

ಶಿವಮೊಗ್ಗ: ಮಹಿಳೆಯರಿಗೆ ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಗರ್ಭ ಕೊರಳ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಬಹುದಾಗಿದೆ ಎಂದು ಕ್ಯಾನ್ಸರ್ ತಜ್ಞೆ ಡಾ. ಬಿ.ಎಸ್.ಗಿರಿಜಾ ಪ್ರಸನ್ನಕುಮಾರ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಕದಳಿ ವನಿತಾ ಸಮಾಜದ 32ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ಈಗ ಗುಣಪಡಿಸಬಹುದಾದ ಕಾಯಿಲೆ ಆಗಿದ್ದು, ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ವೈದ್ಯರ ಮಾರ್ಗದರ್ಶನವನ್ನು ಸೂಕ್ತವಾಗಿ ಪಾಲನೆ ಮಾಡಬೇಕಾಗುತ್ತದೆ ಎಂದರು.
ನೂತನ ಅಧ್ಯಕ್ಷೆಯಾಗಿ ಸುಜಾತಾ ಬಸವರಾಜ್, ಉಪಾಧ್ಯಕ್ಷ ಉಮಾ, ಕಾರ್ಯದರ್ಶಿ ಸವಿತಾ, ಸಹಕಾರ್ಯದರ್ಶಿ ಸುರೇಖಾ, ಖಜಾಂಚಿ ನಿರ್ಮಲಾ, ನಿರ್ದೇಶಕರಾಗಿ ಲತಾ ಶಂಕರ್, ಮಂಜುಳಾ, ವನಜಾಕ್ಷಿ ಹಾಗೂ ಜಯಮ್ಮ ಪದಗ್ರಹಣ ಮಾಡಿದರು.
ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಿಟಕಪೂರ್ವ ಅಧ್ಯಕ್ಷೆ ಅರುಣಾ ಚಂದ್ರಶೇಖರ್, ಸವಿತಾ, ರೂಪಾ, ಶೈಲಾ, ಭಾರತಿ, ವಾಸಂತಿ, ಶೋಭಾ, ಗಿರಿಜಾ ಹಾಗೂ ಜ್ಯೋತಿ ಉಪಸ್ಥಿತರಿದ್ದರು. ಕದಳಿ ವನಿತಾ ಸಮಾಜದಿಂದ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಬಸವೇಶ್ವರ ಶಾಲೆ ಹಾಗೂ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.