ಕನ್ನಡ ಬೆಳವಣಿಗೆಗೆ ವಚನಗಳು ಪೂರಕ

srb swamji
ಸೊರಬ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಉದ್ಘಾಟಿಸಿದರು. ಎಚ್.ಎನ್.ಬಸವರಾಜ್, ಈರಪ್ಪ, ಎಚ್.ಎಸ್.ಮಂಜಪ್ಪ, ಬಲೀಂದ್ರಪ್ಪ, ಎಂ.ಡಿ.ಉಮೇಶ್, ಈರೇಶ್ ಮೇಸಿ, ಪ್ರಸನ್ನಕುಮಾರ್ ಇತರರಿದ್ದರು.
Published on

ಸೊರಬ: ಕನ್ನಡ ಭಾಷೆ, ಪರಂಪರೆ, ಇತಿಹಾಸ ಬಗ್ಗೆ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ತಮ್ಮ ವಚನಗಳಲ್ಲಿ ಅರಿವು ಮೂಡಿಸುವ ಮೂಲಕ ಕನ್ನಡ ಭಾಷೆಗಳ ಬೆಳವಣಿಗೆಗೆ ಅವಿರತವಾಗಿ ಶ್ರಮವಹಿಸಿದ್ದಾರೆ ಎಂದು ಜಡೆ ಸಂಸ್ಥಾನ ಮಠದ ಹಾಗೂ ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ತಾಲೂಕು ಶಾಮಿಯಾನ, ಧ್ವನಿವರ್ಧಕ, ಬೆಳಕು ಅಲಂಕಾರ ವಸ್ತುಗಳ ಮಾಲೀಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಕನ್ನಡ ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗವೆಂದು ಭಾವಿಸಬೇಕು. ಭಾಷೆಯ ಉಳಿವಿಗಾಗಿ ಎಲ್ಲರೂ ಪ್ರಯತ್ನಿಸಬೇಕು. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಭಾಷೆಯ ಮಹತ್ವ ತಿಳಿಸಿದ್ದರು. ಜನಪದ, ದಾಸರ ವಚನ, ರಗಳೆ, ಪ್ರವಚನ, ಪುರಾಣಗಳು ಭಾಷೆಯನ್ನು ಸಮೃದ್ಧ ಹಾಗೂ ಶ್ರೀಮಂತಗೊಳಿಸುತ್ತ ಬಂದಿವೆ. ಸಹ್ಯಾದ್ರಿ ತಪ್ಪಲಿನಲ್ಲಿರುವ ನಮ್ಮ ಜಲ್ಲೆಯ ಹಿರಿಮೆ ದೊಡ್ಡದು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಗಡಿನಾಡಿನಲ್ಲಿ ಕನ್ನಡ ಭಾಷಿಕರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಕನ್ನಡಾಂಬೆಯ ಮಕ್ಕಳಾದ ನಾವು ಕನ್ನಡ ನಾಡು, ನುಡಿ ರಕ್ಷಣೆಗೆ ಕಂಕಣಬದ್ಧರಾಗಿ ಹೋರಾಡಬೇಕು ಎಂದು ತಿಳಿಸಿದರು.

ಕರವೇ ತಾಲೂಕು ಅಧ್ಯಕ್ಷ ಬಲೀಂದ್ರಪ್ಪ ಚಿಕ್ಕಾವಲಿ ಮಾತನಾಡಿ, ಕನ್ನಡ ನಾಡು-ನುಡಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕೈಗೊಂಡ ನಿರ್ಣಯಗಳು ಎಂದಿಗೂ ಅಜರಾಮರ. ಕನ್ನಡವನ್ನು ನಾವು ಬಳಸಿದಾಗ ಮಾತ್ರ ಅದು ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಲ್ಬಿರ್ ಸೇವಾ ಟ್ರಸ್ಟ್ ನ ಮೌಲಾನ ರಿಯಾಜ್ ಉಮ್ರಿ, ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ಾದರ್ ರಾಬರ್ಟ್ ಡಿ.ಮೆಲ್ಲೋ, ಶಾಮಿಯಾನ ಸಂಘದ ತಾಲೂಕು ಅಧ್ಯಕ್ಷ ಎಚ್.ಎನ್.ಬಸವರಾಜ್, ಗೌರವಾಧ್ಯಕ್ಷ ಈರಪ್ಪ ಜಡೆ, ಹಿರಿಯ ನಾಗರಿಕ ಎಚ್.ಎಸ್.ಮಂಜಪ್ಪ, ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್, ಈರೇಶ್ ಮೇಸಿ, ಪ್ರಸನ್ನಕುಮಾರ್, ಮಾಜಿ ಸದಸ್ಯೆ ಪ್ರಶಾಂತ್ ಮೇಸಿ, ಶಂಕರ್ ಶೇಟ್, ಬಾಷಾ ಸಾಬ್, ರಂಗನಾಥ, ಮೆಹಬೂಬ್, ನಾಗರಾಜ್ ಜೈನ್, ಷಣ್ಮುಖಾಚಾರ್, ಜಾವೇದ್ ಇದ್ದರು. ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net