ಪತ್ನಿ ಅಗತ್ಯತೆಗಾಗಿ ಬೆಳ್ಳಂಬೆಳಗ್ಗೆ ಹೀಗೊಂದು ಪತ್ರ..ಪತಿ ಕರಣ್ ಬಗ್ಗೆ ಸುರಭಿ ಹೇಳಿದ್ದೇನು?

karan
Published on

ಮುಂಬೈ: ಪತ್ನಿ ಮೇಲೇಳುವಷ್ಟರಲ್ಲಿ ಆಕೆಯ ಅಗತ್ಯತೆಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ, ಅದರ ಸಂಪೂರ್ಣ ವಿವರವನ್ನು ಪತ್ರದಲ್ಲಿ ಮುದ್ದಾದ ಅಕ್ಷರಗಳಲ್ಲಿ ಬರೆದಿಟ್ಟು ತನ್ನ ಕೆಲಸಕ್ಕೆ ಹೊರಡುವ ಪತಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..ಹೌದು ಕೈಹಿಡಿದ ತನ್ನ ಮನದರಸಿಗೆ ಬೆಳ್ಳಂಬೆಳಗ್ಗೆ ಇಂತಹ ಪ್ರೀತಿಪೂರ್ವಕ ಸೇವೆಯನ್ನು ಕರಣ್​ ಶರ್ಮಾ ಒದಗಿಸುತ್ತಿದ್ದಾರೆ. ಪತ್ನಿ ನಟಿ ಸುರಭಿ ಚಂದನಾ ಪತಿಯ ಉದ್ದೇಶವನ್ನು ಮೆಚ್ಚಿ ನಿಮ್ಮ ಉದ್ದೇಶಕ್ಕೆ ಧನ್ಯವಾದ ಎಂದು ಬಣ್ಣಿಸುತ್ತಿದ್ದಾಳೆ.

ಕರಣ್ ಶರ್ಮಾ ಇತ್ತೀಚೆಗೆ ಜೈಪುರದಲ್ಲಿ ನಡೆದ ಭವ್ಯ ವಿವಾಹ ಸಮಾರಂಭದಲ್ಲಿ ಸುರಭಿಯೊಂದಿಗೆ ಏಳುಹೆಜ್ಜೆ ಹಾಕಿದ್ದು, ಆ ಮೂಲಕ ಅವರ 13 ವರ್ಷದ ಪ್ರಣಯವನ್ನು ಕೊನೆಗೊಳಿಸಿಕೊಂಡರು. ಸುದೀರ್ಘ ಕಾಲದ ಪ್ರೀತಿಯ ನಡುವೆಯೂ ಕರಣ್ ಸುರಭಿಯನ್ನು ಓಲೈಸುವುದನ್ನು ಮುಂದುವರೆಸುತ್ತಿರುವುದಕ್ಕೆ ಆಕೆ ಕೊಂಡಾಡುತ್ತಿದ್ದಾಳೆ. ಬೆಳ್ಳಂಬೆಳಗ್ಗೆ ಆಕೆ ಸವಿನಿದ್ರೆಯಿಂದ ಮೇಲೇಳುವಷ್ಟರಲ್ಲಿ ನೀರು, ಕಾಫಿ, ತಿಂಡಿಯಂತಹ ಸೇವೆಗಳನ್ನು ಆಕೆಗೆ ಸಿಗುವಂತೆ ಮಾಡಿ ಪತ್ರದಲ್ಲಿ ಅಗತ್ಯವಾಗಿ ಸ್ವೀಕರಿಸುವಂತೆ ನಿವೇಧಿಸಿರುತ್ತಾನೆ. ತಾನು ಜಿಮ್​ನಿಂದ ಬಂದ ನಂತರ ಕಾಫಿ ತಯಾರಿಸಿಕೊಡುವ ಭರವಸೆ ನೀಡುತ್ತಾನೆ.

ಇನ್ನು ಕರಣ್ ಬರೆದ ಹೃತ್ಪೂರ್ವಕ ಟಿಪ್ಪಣಿಯ ಪತ್ರವನ್ನು ಸುರಭಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟ್ ಮಾಡಿ ಪ್ರೀತಿಯ ಒಂದು ನೋಟವನ್ನು ಹಂಚಿಕೊಂಡಿದ್ದಾಳೆ. ಕರಣ್‌ನನ್ನು ಪ್ರೀತಿಯಿಂದ 'ಗಂಡನ ಗುರಿಗಳು' ಎಂದು ಉಲ್ಲೇಖಿಸಿದ್ದಾಳೆ. ಎಂಬಿಎ ವ್ಯಾಸಂಗ ಮಾಡುತ್ತಿದ್ದಾಗ ಸುರಭಿ ಮತ್ತು ಕರಣ್‌ ಮೊದಲ ಬಾರಿಗೆ ಭೇಟಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net