'ಧೂಮ್- ಭಾಗ 4' ರಲ್ಲಿ ಕಾಲಿವುಡ್ ನಟ ಸೂರ್ಯ! ಇದು ನಿಜವೇ?

Surya (8)
Published on

ಮುಂಬೈ: ಬಾಲಿವುಡ್​ನಲ್ಲಿ ಸೆನ್ಸೇಷನ್​ ಸೃಷ್ಟಿಸಿ 'ಧೂಮ್' ಸರಣಿಯ ಚಿತ್ರಗಳು ಯಶಸ್ವಿಯಾಗಿದ್ದು ತಿಳಿದ ಸಂಗತಿಯೇ. 2004 ರಲ್ಲಿ 'ಧೂಮ್' ಬಿಡುಗಡೆಯಾಗಿದ್ದು, ಬಳಿಕ ಮೂರು ಉತ್ತರಭಾಗಗಳಾಗಿ ಬಂದು ಪ್ರೇಕ್ಷಕರನ್ನು ಸೆಳೆದು ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಕಲೆಕ್ಷನ್​ ಮಾಡಿದ್ದವು.

ಇದೇ ಪಟ್ಟಿಗೆ ಈಗ 'ಧೂಮ್ 4' ಸೇರಿಕೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕಾಗಿ ಯಶ್ ರಾಜ್ ಫಿಲಂಸ್ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ‘ಧೂಮ್, ಭಾಗ 2, 3’ ಚಿತ್ರಕ್ಕೆ ಕಥೆ ಕೊಟ್ಟಿರುವ ಆದಿತ್ಯ ಚೋಪ್ರಾ ಈ ಚಿತ್ರಕ್ಕೂ ಈಗಿನ ಟ್ರೆಂಡ್ ಗೆ ಅನುಗುಣವಾಗಿ ರಚಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.

ಸದ್ಯ ಧೂಮ್​ 4ಕ್ಕೆ ಸಂಬಂಧಿಸಿದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ಕಾಲಿವುಡ್ ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಚಿತ್ರತಂಡ ಸೂರ್ಯ ಅವರನ್ನು ಸಂಪರ್ಕಿಸಿದ್ದು, ಅವರು ವಿಲನ್ ಪಾತ್ರದಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಆದರೆ ಅಧಿಕೃತ ಘೋಷಣೆಯೊಂದೇ ಬಾಕಿ ಎಂದೂ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿದೆ.

ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ನಟಿಸುವುದು ಸೂರ್ಯಗೆ ಹೊಸದೇನಲ್ಲ. '24' ಮತ್ತು 'ವಿಕ್ರಮ್' ಚಿತ್ರಗಳಲ್ಲಿ ಅವರು ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. 'ವಿಕ್ರಮ್' ಚಿತ್ರದಲ್ಲಿ ರೋಲೆಕ್ಸ್ ಆಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಡ್ರಗ್ಸ್ ಗ್ಯಾಂಗ್ ನಾಯಕನಾಗಿ ಅವರ ಅಭಿನಯ ಎಲ್ಲರ ಮನಸೆಳೆದಿತ್ತು. ಹೀಗಾಗಿ ಅವರು ಧೂಮ್​ 4ರಲ್ಲಿ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡರೆ ಅಚ್ಚರಿಪಡಬೇಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net