

ಮುಂಬೈ: ಸೂಪರ್ಸ್ಟಾರ್ ಗೋವಿಂದ ಪತ್ನಿ ಸುನಿತಾ ಅಹುಜಾ 4 ಬಾರಿ ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡಿದ್ದಾರೆ. ‘ಬಿಗ್ ಬಾಸ್’ ಆಫರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. 4 ಬಾರಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದೆ.
ಬಾಲಿವುಡ್ನ ಸ್ಟಾರ್ ನಟ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರಿಗೂ ಇತ್ತೀಚೆಗೆ ಬಿಗ್ಬಾಸ್ ಮನೆಗೆ ಹೋಗ್ತಿರಾ? ಎಂದು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಮಾತನಾಡುವಾಗ ಅವರು ಖಡಕ್ ಆಗಿ ಮಾತನಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ನನಗೆ ಆಫರ್ ನೀಡುತ್ತಿದ್ದಾರೆ.ನಿಮಗೇನು ಹುಚ್ಚು ಹಿಡಿದಿದೆಯಾ? ನಾನು ಬಿಗ್ ಬಾಸ್ಗೆ ಹೋಗಿ ಟಾಯ್ಲೆಟ್ ಕ್ಲೀನ್ ಮಾಡ್ತೀನಿ ಅಂತ ನೀವು ಅಂದುಕೊಂಡಿದ್ದೀರಾ ಎಂದು ನಾನು ಅವರಿಗೆ ಕೇಳಿದೆ’ ಎಂದಿದ್ದಾರೆ ಸುನಿತಾ ಅಹುಜಾ.
‘ನಿಮಗೆ ಬಿಗ್ ಬಾಸ್ ಶೋನಿಂದ ಆಫರ್ ಬಂದಿದೆಯಾ’ ಎಂದು ಪ್ರಶ್ನೆ ಮಾಡಿದ ಸಂದರ್ಶಕರಿಗೂ ಸುನಿತಾ ಅಹುಜಾ ಅವರು ಮರುಪ್ರಶ್ನೆ ಹಾಕಿದ್ದಾರೆ. ‘ನೀವು ನನಗೆ ಇಂಥ ಪ್ರಶ್ನೆ ಕೇಳುತ್ತೀರಲ್ಲ.. ಶಾರುಖ್ ಖಾನ್ ಪತ್ನಿ ಗೌರಿ ಖಾನ್ಗೆ ಇದೇ ಪ್ರಶ್ನೆ ಕೇಳುತ್ತೀರಾ? ನಾವು ಆರ್ಥಿಕವಾಗಿ ಕಷ್ಟದಲ್ಲಿದ್ದೇವೆ ಅಂತ ನೀವು ಭಾವಿಸಿದ್ದೀರಾ? ನಾನು ಬಿಗ್ ಬಾಸ್ ಕಾರ್ಯಕ್ರಮವನ್ನೇ ನೋಡುವುದಿಲ್ಲ’ ಎಂದು ಸುನಿತಾ ಅಹುಜಾ ಅವರು ಹೇಳಿದ್ದಾರೆ. ಸುನೀತಾ ಅವರ ಈ ಹೇಳಿಕೆ ಸಖತ್ ವೈರಲ್ ಆಗಿದೆ.
ಕರಣ್ ಜೋಹರ್ ನನ್ನನ್ನು ಕಾರ್ಯಕ್ರಮಕ್ಕೆ ಕರೆದ್ರೆ ಖಂಡಿತಾ ನಾನು ಹೋಗುತ್ತೇನೆ ಎಂದಿದ್ದಾರೆ. ಇಲ್ಲಿಯವರೆಗೆ ಕಾರ್ಯಕ್ರಮದ ಆಹ್ವಾನವನ್ನು ಸ್ವೀಕರಿಸದ ಸ್ಟಾರ್ ಪತ್ನಿ, ಇದ್ರಿಂದ ತನಗೆ ಯಾವುದೇ ವ್ಯತ್ಯಾಸ ಆಗೋದಿಲ್ಲ ಎಂದು ಹೇಳಿದ್ದಾರೆ.