ರಾಜಸ್ಥಾನದ ಸಂಘಟನ್ ಶ್ರೀಜನ್ ಅಭಿಯಾನದಲ್ಲಿ ಸುಲೀಂ ಅಹ್ಮದ್

saleem (1)
Published on

ಬೆಂಗಳೂರು: ದೇಶದ ಎಲ್ಲೆಡೆ ಜಿಲ್ಲಾ ಕಾಂಗ್ರೆಸ್ ಸಮಿತಿ(ಡಿಸಿಸಿ) ಅಧ್ಯಕ್ಷರ ನೇಮಕಾತಿಗೆ ಸಂಘಟನ್ ಶ್ರೀಜನ್ ಅಭಿಯಾನ ಕೈಗೊಂಡಿರುವ ಕಾಂಗ್ರೆಸ್ ರಾಜಸ್ಥಾನದಲ್ಲಿ ಡಿಸಿಸಿ ಅಧ್ಯಕ್ಷರ ನೇಮಕಕ್ಕೆ ಚಾಲನೆ ನೀಡಿದೆ.

ಸಂಘಟನ್ ಶ್ರೀಜನ್ ಅಭಿಯಾನದಡಿಯಲ್ಲಿ ಪಕ್ಷ ಸಂಘಟನೆ ಮತ್ತು ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ಈಗಾಗಲೇ ಎಐಸಿಸಿ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಅಳ್ವಾರ್ ಜಿಲ್ಲೆಗೆ ಎಐಸಿಸಿ ನೇಮಕ ಮಾಡಿರುವ ರಾಜಸ್ಥಾನ ಉಸ್ತುವಾರಿ ಮತ್ತು ವಿಧಾನ ಪರಿಷತ್ ಸರ್ಕಾರ ಮುಖ್ಯ ಸಚೇತಕ ಸಲೀಂ ಅಹ್ಮದ್, ರಾಜಸ್ಥಾನದ ಅಳ್ವಾರ್‌ನಲ್ಲಿ ಸಭೆ ಕರೆದು ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ಅಭಿಪ್ರಾಯ ಸಂಗ್ರಹ ನಡೆಸಿದರು.

ಅ.21ರ ವರೆಗೂ ಎಲ್ಲೆಡೆ ಸಭೆಗಳನ್ನು ಕರೆದು ಡಿಸಿಸಿ ಅಧ್ಯಕ್ಷರ ನೇಮಕಾತಿ ಸಂಬಂಧ ಸ್ಥಳೀಯ ನಾಯಕರು, ಸಮಾಜ ಸೇವಕರು, ಹಾಲಿ-ಮಾಜಿ ಸಂಸದರು, ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹ ಮಾಡಿ ಪಟ್ಟಿ ಸಿದ್ದಪಡಿಸಲಿದ್ದಾರೆ. ಆನಂತರ ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಒಪ್ಪಿಸಲಿದ್ದಾರೆ.

ಸಭೆಯಲ್ಲಿ ರಾಜಸ್ಥಾನದ ವಿರೋಧ ಪಕ್ಷದ ನಾಯಕ ಟಿಕಾರಾಂ ಜುಲ್ಲಿ, ಸಂಸದ ಸಂಜನಾ ಜಾತವ್, ಶಾಸಕ ಮಂಗೆಲಾಲ್ ಮೀನಾ, ಮಾಜಿ ಶಾಸಕ ಇಂದ್ರಾಜ್ ಸಿಂಗ್ ಗುರ್ಜಾರ್, ಡಿಸಿಸಿ ಅಧ್ಯಕ್ಷ ಯೋಗೇಶ್ ಮಿಶ್ರಾ, ಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಸುಮೀತ್ ಗರ್ಗ್, ಅರ್ಯಾನ್ ಝುಬೇರ್, ಅಜೀತ್ ಯಾದವ್, ಜೋಗೇಂದರ್ ಸಿಂಗ್, ಇಂತಿಯಾಝ್ ಹುಸೈನ್ ಸೇರಿದಂತೆ ಉಸ್ತುವಾರಿಗಳು, ಪಿಸಿಸಿ, ಡಿಸಿಸಿ ಪದಾಧಿಕಾರಿಗಳು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net