12ರಿಂದ ಮಕ್ಕಳ ಬೇಸಿಗೆ ಶಿಬಿರ

halaswamy pressmeet
ಹಾಲಸ್ವಾಮಿ, ಜಿ.ಬೆನಕಪ್ಪ, ಚಂದ್ರಶೇಖರ್ ತಳಗಿಹಾಳ್, ಪ್ರೊ.ಎ.ಎಸ್.ಚಂದ್ರಶೇಖರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ನಗರದ ಬಸವಕೇಂದ್ರದಲ್ಲಿ ಏ.12 ರಿಂದ 27ರವರೆಗೆ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಬಸವಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ನಿರ್ದೇಶನದಲ್ಲಿ ಶಿಬಿರ ನಡೆಯಲಿದೆ ಎಂದು ಶಿಬಿರದ ನಿರ್ದೇಶಕ ಆರ್.ಎಸ್.ಹಾಲಸ್ವಾಮಿ ತಿಳಿಸಿದರು.

ಬೆಳಗ್ಗೆ 9.30 ರಿಂದ ಸಂಜೆ 4.30ರವರೆಗೆ ನಡೆಯುವ ಶಿಬಿರದಲ್ಲಿ 5 ರಿಂದ 10ನೇ ತರಗತಿ ಮಕ್ಕಳು ಭಾಗವಹಿಸಬಹುದು. ಮಕ್ಕಳ ಸೃಜನಶೀಲತೆ ಹೆಚ್ಚಿಸುವ ವೈವಿಧ್ಯಮಯ ಚಟುವಟಿಕೆಗಳನ್ನು ಕಲಿಸಲಾಗುವುದು. ಮಕ್ಕಳ ಆಸಕ್ತಿ ಗುರುತಿಸಿ ಅದಕ್ಕೆ ತಕ್ಕಂತೆ ಚಟುವಟಿಕೆಗಳನ್ನು ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾಟಕ, ರಂಗಗೀತೆ, ನೃತ್ಯ, ಆಟೋಟಗಳ ಜತೆ ಕ್ಲೇ ಮಾಡೆಲಿಂಗ್ ಜತೆಗೆ ಮಕ್ಕಳ ಸಿನಿಮಾ ಪ್ರದರ್ಶನ, ಒಂದು ದಿನ ಜಲ ವಿಹಾರ, ವನವಿಹಾರವನ್ನು ಆಯೋಜಿಸಲಾಗುವುದು. ನೀನಾಸಂನಲ್ಲಿ ತರಬೇತಿ ಪಡೆದಿರುವ ಹಿರಿಯ ಕಲಾವಿದರು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಹಿರಿಯ ರಂಗಕರ್ಮಿ ಗಣೇಶ್ ಕೆಂಚನಾಲ, ವಿಜಯ್ ನೀನಾಸಂ, ಚಂದನ್ ನೀನಾಸಂ, ನಾಗರತ್ನಾ, ಚೈತ್ರಾ ಸಜ್ಜನ್, ಬಸವರಾಜ್ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನಗರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಶಿಬಿರದಲ್ಲಿ ಅವಕಾಶವಿದೆ. ಒಂದು ಶಾಲೆಯಿಂದ ಗರಿಷ್ಠ 5 ಮಕ್ಕಳು ಮುಖ್ಯ ಶಿಕ್ಷಕರ ಶಿಾರಸು ಪತ್ರದೊಂದಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ (ಮೊ. 94481 38183) ಸಂಪರ್ಕಿಸಬಹುದು ಎಂದು ಹೇಳಿದರು.
ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಕಾರ್ಯದರ್ಶಿ ಚಂದ್ರಶೇಖರ್ ತಳಗಿಹಾಳ್, ನಿರ್ದೇಶಕ ಎ.ಜಿ.ಹಾಲಪ್ಪ, ಪ್ರೊ.ಎ.ಎಸ್. ಚಂದ್ರಶೇಖರ್, ಜಯಮ್ಮ, ಶೀಲಾ ಸುರೇಶ್, ಗಾಯತ್ರಿ ಪಾಟೀಲ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net