ಸಂಭ್ರಮದಿಂದ ನಡೆದ ಶಾಲಾ ವಾಷಿರ್ಕೋತ್ಸವ

2-RNR-04
Published on

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ವಾಷಿರ್ಕೋತ್ಸವ ಮಂಗಳವಾರ ಜರುಗಿತು.

ಗ್ರಾಮದ ಹಿರಿಯರು ಸಮಾರಂಭ ಉದ್ಘಾಟಿಸಿದರು. ಬಸವರಾಜ ಮತ್ತಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂದ ಜಿಲ್ಲಾ ಟಕದ ಅಧ್ಯಕ್ಷ ಮಲ್ಲೇಶ ಕರಿಗಾರ ಹಾಗೂ ಶಾಲೆಯ ವಿವಿಧ ರೀತಿಯ ದಾನಿಗಳಾದ ಶಂಕ್ರಗೌಡ ಕುಸೂಗರ, ಶಂಕರಗೌಡ ತರಗನಹಳ್ಳಿ, ಗೀತಾ ಮರಿಯಪ್ಪ ಕೆಳಗಿನಮನಿ, ಗೀತಾ ಕೆಳಗಿನಮನಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯೆ ಗಂಗಮ್ಮ ಗೋಣಿಮಠ, ಉಪಾಧ್ಯೆ ಭರಮಗೌಡ ಕುಡಪಲಿ, ಜಯಪ್ಪ ಕೆಂಚಳ್ಳೇರ, ಈರಣ್ಣ ಚರಂತಿಮಠ, ಸುರೇಶ ಅಂಗಡಿ, ಕಾಶಿನಾಥ ಕಮ್ಮಾರ, ಮಾಲತೇಶ ಕುಸಗೂರ, ನೇತ್ರಾವತಿ ಗೊರಪ್ಪಳವರ, ಸುನೀತಾ ಪೊಲೀಸಗೌಡ್ರ ಹಾಗೂ ಶಾಲೆಯ ಶಿಕ್ಷಕರು, ಎಸ್​ಡಿಎಂಸಿ ಸದಸ್ಯರು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net