಿಯಂತೆ ಉಳಿದನು. ಶ್ರುತಕೀತಿರ್ಯನ್ನು ಬಿಟ್ಟು ಶತ್ರ್ನುನೂ ನಾರುಮಡಿಯನ್ನುಟ್ಟು ಸಂನ್ಯಾಸಿಯಂತೆಯೇ ಅಯೋಧ್ಯೆಯನ್ನು ಕಾಯುತ್ತಾ ಉಳಿದ.