ಕರೊನಾ ಸೋಂಕಿನಿಂದ ಮೃತಪಟ್ಟ ಮೊದಲ ಕೇಂದ್ರ ಸಚಿವ ಸುರೇಶ್ ಅಂಗಡಿ

Suresh Angadi
Published on

ಬೆಂಗಳೂರು: ಕರೊನಾ ಸೋಂಕು ದೃಢಪಟ್ಟು 12 ದಿನಗಳಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮೃತಪಟ್ಟಿದ್ದು, ಅವರು ಕೋವಿಡ್-19 ವೈರಸ್‌ಗೆ ಬಲಿಯಾದ ಮೊದಲ ಕೇಂದ್ರ ಸಚಿವರಾಗಿದ್ದಾರೆ.

ಸೆ. 11ರಂದು ಅವರಿಗೆ ಸೋಂಕು ದೃಢಪಟ್ಟಿತ್ತು. ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂಗಡಿ ಅವರು ಕರೊನಾ ಸೋಂಕಿಗೆ ಬಲಿಯಾದ ಕರ್ನಾಟಕದ ಎರಡನೇ ಸಂಸದರು. ಇತ್ತೀಚೆಗಷ್ಟೆ ರಾಜ್ಯಸಭಾ ಬಿಜೆಪಿ ಸದಸ್ಯ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net