

ಕೇಂದ್ರ ಸರ್ಕಾರದ ಮೂರು ಮಾದರಿ ಕಾನೂನುಗಳನ್ನು ಜಾರಿಗೆ ತರುವ ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಪ್ರಕಟಿಸಿದ್ದು, ಆ ಮೂಲಕ ಕಾಯ್ದೆ ಅನುಷ್ಠಾನಕ್ಕೆ ತರಲು ರಾಜ್ಯಗಳಿಗೆ ಹುರಿದುಂಬಿಸಿದ್ದಾರೆ.
ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ-2016, ಮಾದರಿ ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರುಕಟ್ಟೆ (ಉತ್ತೇಜನ ಹಾಗೂ ನೆರವು)-2017 ಮತ್ತು ಮಾದರಿ ಕೃಷಿ ಉತ್ಪನ್ನ ಮತ್ತು ಜಾನುವಾರು ಒಪ್ಪಂದ ಕೃಷಿ ಮತ್ತು ಸೇವೆಗಳು (ಪ್ರೋತ್ಸಾಹ ಹಾಗೂ ಸಹಾಯ)-2018 ಈ ಮೂರು ಕಾಯ್ದೆ ಜಾರಿಗೊಳಿಸುವ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಸಿಗಲಿದೆ.
ರೈತರ ಪರಂಪರಾಗತ ಕೃಷಿ ಪದ್ಧತಿ ರಕ್ಷಣೆ ಜತೆಗೆ ಸುಸ್ಥಿರ ಅಭಿವೃದ್ಧಿ, ಜೀವನಮಟ್ಟ ಸುಧಾರಣೆ, ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಳ, ಪಾರದರ್ಶಕ ವಹಿವಾಟು ಇತ್ಯಾದಿ ಹಲವು ಲಾಭಗಳಾಗಲಿವೆ ಎನ್ನುವುದು ಕೇಂದ್ರದ ಪ್ರತಿಪಾದನೆ.
ಕೃಷಿಕ್ಷೇತ್ರದ ಬಿಕ್ಕಟ್ಟು ಬಗೆಹರಿಸುವ ಬದಲು ಹೆಚ್ಚಿಸುತ್ತವೆ ಎಂಬ ಕಾರಣಕ್ಕೆ ಕೇಂದ್ರದ ಈ ಕಾಯ್ದೆಗಳ ಜಾರಿಗೆ ಹಲವು ರಾಜ್ಯಗಳು ಹಿಂದೇಟು ಹಾಕುತ್ತಿವೆ. ಆಂಧ್ರ ಸರ್ಕಾರ ಕೃಷಿ ಭೂಮಿ ಗುತ್ತಿಗೆ ಕಾನೂನು ಬದಲಿಗೆ ಸಾಗುವಳಿ ಚೀಟಿ ವ್ಯವಸ್ಥೆ ಅಳವಡಿಸಿಕೊಂಡಿರುವುದು ಇದಕ್ಕೊಂದು ಉದಾಹರಣೆ.
ಕೃಷಿಭೂಮಿ, ರೈತರು, ಕೂಲಿಕಾರ್ವಿುಕರು, ಅವಲಂಬಿತ ಕುಟುಂಬಗಳ ಹಿತ ಕಾಪಾಡುವುದು, ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಈ ಕಾಯ್ದೆಗಳ ಉದ್ದೇಶವಾಗಿದೆ.
ಕೃಷಿಭೂಮಿ ಗುತ್ತಿಗೆ ಕಾಯ್ದೆ ಪ್ರಯೋಜನ: ಕೃಷಿಭೂಮಿ ಗುತ್ತಿಗೆದಾರನಿಗೆ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದಾಗ ಪರಿಹಾರ ಸಿಗುತ್ತದೆ. ? ಬೆಳೆಗೆ ವಿಮೆ ಮಾಡಿಸಿಕೊಳ್ಳಬಹುದು. ? ಸರ್ಕಾರದ ಸಹಾಯಧನ ಲಭಿಸುತ್ತದೆ. ? ಸಾಲಬಾಧೆ ತಾಳದೇ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಲಭಿಸುತ್ತದೆ.
ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರುಕಟ್ಟೆ ಕಾಯ್ದೆ ಲಾಭ: ? ಕೃಷಿ ಉತ್ಪನ್ನಗಳು ಹಾಗೂ ಜಾನುವಾರುಗಳ ಆನ್ಲೈನ್ ವಹಿವಾಟು. ? ಪಾರದರ್ಶಕ ಮತ್ತು ಸ್ಪರ್ಧಾತ್ಮಕ ದರ ಹಾಗೂ ನಗದು ಪಾವತಿ. ? ಏಕರೂಪ ಮಾರುಕಟ್ಟೆ ವ್ಯವಸ್ಥೆ. ? ನೇರ ಖರೀದಿ ಕೇಂದ್ರ ಹಾಗೂ ಹಳ್ಳಿಗಳಿಗೂ ಮಾರುಕಟ್ಟೆ ವಿಸ್ತರಣೆ.
ಕೃಷಿ ಮತ್ತು ಜಾನುವಾರು ಕೃಷಿ ಒಪ್ಪಂದ ಮತ್ತು ಸೇವೆಗಳು (ಕಾಂಟ್ರಾ್ಯಕ್ಟ್ ಫಾರ್ವಿುಂಗ್) ಕಾಯ್ದೆ: ? ಉತ್ಪಾದನೆ ಅಥವಾ ಪಾಲನೆಗೆ ಮುನ್ನ ರೈತರು ಹಾಗೂ ಖರೀದಿದಾರರ ನಡುವೆ ಒಡಂಬಡಿಕೆ.
ತಾಲೂಕು ಮಟ್ಟದಲ್ಲಿ ಶೈತ್ಯಾಗಾರ
ರೈತರು ಬೆಳೆದ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಉತ್ತಮ ದರ ಸಿಗಲು ಅನುಕೂಲವಾಗುವಂತೆ ಶೈತ್ಯಾಗಾರಗಳನ್ನು ತಾಲೂಕು ಮಟ್ಟದಲ್ಲಿ ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಕ್ರಮ ರೈತರಿಗೆ ವರವಾಗಿ ಪರಿಣಮಿಸಲಿದೆ. ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆದರೂ, ಅವುಗಳ ಸಂಗ್ರಹ, ಸಂಸ್ಕರಣೆಗೆ ಅವಕಾಶವಿಲ್ಲದೆ ರೈತರು ಪರದಾಡುತ್ತಿದ್ದರು ಮತ್ತು ಸಿಕ್ಕಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಿಸುತ್ತಿದ್ದರು.
ಶನಿವಾರ ಕೋಲ್ಡ್ಸ್ಟೋರೇಜ್ ಘಟಕಗಳ ಸ್ಥಾಪನೆ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ ಕೆಲ ಕ್ಷಣಗಳಲ್ಲೇ ಸರಕು ಸಾಗಣೆ ಕಂಪನಿಗಳ ಷೇರು ವಹಿವಾಟು ಏರಿಕೆ ಕಂಡವು. ಭಾರತ 162 ಮಿಲಿಯನ್ ಮೆಟ್ರಿಕ್ ಟನ್ ಅಗ್ರಿವೇರ್ ಹೌಸಿಂಗ್, ಕೋಲ್ಡ್ ಸ್ಟೋರೇಜ್ ಮತ್ತು ರೀಫರ್ ವ್ಯಾನ್ ಸೌಲಭ್ಯಗಳನ್ನು ಹೊಂದಿದೆ. ಕೃಷಿ ಉತ್ಪನ್ನಗಳ ಸಂಗ್ರಹ ಸ್ಥಳಗಳ ಮ್ಯಾಪಿಂಗ್ ಮತ್ತು ಜಿಯೊ ಟ್ಯಾಗಿಂಗ್ ಕೆಲಸವನ್ನು ನಬಾರ್ಡ್ ಮಾಡಲಿದೆ. ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ(ಡಬ್ಲ್ಯುಡಿಆರ್ಎ) ಮಾನದಂಡಗಳಿಗೆ ಅನುಗುಣವಾಗಿ ಈ ಗೋದಾಮುಗಳನ್ನು ಸ್ಥಾಪಿಸಲಾಗುತ್ತದೆ.
ಬ್ಲಾಕ್ ಹಾಗೂ ತಾಲೂಕು ಮಟ್ಟದಲ್ಲಿ ಈ ಗೋದಾಮುಗಳನ್ನು ಸ್ಥಾಪಿಸಲು ಮುಂದಿನ ದಿನಗಳಲ್ಲಿ ನೀಲಿನಕ್ಷೆ ಸಿದ್ಧಪಡಿಸಲಾಗುತ್ತದೆ. ಅಲ್ಲದೆ, ಭಾರತ ಆಹಾರ ನಿಗಮ(ಎಫ್ಸಿಐ) ಹಾಗೂ ಕೇಂದ್ರ ಉಗ್ರಾಣ ನಿಗಮ(ಸಿಬ್ಲು ್ಯ) ಕೂಡ ಅವುಗಳ ಜಾಗದಲ್ಲಿ ಗೋದಾಮುಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಿವೆ.