ನಿರಂತರ ಬಳಕೆಯಿಂದ ಕನ್ನಡ ಉಳಿವು

TKE kasapa
ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಸಾಪ ಯುವ ಘಟಕದ ಪದಾಧಿಕಾರಿಗಳು ಸೇವಾ ದೀಕ್ಷೆ ಪಡೆದರು. ಡಾ. ಪ್ರಶಾಂತ್‌ನಾಯಕ್, ಸೂರಿ ಶ್ರೀನಿವಾಸ್, ಡಾ. ಮಂಜುನಾಥ್, ರವಿ ದಳವಾಯಿ ಇತರರಿದ್ದರು.
Published on

ತರೀಕೆರೆ: ಸಾಹಿತ್ಯ ಮತ್ತು ಮಾತೃಭಾಷೆ ನಿರಂತರ ಬಳಕೆ ಮಾಡಿ ಕನ್ನಡ ಉಳಿಸುವ ಪ್ರಯತ್ನಗಳಾಗಬೇಕು ಎಂದು ಕುವೆಂಪು ವಿವಿ ಪ್ರಾಧ್ಯಾಪಕ ಡಾ. ಪ್ರಶಾಂತ್ ನಾಯಕ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಸೇವಾ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾವನೆಗಳ ಅಭಿವ್ಯಕ್ತಿಯನ್ನು ಭಾಷೆ ಮೂಲಕ ವ್ಯಕ್ತಪಡಿಸಿ ಸಂವೇದನಾಶೀಲತೆ ಹೊಂದಬೇಕು. ಸಾಹಿತ್ಯಾಭಿರುಚಿ ಬೆಳೆಸಿಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷರಾಗಿ ವೈ.ಪ್ರೇಮ್‌ಕುಮಾರ್ ಇತರರು ಸೇವಾ ದೀಕ್ಷೆ ಪಡೆದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರತಿಜ್ಞಾವಿಧಿ ಬೋಧಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಮಂಜುನಾಥ್, ಉಪನ್ಯಾಸಕಿ ಡಾ. ಸಬಿತಾ ಬನ್ನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ, ಪದಾಧಿಕಾರಿಗಳಾದ ಬಿ.ಎಸ್.ಭಗವಾನ್, ಮಿಲ್ಟ್ರಿ ಶ್ರೀನಿವಾಸ್, ತ.ಮ.ದೇವಾನಂದ್, ಟಿ.ಸಿ.ದರ್ಶನ್, ಕೆ.ಜಯಸ್ವಾಮಿ, ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net