ಭಾನುವಾರ ಗೋವರ್ಧನ ಪೂಜೆ, ಕಾರ್ತಿಕ ದಾಮೋಧರ ದೀಪೋತ್ಸವ

Rasaraj gopala das iskon
Published on

ಶಿವಮೊಗ್ಗ: ಗಾಂಧಿನಗರದ ಪಾರ್ಕ್ ಆವರಣದಲ್ಲಿ ನ. 10ರ ಸಂಜೆ 5ಕ್ಕೆ ಗೋವರ್ಧನ ಪೂಜೆ, ಗೋಪೂಜೆ ಹಾಗೂ ಕಾರ್ತಿಕ ದಾಮೋಧರ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್‌ನ ಸದಸ್ಯ ರಸರಾಜ್ ಗೋಪಾಲ ದಾಸ್ ಹೇಳಿದರು.

ಇಸ್ಕಾನ್ (ಅಂತರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ) ಶಿವಮೊಗ್ಗ ಶಾಖೆಯಿಂದ ಗಾಂಧಿನಗರ ನಿವಾಸಿಗಳ ಸಂಘ, ಗಾಂಧಿನಗರ ಉದ್ಯಾನವನದ ಸದಸ್ಯರ ಸಹಯೋಗದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಾಂಧಿನಗರ ನಿವಾಸಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಸತೀಶ್ ಮಾತನಾಡಿ, ಗೋಪೂಜೆ ಹಾಗೂ ಕಾರ್ತಿಕ ದಾಮೋಧರ ದೀಪೋತ್ಸವವನ್ನು ಪ್ರತಿ ವರ್ಷ ಗಾಂಧಿನಗರ ಉದ್ಯಾನವನದಲ್ಲಿ ಆಯೋಜಿಸಲಾಗುತ್ತಿದೆ ಎಂದರು. ಇಸ್ಕಾನ್ ಸದಸ್ಯರಾದ ರಸಿಕ ಶೇಖರ ಚೈತನ್ಯದಾಸ್, ಘನಶ್ಯಾಮ, ಗಾಂಧಿನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ಗುಪ್ತ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net