ಭಾರತದಲ್ಲಿ ಏ.8 ರಂದು ಸೂಪರ್​ ಮೂನ್​ ಗೋಚರ: ಭೂಮಿಯಿಂದ ಅಂದು 3 ಲಕ್ಷ 56 ಸಾವಿರ ಕಿ.ಮೀ.ದೂರದಲ್ಲಿ ಪರಿಭ್ರಮಿಸುವ ಚಂದ್ರ

supper moon
Published on

ರಾಷ್ಟ್ರದಲ್ಲಿ ಏಪ್ರಿಲ್​ 8 ರಂದು ಸೂಪರ್​ ಮೂನ್​ (ಪ್ರಕಾಶಮಾನ ಚಂದ್ರ) ಗೋಚರಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.

ಅಂದು ಬೆಳಗ್ಗೆ 8 ಗಂಟೆಗೆ ಸೂಪರ್​ ಮೂನ್​ ಗೋಚರಿಸಲಿದೆ. ಸೂರ್ಯನ ಬೆಳಕು ಇರುವುದರಿಂದ ವೀಕ್ಷಣೆಗೆ ತೊಡಕಾಗಲಿದೆ. ಏ.7 ರ ರಾತ್ರಿ ಉತ್ತರ ಅಮೆರಿಕಾ ಹಾಗೂ ಇತರ ರಾಷ್ಟ್ರಗಳಲ್ಲಿ ಕೂಡ ಪ್ರಕಾಶಮಾನ ಚಂದ್ರ ಗೋಚರಿಸಲಿದೆ.

ಸೂಪರ್ ಮೂನ್ ಎಂದರೇನು?: ಭೂಮಿಗೆ ಸಮೀಪದಲ್ಲಿ ಚಂದ್ರ ಪರಿಭ್ರಮಿಸುವಾಗ ಸಾಮಾನ್ಯ ಗಾತ್ರಕ್ಕಿಂತ ದೊಡ್ಡಗಾತ್ರದಲ್ಲಿ ಕಾಣಿಸುತ್ತದೆ. ಅಲ್ಲದೆ ಅತ್ಯಂತ ಪ್ರಕಾಶಮಾನವಾಗಿ ಕೂಡ ಕಾಣುತ್ತದೆ. ಇದನ್ನು ಸೂಪರ್​ ಮೂನ್​ ಎನ್ನಲಾಗುತ್ತದೆ. ಏಪ್ರಿಲ್​ 7ರ ರಾತ್ರಿ ಹಾಗೂ ಏಪ್ರಿಲ್​ 8ರ ಬೆಳಗ್ಗೆ ಚಂದ್ರ ಭೂಮಿಯಿಂದ 3,56, 000 ಕಿ.ಮೀ.ದೂರದಲ್ಲಿ ಪರಿಭ್ರಮಿಸುತ್ತದೆ.

ಬಹುತೇಕ ದಿನಗಳಲ್ಲಿ ಈ ಅಂತರ 3,84,000 ಕಿ.ಮೀ. ಇರುತ್ತದೆ. ಹೀಗಾಗಿ ಭೂಮಿಗೆ ಹತ್ತಿರದಲ್ಲಿ ಚಂದ್ರ ಸುತ್ತುವಾಗ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣುತ್ತದೆ. ಖಗೋಳಶಾಸ್ತ್ರಜ್ಞರ ಪ್ರಕಾರ 20 ವರ್ಷಗಳಲ್ಲಿ 79 ಬಾರಿ ಸೂಪರ್​ ಮೂನ್​ ಗೋಚರಿಸಿದೆ. ಅಂದರೆ ಸರಾಸರಿ 3 ತಿಂಗಳಿಗೊಮ್ಮೆ ಒಂದು ಸೂಪರ್​ ಮೂನ್​ ಗೋಚರಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net