ಓದುವ ಮೂಲಕ ಜ್ಞಾನ ಪಡೆದುಕೊಳ್ಳಿ; ಬಿ.ಬಿ. ನಂದ್ಯಾಳ

27-RNR-04
Published on

ರಾಣೆಬೆನ್ನೂರ: ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ನಿತ್ಯ ಓದುವ ಮೂಲಕ ವಿಷಯ ಜ್ಞಾನವನ್ನು ಹೆಚ್ಚಿಸಿಕೊಂಡರೆ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಬಿ. ನಂದ್ಯಾಳ ಹೇಳಿದರು.

ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಅರಳಿ ಸಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾಥಿರ್ಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಏಕಾಗ್ರತೆಯಿಂದ ಆಲಿಸುವುದು, ವಿಷಯದ ಮುಖ್ಯಾಂಶಗಳ ಗ್ರಹಿಸಿಕೊಂಡು ಟಿಪ್ಪಣಿ ಮಾಡಿಕೊಳ್ಳುವುದು, ಶಿಕ್ಷಕರ ಜತೆ ಸಂವಹನ, ನಾಳೆ ಮಾಡುವ ಕೆಲಸ ಕುರಿತು ಪೂರ್ವ ತಯಾರಿ, ಸಹಪಾಠಿಗಳು ಹಾಗೂ ಪಾಲಕರ ಜತೆ ಚರ್ಚೆ ಈ ಐದು ಸೂತ್ರಗಳನ್ನು ಪಾಲಿಸಬೇಕು ಎಂದರು.

ಪ್ರಾಚಾರ್ಯ ಆರ್​.ಎಫ್​. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು.

ಸಾಂಸತಿಕ ವೇದಿಕೆ ಸಂಚಾಲಕ ಡಾ. ಎಸ್​.ಪಿ. ಗೌಡರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪರಮೇಶಪ್ಪ ಪೂಜಾರ, ಶಂಕರಗೌಡ ಕುಸಗೂರ, ಚನ್ನಬಸಪ್ಪ ನಾಡಿಗೇರ, ಗಿರೀಶ ಹುಡೇದ, ಪ್ರಾಧ್ಯಾಪಕರಾದ ಯಮುನಾ ನಾಯ್ಕ, ಮಂಜುನಾಥ ಎಂ.ಜಿ., ಡಾ. ಎಸ್​.ಐ. ಮಲ್ಲಿಗಾರ, ಅಂಬಿಕಾ ಹೊಸಮನಿ, ಬಸವರಾಜ ಹುಗ್ಗಿ, ಹನುಮಂತರಾಜು ಎನ್​.ಬಿ., ಲೋಹಿಯಾ ಕೆ.ಜೆ.ಆರ್​., ಮೋಹನ್​ ಬೆಣಗೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net