ರಾಜಕೀಯ ತೊರೆಯುವ ಸೂಚನೆ ಕೊಟ್ಟ ಸನ್ನಿ ಡಿಯೋಲ್

sunn
Published on

ಸನ್ನಿ ಡಿಯೋಲ್ ನಟನಾಗಿ ಯಶಸ್ಸು ಕಂಡ ಬಳಿಕ ರಾಜಕೀಯಕ್ಕೆ ಕಾಲಿಟ್ಟವರು. ಈಗಷ್ಟೆ ಗದಾರ್-2 ಗಲ್ಲಾ ಪೆಟ್ಟಿಗೆಯನ್ನ ಭರಿಸುವಲ್ಲಿ ಯಶಸ್ವಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸನ್ನಿ ಡಿಯೋಲ್ ಅವರು ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ವರ್ಷಕ್ಕೆ ಒಂದು ಸಿನಿಮಾ ಮಾತ್ರ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಅದೇ ರೀತಿ ಅವರು ಸಂಸತ್ತಿನಲ್ಲೂ ಕಾಣಿಸಿದ್ದು ಕಡಿಮೆ. ಈಗ ಅವರು ರಾಜಕೀಯ ತೊರೆಯುವ ಸೂಚನೆ ನೀಡಿದ್ದಾರೆ. ‘ರಾಜಕೀಯ ನನ್ನ ಜಗತ್ತಲ್ಲ’ ಎಂದಿದ್ದಾರೆ.
ಒಂದೊಮ್ಮೆ ನಾನು ಸಂಸತ್ತಿಗೆ ಹೋದರೂ, ಹೋಗದಿದ್ದರೂ ಅದು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಸಂಸತ್ತಿಗೆ ಹೋದಾಗ ಸಮಸ್ಯೆಗಳನ್ನು ಎದುರಿಸುತ್ತೇನೆ. ನಟನಾಗಿ ನೀವು ಎಲ್ಲಿಗೆ ಹೋದರೂ ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ಇದರಿಂದ ಭದ್ರತಾ ಲೋಪವಾಗುತ್ತದೆ. ನನ್ನ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸಗಳ ಪಟ್ಟಿ ನನ್ನ ಬಳಿ ಇದೆ. ಮಾಡಿದ ಕೆಲಸವನ್ನು ಪ್ರಚಾರ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ. ರಾಜಕೀಯ ನನಗೆ ಸರಿಹೊಂದದ ವೃತ್ತಿ’ ಎಂದಿದ್ದಾರೆ.


2019ರ ಏಪ್ರಿಲ್​ನಲ್ಲಿ ಸನ್ನಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಂಜಾಬ್​ನ ಗುರದಾಸ್​ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಅವರ ನಟನೆಯ ‘ಗದರ್ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಗೆದ್ದಿದೆ.


ಇನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರೇ ಎಂದು ಸನ್ನಿ ಡಿಯೋಲ್​ ಅವರನ್ನ ಕೇಳಲಾಯಿತು. ಅದಕ್ಕೆ ‘ಇಲ್ಲ’ ಎನ್ನುವ ಉತ್ತರ ಬಂದಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಬಳಿ ಸ್ಪರ್ಧೆ ಮಾಡುವಂತೆ ಕೇಳಿದರೆ ಏನು ಮಾಡುತ್ತೀರಿ’ ಎಂದೂ ಕೇಳಲಾಯಿತು. ‘ಸಿನಿಮಾ ಮೂಲಕ ನಾನು ದೇಶ ಸೇವೆ ಮಾಡುತ್ತಿದ್ದೇನೆ ಎಂಬುದು ಮೋದಿ ಅವರಿಗೂ ತಿಳಿದಿದೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net