ಸೇವೆಯಿಂದಲೇ ಸಮಾಧಾನ: ಬೆಕ್ಕಿನ ಕಲ್ಮಠ ಶ್ರೀ ಅನಿಸಿಕೆ

surabhi
Published on

ಶಿವಮೊಗ್ಗ: ಸೇವೆಯಿಂದ ದೊರೆಯುವ ಸಮಾಧಾನ, ಸಂತೋಷ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಸಮಾಜಮುಖಿಯಾಗಿ ನಡೆದುಕೊಳ್ಳಬೇಕೆಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಸುರಭಿ ಸೇವಾ ಚಾರಿಟಬಲ್ ಟ್ರಸ್ಟ್ ಮಹಿಳಾ ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಿ ಅಶೀರ್ವಚನ ನೀಡಿದ ಶ್ರೀಗಳು, ಪ್ರಕೃತಿಯಿಂದ ಎಲ್ಲವನ್ನೂ ಪಡೆದಿರುವ ನಾವು ಮರಳಿ ಪ್ರಕೃತಿಗೆ ಏನು ನೀಡಿದ್ದೇವೆ ಎಂಬುದನ್ನು ಚಿಂತನೆ ಮಾಡಬೇಕು. ಸಮಾಜ ಸೇವೆ ಮೂಲಕ ಕೊಡುಗೆ ನೀಡಬೇಕೆಂದರು.

ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸುರಭಿ ಸೇವಾ ಚಾರಿಟಬಲ್ ಟ್ರಸ್ಟ್‌ನ ಮಹಿಳೆಯರು ಸಮಾಜಸೇವೆಗಾಗಿ ಸಂಘಟಿತರಾಗಿರುವುದು ಸಂತಸದ ಸಂಗತಿಯಾಗಿದೆ. ಸಾಧನೆಯ ಹಾದಿಯಲ್ಲಿ ಛಲದಿಂದ ಸಾಗಿರುವ ಮಹಿಳೆಯರ ಆತ್ಮವಿಶ್ವಾಸ ಮಾದರಿಯಾಗಿದೆ ಎಂದರು.

ಎಂಎಡಿಬಿ ಮಾಜಿ ಅಧ್ಯಕ್ಷ ಎ. ಎಸ್. ಪದ್ಮನಾಭ ಭಟ್, ಪತ್ರಕರ್ತ ಎಸ್.ಚಂದ್ರಕಾಂತ್, ಸಮನ್ವಯ ಟ್ರಸ್ಟ್‌ನ ಕಾಶಿ, ಸುರಭಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಸ್.ಜಿ.ರಾಮಚಂದ್ರ, ಸುರಭಿ ಸೇವಾ ಸೇವಾ ಟ್ರಸ್ಟ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇವತಿ ಸತೀಶ್ ಮುಂತಾದವರಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net