ಭಾರತ ವಿರೋಧಿ ಉದ್ದೇಶವಿಲ್ಲದಿದ್ದರೆ ಪಾಕ್​ ಬೆಂಬಲಿಸುವುದು ಅಪರಾಧವಲ್ಲ: Allahabad High Court

dk - 2025-07-12T121340.403
Published on

Allahabad High Court: ಭಾರತ ಅಥವಾ ಯಾವುದೇ ಘಟನೆಯನ್ನು ಉಲ್ಲೇಖಿಸದೆ ಪಾಕಿಸ್ತಾನವನ್ನು ಬೆಂಬಲಿಸುವುದು ಪ್ರಾಥಮಿಕವಾಗಿ ದೇಶದ್ರೋಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್​ ಹೇಳಿದೆ. ಈ  ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿಸಿ ಪೋಸ್ಟ್​​ ಮಾಡಿದ್ದ ಆರೋಪಿಗೆ ಶನಿವಾರ ಷರತ್ತುಬದ್ಧ ಜಾಮೀನು ನೀಡಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪು

ಒಬ್ಬ ವ್ಯಕ್ತಿಯು ಭಾರತ ಅಥವಾ ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸದೆ ಪಾಕಿಸ್ತಾನವನ್ನು ಮಾತ್ರ ಬೆಂಬಲಿಸಿದರೆ, ಅದು ಪ್ರಾಥಮಿಕವಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಸೆಕ್ಷನ್ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ಶಿಕ್ಷಿಸುತ್ತದೆ ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಅವರ ಏಕ ಪೀಠ ಹೇಳಿದೆ.

ಆರೋಪಿ ಪೋಸ್ಟ್​ ಮಾಡಿದ್ದೇನು?

ಅರ್ಜಿದಾರರಾದ 18 ವರ್ಷದ ರಿಯಾಜ್ ಮೇ.25 ರಿಂದ ಜೈಲಿನಲ್ಲಿದ್ದಾರೆ. ಅರ್ಜಿದಾರರು ಇನ್‌ಸ್ಟಾಗ್ರಾಮ್‌ನಲ್ಲಿ "ಏನೇ ಆದರೂ, ನಾನು ಪಾಕಿಸ್ತಾನವನ್ನು ಮಾತ್ರ ಬೆಂಬಲಿಸುತ್ತೇನೆ" ಎಂದು ಬರೆದಿದ್ದಾರೆ. ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆಗಾಗಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಜಾಮೀನು ಪಡೆಯಲು ಅರ್ಹರು. ಈ ಪೋಸ್ಟ್ ದೇಶದ ಘನತೆ ಅಥವಾ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿಲ್ಲ, ಏಕೆಂದರೆ ಅದರಲ್ಲಿ ಭಾರತದ ಧ್ವಜ, ದೇಶದ ಹೆಸರು ಅಥವಾ ಭಾರತವನ್ನು ಅಗೌರವಿಸುವ ಯಾವುದೇ ಚಿತ್ರ ಇರಲಿಲ್ಲ ಎಂದು ವಾದಿಸಲಾಯಿತು.

ಒಂದು ದೇಶವನ್ನು ಬೆಂಬಲಿಸುವುದು, ಅದು ಭಾರತದ ಶತ್ರುವಾಗಿದ್ದರೂ ಸಹ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 152 ರ ನಿಬಂಧನೆಗಳ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net