VIDEO: ಪ್ರಾಣಿಗಳಿಗಾಗಿ ಇದೇನು ಮಾಡಿಕೊಂಡುಬಿಟ್ಟರು ಸನ್ನಿ ಲಿಯೋನ್​? ಏನಾಯಿತು ಅವರ ಬೆನ್ನಿಗೆ....?

Sunny 26 Feb 20
Published on

ಬಾಲಿವುಡ್​ ನಟಿ ಸನ್ನಿ ಲಿಯೋನ್​ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ಆ್ಯಕ್ಟಿವ್​ ಆಗಿರುತ್ತಾರೆ. ತಮ್ಮ ವಿವಿಧ ರೀತಿಯ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತ, ಅಭಿಮಾನಿಗಳಿಗೆ ಅಪ್ಡೇಟ್​ ಕೊಡುತ್ತಿರುತ್ತಾರೆ. ಆದರೆ ಈ ಬಾರಿ ಸನ್ನಿ ಲಿಯೋನ್​ ಪೋಸ್ಟ್ ಮಾಡಿರುವ ವಿಡಿಯೋವೊಂದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಸನ್ನಿ ಲಿಯೋನ್ ಫೋಟೋ ಶೂಟ್​ಗೋಸ್ಕರ್​ ತಮ್ಮ ಬೆನ್ನಿಗೆ ಮೇಕಪ್​ ಮಾಡಿಕೊಳ್ಳುತ್ತಿರುವ ವಿಡಿಯೋ ಇದು. ಈ ಮೇಕಪ್​ ಬರುಬರುತ್ತ ಭಯಾನಕವಾಗಿ ಗೋಚರಿಸುತ್ತದೆ. ಮೊದಲು ಏನೂ ಅನ್ನಿಸುವುದಿಲ್ಲ. ಆದರೆ ಕೊನೆಯಲ್ಲಿ ಸನ್ನಿ ಲಿಯೋನ್​ ಬೆನ್ನಿಗೆ ಕೃತಕ ಚರ್ಮವನ್ನು ಅಂಟಿಸಿ, ಬಣ್ಣಗಳನ್ನು ಹಚ್ಚಿ ಬಳಿಕ ಅಲ್ಲಿಂದ ತೆಗೆಯಲಾಗುತ್ತದೆ. ಈ ವೇಳೆ ಬೆನ್ನಿನ ಚರ್ಮವನ್ನೇ ಸುಲಿಯುತ್ತಿರುವಂತೆ ಭಾಸವಾಗಿ, ಅದನ್ನು ನೋಡಲು ಸ್ವಲ್ಪ ಹಿಂಜರಿಕೆ ಆಗುತ್ತದೆ. ಇದೇ ಕಾರಣಕ್ಕೆ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ.

ವಿಡಿಯೋವನ್ನು ಪೋಸ್ಟ್ ಮಾಡಿದ ಸನ್ನಿ ಲಿಯೋನ್​, ಆಯ್ಕೆ ಮಾಡಿಕೊಳ್ಳಲು ಸುಂದರವಾದ ವೇಗನ್​ ಬೂಟುಗಳು, ಜಾಕೆಟ್​ಗಳು, ಬ್ಯಾಗ್​ಗಳು ಇರುವಾಗ, ಅವುಗಳಿಗಾಗಿ ಪ್ರಾಣಿಗಳ ಪ್ರಾಣವನ್ನೇಕೆ ತೆಗೆಯಬೇಕು. ನಾವು ಧರಿಸುವ ಜಾಕೆಟ್​ಗಳು, ಶೂಗಳು, ತೆಗೆದುಕೊಂಡು ಹೋಗುವ ಬ್ಯಾಗ್​ಗಳಿಗಾಗಿ ಪ್ರಾಣಿಗಳ ಚರ್ಮವನ್ನೇಕೆ ತೆಗೆಯಬೇಕು ಎಂದು ಕೇಳಿದ್ದಾರೆ.

ಅಷ್ಟಕ್ಕೂ ಸನ್ನಿ ಲಿಯೋನ್​ ಈ ರೀತಿ ಮೇಕಪ್​ ಮಾಡಿಕೊಂಡಿದ್ದು ಪ್ರಾಣಿಗಳನ್ನು ಉಳಿಸುವ ಅಭಿಯಾನಕ್ಕೆ. ಪೀಪಲ್ ಫಾರ್​ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಎನಿಮಲ್ಸ್​ ಇಂಡಿಯಾ ಸಂಸ್ಥೆಯಿಂದ ಚರ್ಮೋದ್ಯಮಕ್ಕೆ ಪ್ರಾಣಿಗಳ ಬಳಕೆ ಬೇಡ ಎಂಬ ಅಭಿಯಾನ ಪ್ರಾರಂಭಿಸಲಾಗಿದ್ದು, ಅದರಲ್ಲಿ ಸನ್ನಿ ಲಿಯೋನ್​ ಪಾಲ್ಗೊಳ್ಳುತ್ತಿದ್ದಾರೆ. ಚರ್ಮ ತೆಗೆಯಬೇಡಿ ಎಂಬ ಸಂದೇಶ ಸಾರಲು ತಮ್ಮ ಬೆನ್ನಿನ ಮೇಲೆ ಹೀಗೆಲ್ಲ ಮೇಕಪ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net