

ಪುಣೆ: ಮುಂದಿನ 15 ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರವಾದ ಬೆಳವಣಿಗೆಯಾಗಲಿದೆ ಎಂದು ಸಂಸದೆ ಸುಪ್ರಿಯಾ ಸುಲೆ ಭವಿಷ್ಯ ನುಡಿದಿದ್ಧಾರೆ. ‘
ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತು ಅವರ ಬೆಂಬಲಿಗ ಶಾಸಕರು ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ ಅವರ ಪ್ರತಿಕ್ರಿಯೆ ಹೀಗಿದೆ.
ಇನ್ನು ಎನ್ಸಿಪಿ ನಾಯಕ ಅಜಿತ್ ಪವಾರ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ಮುಂದಿನ 15 ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿ ರಾಜಕೀಯದಲ್ಲಿ ಮಹತ್ತರವಾದ ಬೆಳವಣಿಗೆಯಾಗಲಿದೆ ಎಂದು ಹೊಸ ಬಾಂಬ್ ಒಂದನ್ನು ಸ್ಪೋಟಿಸಿದ್ಧಾರೆ.
ಎಲ್ಲದ್ದಕ್ಕೂ ನನ್ನ ಅಣ್ಣ(ಅಜಿತ್ ಪವಾರ್)ನನ್ನು ಏಕೆ ಹೊಣೆಗಾರನನ್ನಾಗಿ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಮುಖಬೆಲೆಯ ನಾಣ್ಯಕ್ಕೆ ಬೆಲೆ ಜಾಸ್ತಿ ಅದರ ಕುರಿತು ಎಲ್ಲರೂ ಹೆಚ್ಚಾಗಿ ಮಾತನಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಎನ್ಸಿಪಿಯ ಕೆಲ ಶಾಸಕರು ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದೇ ಇರುವ ಕುರಿತು ಪ್ರತಿಕ್ರಿಯಿಸಿ ಎಲ್ಲಾರು ನಮ್ಮ ಸಂಪರ್ಕದಲ್ಲಿದ್ಧಾರೆ. ನಾನೂ ಎಲ್ಲಾ ಶಾಸಕರೊಂದಿಗೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ಸಂಸದೆ ಸುಪ್ರಿಯಾ ಸುಲೆ ತಿಳಿಸಿದ್ಧಾರೆ.