ಮೂಢನಂಬಿಕೆಯಿಂದ ನೆಮ್ಮದಿ ಹಾಳು

anp (2)
ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಪಂನಲ್ಲಿ ನಡೆದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹುಲಿಕಲ್ ನಟರಾಜ್ ಉದ್ಘಾಟಿಸಿದರು. ಗಣಪತಿ, ಮಂಜಪ್ಪ, ರಾಜಶೇಖರ ಶೆಟ್ಟಿ ಇತರರಿದ್ದರು.
Published on

ಆನಂದಪುರ: ಮೂಢನಂಬಿಕೆಗಳು ನಿತ್ಯದ ಬದುಕನ್ನು ನರಕವನ್ನಾಗಿಸುತ್ತವೆ. ವೈಚಾರಿಕ ಬದುಕು ನೆಮ್ಮದಿ ನೀಡುತ್ತದೆ ಎಂದು ಚಿಂತಕ ಹುಲಿಕಲ್ ನಟರಾಜ್ ತಿಳಿಸಿದರು. ಯಡೇಹಳ್ಳಿ ಗ್ರಾಪಂನಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕವಡೆ ಶಾಸ, ಗಿಣಿ ಶಾಸ ಮತ್ತು ಜಾತಕ, ಭವಿಷ್ಯ ಶಾಸಗಳಿಂದ ಬದುಕು ಬದಲಾಯಿಸಲು ಸಾಧ್ಯವಿಲ್ಲ. ಭವಿಷ್ಯ ಹೇಳುವ ಜ್ಯೋತಿಷಿಗಳು ಸಹ ತಮ್ಮ ಬದುಕನ್ನು ಅರಿಯದೆ ಸಂಕಷ್ಟ ಪಡುತ್ತಿರುತ್ತಾರೆ ಎಂದರು.

ಪಂಚಾಗದ ಬದಲು ನಮ್ಮ ಪಂಚೇದ್ರಿಯಗಳ ಅರಿವು ಚೆನ್ನಾಗಿರಬೇಕು. ಮೌಢ್ಯವನ್ನು ತೊಡೆದು ಹಾಕಿ ನಮ್ಮ ಬದುಕನ್ನು ನಾವೇ ಹಸನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಾತನಾಡಿ, ಮಹಿಳೆಯರು ಸಬಲರಾಗಬೇಕು. ನಮ್ಮ ನಡೆ ವಿಜ್ಞಾನದ ಕಡೆ ಸಾಗಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ಗಣಪತಿ, ಜ್ಞಾನ ಸಹ್ಯಾದ್ರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜಪ್ಪ, ಯಡೇಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಶೇಖರ ಶೆಟ್ಟಿ, ಪಿಡಿಒ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net