

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಜಗದ್ಗುರು ಲಿಂ. ನಂದೀಶ್ವರ ಸ್ವಾಮೀಜಿಯವರ 25ನೇ ಪುಣ್ಯಾರಾಧನೆ ಸಮಾರಂಭ ಮಾ. 14ರಂದು ಬೆಳಗ್ಗೆ 11.30ಕ್ಕೆ ಶಿವಾನಂದ ಮಠದ ಆವರಣದಲ್ಲಿ ಜರುಗಲಿದೆ.
ಅಂದು ಬೆಳಗ್ಗೆ 6 ಗಂಟೆಗೆ ಸ್ವಾಮೀಜಿಯವರ ಮೂತಿರ್ಗೆ ರುದ್ರಾಭಿಷೇಕ ಮತ್ತು ಮೃತ್ಯುಂಜಯ ಹೋಮ ನಡೆಯಲಿದೆ ಎಂದು ಜಗದ್ಗುರು ಲಿಂ. ನಂದೀಶ್ವರ ಸ್ವಾಮೀಜಿಯವರ ಆರಾಧನಾ ಸಮಿತಿ ಪ್ರಕಟಣೆ ತಿಳಿಸಿದೆ.