ಕರೊನಾ ಎಂಬ ದುರಾದೃಷ್ಟ ಆಮದಾಗಿದ್ದರೆ ಅದೃಷ್ಟವೊಂದು ರಫ್ತಾಗಿದೆ ಎಂದ ಸಚಿವ

Suresh kumar Phone inn (2)
Published on

ಬೆಂಗಳೂರು: ಕರೊನಾ ವೈರಸ್​ ಚೀನಾಕ್ಕೆ ಮಾತ್ರ ಸೀಮಿತವಾಗದೆ ವಿಶ್ವಾದ್ಯಂತ ಹರಡಿಕೊಂಡಿದೆ. ಪ್ರಪಂಚದ 118 ದೇಶಗಳಲ್ಲಿ ವೈರಸ್​ ಪತ್ತೆಯಾಗಿದ್ದು, ವೈರಸ್​ ಹರಡದಿರುವಂತೆ ಅನೇಕ ಮುಂಜಾಗೃತಾ ಕ್ರಮಗಳನ್ನು ತೆಗಗೆದುಕೊಳ್ಳಲಾಗುತ್ತಿದೆ. ದುರಾದೃಷ್ಟವಾಗಿ ಬಂದಿರುವ ಈ ವೈರಸ್​ ಜತೆಗೆ ಒಂದು ಅದೃಷ್ಟವೂ ನಡೆದಿದ್ದು ಅದು ಏನೆಂದು ಸಚಿವ ಸುರೇಶ್​ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಇರುವ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಇಂದು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಕರೊನಾ ವೈರಸ್​ ಬಗ್ಗೆ ಒಂದು ವಿಶೇಷ ಟ್ವೀಟ್​ ಮಾಡಿದ್ದಾರೆ. "ದುರದೃಷ್ಟವೆಂದರೆ ನಮಗೆ ಕರೊನಾ ವೈರಸ್​ ಪಿಡುಗು ಆಮದಾಗಿರುವುದು, ಅದೃಷ್ಟವೆಂದರೆ ನಮ್ಮ ನಮಸ್ತೆ ಬೇರೆ ದೇಶಗಳಿಗೆ ರಫ್ತು ಆಗಿರುವುದು ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಂಪಂಚದಾದ್ಯಂತ ಕರೊನಾ ವೈರಸ್​ನ ಭೀತಿ ಹೆಚ್ಚಾಗಿದ್ದು, ಹಲವು ದೇಶಗಳಲ್ಲಿ ಹ್ಯಾಂಡ್​ ಶೇಕ್​ ಬದಲಾಗಿ ನಮಸ್ತೆ ಹೇಳಲಾಗುತ್ತಿದೆ. ಭಾರತೀಯ ಸಂಸ್ಕೃತಿಯ ನಮಸ್ತೆ ಇದೀಗ ವಿದೇಶಿಗರಿಗೂ ರೂಢಿಯಾಗಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net