ಚರ್ಮದ ಬಣ್ಣವನ್ನೇ ಬದಲಿಸಿದ ಬಿಸಿಲು

Viral Post
Published on

ಸಾಮಾನ್ಯವಾಗಿ ಬೇಸಿಗೆಯಲ್ಲಿ ಸಮುದ್ರತೀರದಲ್ಲಿ ಸೂರ್ಯನ ಬಿಸಿಲಿಗೆ ಮೈಯ್ಯೊಡ್ಡಿ ವಿಶ್ರಾಂತಿ ಪಡೆಯುವ ‘ಸನ್ ಬಾತ್’ ಪದ್ಧತಿ ಹಲವು ದೇಶಗಳಲ್ಲಿದೆ. ಆದರೆ ಆ ಅವಧಿ ಹೆಚ್ಚಾಗಬಾರದು. ಹೆಚ್ಚಾದರೆ ಚರ್ಮ ಸುಟ್ಟು ತೊಂದರೆ ಅನá-ಭವಿಸಬೇಕಾಗುತ್ತದೆ.

ಫ್ಲೋರಿಡಾದ ವ್ಯಕ್ತಿಯೊಬ್ಬ ಹೆಚ್ಚು ಕಾಲ ಬಿಸಿಲಿಗೆ ಮೈಯ್ಯೊಡ್ಡಿದ್ದ. ಅದರಿಂದಾಗಿ ಆತನ ಚರ್ಮದ ಬಣ್ಣವೇ ಬದಲಾಗಿಬಿಟ್ಟಿದೆ. ಡ್ರೋನ್ ಕ್ಯಾಮರಾ ಮೂಲಕ ಸನ್ ಬಾತ್ ಮಾಡುತ್ತಿರುವ ವ್ಯಕ್ತಿಯ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಆತನ ಮೈಬಣ್ಣ ಎಷ್ಟು ಕೆಂಪಾಗಿತ್ತೆಂದರೆ, ಸಮುದ್ರದಲ್ಲಿದ್ದ ಮೀನುಗಳು ತಿನ್ನುವ ವಸ್ತು ಸಿಕ್ಕಿತೆಂದು ಆತನ ಸುತ್ತ ಸುಳಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವ್ಯಕ್ತಿ ಪ್ರಸಿದ್ಧ ಇಂಗ್ಲಿಷ್ ಚಿತ್ರ ಹೆಲ್ ಬಾಯ್ನ ಪಾತ್ರದಂತೆ ಕಾಣಿಸುತ್ತಾನೆ ಎಂದೂ ಹಲವರು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net