ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪಿಗಳಿಗೆ ಜಾಮೀನು ನೀಡಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟ ಸಂದೇಶ | Supreme Court

Supreme Court
Published on

ದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪಿತನಾಗಿರುವ ವ್ಯಕ್ತಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದ್ದು, ಈ ಮೂಲಕ ನಿನ್ನೆಯ ಕಾರ್​​ ಸ್ಫೋಟಕ್ಕೆ ಕಾರಣರಾದವರಿಗೂ ಈ ಮೂಲಕ ಪರೋಕ್ಷ ಸಂದೇಶ ರವಾನಿಸಲಾಗಿದೆ.

ಈ ಹಿಂದೆ ಪ್ರಚೋದನಕಾರಿ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಆರೋಪಿಯೊಬ್ಬ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಿದ್ದ, ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಈ ಅಭಿಪ್ರಾಯಕ್ಕೆ ಬಂದಿದೆ.

ನಿನ್ನೆಯ ಘಟನೆಯ ಬಳಿಕ ಈ ಪ್ರಕರಣವನ್ನು ವಾದಿಸಲು ಇದು ಅತ್ಯುತ್ತಮ ಸಮಯ ಅಲ್ಲದಿರಬಹುದು ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ದ್ವೀಸದಸ್ಯ ಪೀಠವು, ಸ್ಪಷ್ಟ ಸಂದೇಶವನ್ನು ಕಳುಹಿಸಲು ಇದು ಅತ್ಯುತ್ತಮ ಸಂದರ್ಭ ಎಂದರು. ಈ ಪ್ರಕರಣದ ಆರೋಪಿಯು ಇಸ್ಲಾಮಿಕ್ ಸ್ಟೇಟ್ ಧ್ವಜ ಹೋಲುವ ಧ್ವಜವನ್ನು ಹೊಂದಿದ್ದ ವಾಟ್ಸಾಪ್ ಗುಂಪಿನ ಸದಸ್ಯನಾಗಿದ್ದಾನೆ ಎಂದು ಪೀಠವು ಗಮನಿಸಿದೆ.

ವಶಪಡಿಸಿಕೊಂಡ ವಸ್ತುಗಳ ಸ್ವರೂಪ ಮತ್ತು ಆರೋಪಿಗಳ ಆನ್‌ಲೈನ್ ಸಂಪರ್ಕ, ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ನಿರಂತರ ಕಸ್ಟಡಿಯನ್ನು ಬಯಸುತ್ತವೆ ಎಂದು ಪೀಠ ಈ ವೇಳೆ ತಿಳಿಸಿದ್ದು. ಫಿದಾಯೀನ್ ಶೈಲಿಯ ಭಯೋತ್ಪಾದಕ ದಾಳಿ ಎಂದು ಶಂಕಿಸಲಾಗುತ್ತಿರುವ ಕೆಂಪು ಕೋಟೆ ಕಾರು ಸ್ಫೋಟದ ತನಿಖೆಯನ್ನು ತನಿಖಾಧಿಕಾರಿಗಳು ತನಿಖೆ ಕೈಗೊತ್ತಿಕೊಂಡ ವೇಳೆ ನ್ಯಾಯಾಲಯ ಈ ಅಭಿಪ್ರಾಯಕ್ಕೆ ಬಂದಿದೆ.

ದೆಹಲಿ ಸ್ಫೋಟ

ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆ ಪ್ರದೇಶದ ಅನೇಕ ವಾಹನಗಳು ಹಾನಿಗೊಳಗಾಗಿದ್ದು. ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿರುವ ಕಾಶ್ಮೀರಿ ವೈದ್ಯ ಮೊಹಮ್ಮದ್ ಉಮರ್ ಸ್ಫೋಟದ ಸಮಯದಲ್ಲಿ ಕಾರನ್ನು ಚಲಾಯಿಸುತ್ತಿದ್ದರು ಎಂದು ವರದಿಯಿಂದ ತಿಳಿದುಬಂದಿದೆ.

ದೆಹಲಿಯಲ್ಲಿ ಸ್ಫೋಟ ಸಂಭವಿಸುವ ಕೆಲವೇ ಗಂಟೆಗಳ ಮೊದಲು, ನೆರೆಯ ಫರಿದಾಬಾದ್ ಪೊಲೀಸರು 2,900 ಕೆಜಿ ಸ್ಫೋಟಕಗಳು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದು, ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಉಮರ್ ತನ್ನ ಇಬ್ಬರು ಸಹಚರರೊಂದಿಗೆ ದಾಳಿಯ ನಡೆಸಲು ಚಿಂತನೆ ನಡೆಸಿದ್ದ, ಆದರೆ, ಸೋಮವಾರ ಮುಂಜಾನೆ ಫರಿದಾಬಾದ್‌ನಲ್ಲಿ ಸಹಚರರ ಬಂಧನದ ಬಳಿಕ ಅದನ್ನು ಏಕಾಂಗಿಯಾಗಿ ನಡೆಸಿದ ಎಂದು ಮೂಲಗಳು ತಿಳಿಸಿವೆ.

ಉಮರ್ ತನ್ನ ಸಹಚರರೊಂದಿಗೆ ಕಾರಿನಲ್ಲಿ ಡಿಟೋನೇಟರ್ ಇರಿಸಿ ಭಯೋತ್ಪಾದಕ ಕೃತ್ಯ ಎಸಗಿದ್ದಾನೆ, ಜನರಿಂದ ತುಂಬಿದ್ದ ಸಂದರ್ಭ ನೋಡಿಕೊಂಡು ಈ ಕೆಲಸ ನಡೆಸಿರುವ ಸಾಧ್ಯತೆಗಳಿದ್ದು, ಘಟನೆ ಸಂಭವಿಸಿದ ಹೆಚ್ಚಿನ ತೀವ್ರತೆಯ ಸ್ಫೋಟದಲ್ಲಿ ANFO (ಅಮೋನಿಯಂ ನೈಟ್ರೇಟ್ ಇಂಧನ ತೈಲ) ಅನ್ನು ಬಳಸಲಾಗಿದೆ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net