'ಶ್ವಾಸಕೋಶಕ್ಕೆ ಸೋಂಕು ಹೆಚ್ಚಾಗಿ ತಗುಲಿದೆ..ಸದ್ಯ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದೇನೆ...'

Suresh Kumar 10 March 20
Published on

ಕರೊನಾ ಸೋಂಕಿಗೆ ಒಳಗಾಗಿ, ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್ ಅವರು ನಿನ್ನೆ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಆದರೆ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಟೋಬರ್​ 5ರಂದು ನನ್ನಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಆಗ ನಾನು ಹೋಂ ಐಸೋಲೇಶನ್​ಗೆ ಒಳಗಾಗಿ, ವೈದ್ಯರು ಸೂಚಿಸಿದ್ದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ಅಕ್ಟೋಬರ್​ 10ರಂದು ನನ್ನ ಮನೆಗೆ ಬಂದ ವೈದ್ಯರೋರ್ವರು ನನ್ನ ಉಸಿರಾಟದಲ್ಲಿ ವ್ಯತ್ಯಾಸ ಆಗುತ್ತಿರುವುದನ್ನು ಗಮನಿಸಿ ತಕ್ಷಣ ಪರೀಕ್ಷೆಗೆ ಒಳಗಾಗಿ ಎಂದರು. ಅವರ ಸೂಚನೆ ಮೇರೆಗೆ ಸಿಟಿ ಸ್ಕ್ಯಾನ್​ಗೆ ಒಳಗಾದೆ.

ಆಗ ನನ್ನ ಶ್ವಾಸಕೋಶಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಸೋಂಕು ತಗುಲಿರುವುದು ಗೊತ್ತಾಯಿತು. ನನಗೆ ಇನ್ನೂ ಎರಡೂ ವಾರ ಎಲ್ಲಿಯೂ ಹೋಗಬಾರದು ಎಂಬ ಷರತ್ತಿನ ಮೇಲೆ ಬಿಡುಗಡೆ ಮಾಡಿದ್ದಾರೆ. ನಾನಿನ್ನು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net