

ಕೋಲಾರ: ಕುಟುಂಬಗಳ ಸ್ಥಿತಿಗತಿ ತಿಳಿದುಕೊಳ್ಳಲು ಸರ್ಕಾರ ಮಹತ್ವಕಾಂಕ್ಷೆ ಯೋಜನೆ ಕೈಗೆತ್ತಿಕೊಂಡಿದ್ದು, ಪ್ರತಿಯೊಂದು ಕುಟುಂಬದವರು ಸಮೀೆಯಲ್ಲಿ ಪಾಲ್ಗೊಂಡು ಸಮಗ್ರ ಮಾಹಿತಿ ಒದಗಿಸಬೇಕು ಎಂದು ವಿಧಾನ ಪರಿಷತ್ ಅನಿಲ್ ಕುಮಾರ್ ಹೇಳಿದರು.
ಹಿಂದುಳಿದ ವರ್ಗಗಳ ಆಯೋಗ, ಜಿಲ್ಲಾಡಳಿತ, ಜಿ.ಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರದಿಂದ ಪ್ರಾರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀೆಗೆ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿ, ಸಮೀೆಗೆ ಅಧಿಕೃತವಾಗಿ ರಾಜ್ಯಾದ್ಯಂತ ಚಾಲನೆ ಸಿಕ್ಕಿದೆ. ಗಣತಿದಾರರು ಮನೆ ಬಳಿಗೆ ಬಂದು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಯಶಸ್ಸಿಗೆ ಸಹಕರಿಸಬೇಕು ಎಂದರು.
ಸ್ವಾತಂತ್ರ$್ಯ ಬಂದ ನಂತರ ಅನೇಕ ಪಕ್ಷಗಳು ಅಧಿಕಾರಕ್ಕೆ ಬಂದು ಹೋಗಿವೆ. ವಿವಿಧ ಸರ್ಕಾರಗಳು ದೇಶ, ರಾಜ್ಯದ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮ ಸಹ ಜಾರಿಗೆ ತಂದಿವೆ. ಯೋಜನೆಗಳ ಪ್ರಯೋಜನ ಎಷ್ಟರ ಮಟ್ಟಿಗೆ ಜನಕ್ಕೆ ತಲುಪಿದೆ. ಎಷ್ಟರ ಮಟ್ಟಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ ಎಂಬುದು ಸಮೀೆಯ ಮೂಲಕ ತಿಳಿಯಲಿದೆ ಎಂದು ತಿಳಿಸಿದರು.
ಸರ್ಕಾರವು ಮಹತ್ವಕಾಂೆಯ ಸಮೀೆಯನ್ನು ಕೈಗೆತ್ತಿಕೊಂಡಿದೆ. ಇದು ಜಾತಿ ಗಣತಿ ಸಮೀೆ ಅನ್ನುವುದಕ್ಕಿಂತ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಸಮೀೆ ನಡೆಯುತ್ತಿದೆ. ಇದರಲ್ಲಿ ಜಾತಿ ಗಣತಿಯು ಸಿಗುತ್ತದೆ. ಯಾವುದೇ ರೀತಿ ಹೇಳಿಕೆಗಳಿಗೆ ಸಾರ್ವಜನಿಕರು ಕಿವಿಗೋಡದೆ ಗಣತಿದಾರರಿಗೆ ಮಾಹಿತಿ ಒದಗಿಸಬೇಕು ಎಂದು ಸಲಹೆ ನೀಡಿದರು.
ಸಮೀೆಯು ನಡೆಯುವ ಅವಧಿಯಲ್ಲಿ ಗಣತಿದಾರರು ಮನೆ ಬಾಗಿಲಿಗೆ ಬಂದು ಮಾಹಿತಿ ಕಲೆ ಹಾಕಲಿದ್ದಾರೆ. ಡಂಬಾಚಾರಕ್ಕೆ ಸುಳ್ಳು ಮಾಹಿತಿ ನೀಡಬಾರದು, ಸೈಟ್, ಜಮೀನು, ವಾಹನ, ಬಂಗಾರ ಹೀಗೆ ಇಲ್ಲದೆ ಇರುವುದನ್ನು ಬರೆಸುವುದು ಬೇಡ. ಸತ್ಯ ಮಾಹಿತಿ ನೀಡಬೇಕು. ನಿಸ್ಪಕ್ಷಪಾತ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಮೀೆ ಮುಗಿದ ನಂತರ ಆಯೋಗದ ಮೂಲಕ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆಯಾಗಲಿದೆ. ಇದರಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವವರ ವಸ್ತುಸ್ಥಿತಿ ಗೊತ್ತಾಗಲಿದ್ದು, ಅವರ ಅಭಿವೃದ್ಧಿಗಾಗಿ ಪೂರಕವಾದ ಯೋಜನೆ ರೂಪಿಸಲು ಸರ್ಕಾರಗಳಿಗೆ ಅನುಕೂಲವಾಗುತ್ತದೆ. ಆರ್ಥಿಕವಾಗಿ ಶಕ್ತಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯೆ ಲಕ್ಷಿ$್ಮ ದೇವಮ್ಮ, ಉಪಾಧ್ಯೆ ಸಂಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ೈರೋಜ್ ಖಾನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ, ಪೌರಾಯುಕ್ತ ನವೀನ್ ಚಂದ್ರ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಕಂದಾಯ ಅಧಿಕಾರಿ ವೇಣು ಇದ್ದರು.