ಸರ್ಕಾರ ಕೊಟ್ಟ ಪರಿಹಾರದ ಹಣದಲ್ಲಿ ಹತ್ಯೆಗೆ ಸುಪಾರಿ: ಸುನಿಲ್ ಕುಮಾರ್ ಹೇಳಿಕೆ |Money recovery ACF task

V Sunil Kumar
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಫಾಜಿಲ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿತ್ತು. ಈ ಪರಿಹಾರದ ಹಣವನ್ನು ಫಾಜಿಲ್ ಕುಟುಂಬ ಕೊಲೆಗೆ ಬಳಸಿಕೊಂಡಿದೆ. ಸುಹಾಸ್ ಶೆಟ್ಟಿ ಹತ್ಯೆಗೆ ಫಾಜಿಲ್ ಸೋದರ 5 ಲಕ್ಷ ರೂ.ಸುಪಾರಿ ನೀಡಿದ್ದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಸರ್ಕಾರ ನೀಡಿದ ಈ ಪರಿಹಾರ ಇನ್ನೆಷ್ಟು ಕೊಲೆಗೆ ಬಳಕೆಯಾಗಬೇಕು ?  ಮೊದಲು ಬಡ್ಡಿ ಸಹಿತ ಈ ಹಣ ವಸೂಲಿಯಾಗಲಿ. ಸರ್ಕಾರ ರಚಿಸುವ ಆಂಟಿ ಕಮ್ಯುನಲ್ ಫೋರ್ಸ್ ( ಎಸಿಎಫ್ ) ಅಸ್ಥಿತ್ವಕ್ಕೆ ಬಂದ ತಕ್ಷಣ ಮೊದಲು ಮಾಡಬೇಕಾದ ಕೆಲಸ ಇದಾಗಲಿ.ಇಲ್ಲವಾದರೆ ಎಸಿಎಫ್ ರಚನೆಯ ಉದ್ದೇಶ ಹಿಂದುತ್ವದ ದಮನ ಎಂಬುದು ಸಾಬೀತಾಗುತ್ತದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಂಥವರು "ನಾವೊಂದು ಕರೆ ಕೊಟ್ಟರೆ ಆರ್ ಎಸ್ ಎಸ್, ಬಿಜೆಪಿ ಕಾರ್ಯಕರ್ತರು ಓಡಾಡುವುದು ಕಷ್ಟವಾಗುತ್ತದೆ "ಎಂದು ಹೇಳಿಕೆ ಕೊಟ್ಟ ಬಳಿಕ ಜಿಹಾದಿಗಳು ಉತ್ತೇಜಿತರಾಗಿದ್ದಾರೆ. ಸುಹಾಸ್ ಶೆಟ್ಟಿಯವರ ಕೊಲೆ ಸರ್ಕಾರಿ ಪ್ರೇರಿತವೆಂದು ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net