ಯುಎಇಗೆ ಸೂಪರ್​ ಸ್ವೀಟ್​ ರಫ್ತು: ಏನಿದು ಗೋಲ್ಡನ್ ರೈಪ್ ಅನಾನಸ್​?

pinaple
Published on

ನವದೆಹಲಿ: ದೇಶದಲ್ಲಿ ಹಣ್ಣು ಸಾಗಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತವು 8.7 ಟನ್ ಉತ್ತಮ ಗುಣಮಟ್ಟದ ಅನಾನಸ್‌ಗಳ ಮೊದಲ ರವಾನೆಯನ್ನು ಯುಎಇಗೆ ರಫ್ತು ಮಾಡಿದೆ ಎಂದು ವಾಣಿಜ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಎಂಡಿ2 ತಳಿಯ ಅನಾನಸ್ ಅನ್ನು ಗೋಲ್ಡನ್ ರೈಪ್ ಅಥವಾ ಸೂಪರ್ ಸ್ವೀಟ್ ಎಂದೂ ಕರೆಯುತ್ತಾರೆ, ಇದು ಅಸಾಧಾರಣ ಮಾಧುರ್ಯ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಿಂಧುದುರ್ಗ ಜಿಲ್ಲೆಯಲ್ಲಿ ಇದನ್ನು ಉತ್ಪಾದಿಸಲಾಗುತ್ತದೆ.

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಈ ರವಾನೆಯನ್ನು ವ್ಯವಸ್ಥೆ ಮಾಡಿದೆ. "ಇದು ಭಾರತದ ಕೃಷಿ ರಫ್ತು ಇತಿಹಾಸದಲ್ಲಿ ಒಂದು ಪ್ರಮುಖ ಕ್ಷಣವನ್ನು ಸೂಚಿಸುತ್ತದೆ. ಜಾಗತಿಕ ಮಾರುಕಟ್ಟೆಗಳಿಗೆ ಪ್ರೀಮಿಯಂ ಗುಣಮಟ್ಟದ ಅನಾನಸ್ ಉತ್ಪಾದಿಸುವ ಮತ್ತು ಪೂರೈಸುವ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ" ಎಂದು ಅದು ಹೇಳಿದೆ.

ಎಂಡಿ2 ಅನಾನಸ್ ಅನ್ನು ಆಯ್ದ ತಳಿಗಳ ಮೂಲಕ ಡೆಲ್ ಮಾಂಟೆ 1980ರ ದಶಕದಲ್ಲಿ ಅಭಿವೃದ್ಧಿಪಡಿಸಿದೆ. ಇದು ಅತ್ಯುತ್ತಮ ಗುಣಮಟ್ಟದ ಅನಾನಸ್​​ ಆಗಿದ್ದು, ಕೋಸ್ಟರಿಕಾ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net