3 ಮಕ್ಕಳ ಮುಂದೆಯೇ ಮರು ಮದ್ವೆಯಾದ ನಟಿ! Maldiveನಲ್ಲಿ ನಡೆಯಿತ್ತು ಅದ್ಧೂರಿ ವಿವಾಹ..

sunny
Published on

ಮುಂಬೈ: ( Maldive ) ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.   ಹಿಂದಿಯಲ್ಲಿ ವಿಶೇಷ ಹಾಡುಗಳ ಜೊತೆಗೆ ಬೋಲ್ಡ್ ಪಾತ್ರಗಳಲ್ಲಿ ನಟಿಸಿರುವ ಈ ನಟಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸನ್ನಿ ಲಿಯೋನ್ ತೆಲಗು, ಕನ್ನಡ, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಸನ್ನಿ ಅವರಿಗೆ ಮದ್ವೆಯಾಗಿದೆ ಮಕ್ಕಳು ಇದ್ದಾರೆ ಎಂದು ಅವರ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ತಿಳಿದಿದೆ.  ಸನ್ನಿ ಮತ್ತೆ ಮದುವೆಯಾಗಿದ್ದಾರೆ. ಮೂರು ಮಕ್ಕಳು ಇರುವ ನಟಿ ಮರು ವಿವಾಹವಾಗಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗುತ್ತಿದೆ.

ಹದಿಮೂರು ವರ್ಷಗಳ ದಾಂಪತ್ಯದ ನಂತರ, ಬಾಲಿವುಡ್ ತಾರೆ ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಜತೆ ಮತ್ತೆ ವಿವಾಹವಾದರು. ಮಾಲ್ಡೀವ್ಸ್ ನಲ್ಲಿ ಈ ಜೋಡಿ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಡ್ರೆಸ್‌ನಲ್ಲಿ ಇಬ್ಬರೂ ಅತ್ಯಾಕರ್ಷಕರಾಗಿದ್ದಾರೆ. ಅವರ ಮಕ್ಕಳಾದ ನಿಶಾ, ಆಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಅವರ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು. ಈ ಸಂಭ್ರಮಾಚರಣೆಯ ಫೋಟೋಗಳನ್ನು ಸನ್ನಿ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

'ಮೊದಲ ಬಾರಿಗೆ ದೇವರು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ಈ ಬಾರಿ ನಾವು ಐದು ಮಂದಿ ಮಾತ್ರ ಇದ್ದೆವು. ನಮ್ಮ ನಡುವೆ ಸಾಕಷ್ಟು ಪ್ರೀತಿ ಮತ್ತು ಸಮಯವಿದೆ. ನೀವು ಯಾವಾಗಲೂ ನನ್ನ ಜೀವನದ ಪ್ರೀತಿಯಾಗಿರುತ್ತೀರಿ' ಎಂದು ಸನ್ನಿ ಲಿಯೋನ್ ಈ ಪೋಸ್ಟ್‌ಗೆ ಬರೆದಿದ್ದಾರೆ. ಈ ಪೋಸ್ಟ್​​ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಮಿಚ್ಚುಗೆ ಸೂಚಿಸಿದ್ದಾರೆ.

ಸನ್ನಿ ಲಿಯೋನ್ ಜನವರಿ 2011 ರಲ್ಲಿ ಡೇನಿಯಲ್ ವೆಬರ್ ಅವರನ್ನು ವಿವಾಹವಾದರು. ದಂಪತಿ ಜುಲೈ 2017 ರಲ್ಲಿ ನಿಶಾಳನ್ನು ದತ್ತು ಪಡೆದರು. 2018 ರಲ್ಲಿ, ಅವಳಿಗಳಾದ ಆಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಬಾಡಿಗೆ ತಾಯ್ತನದ ಮೂಲಕ ಸನ್ನಿಗೆ ಜನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net