

ಕೋಲಾರ: ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ -75ರ ಸಮೀಪ ನಗರ ಹೊರವಲಯದ ಸರ್ವೀಸ್ ರಸ್ತೆಯಲ್ಲಿ ಬುಧವಾರ ಆತಂಕ ಸೃಷ್ಟಿಸಿದ್ದ ಸೂಟ್‌ಕೇಸ್ ಅನ್ನು ಬೆಂಗಳೂರಿನ ಬಾಂಬ್ ನಿಷ್ಕ್ರೀಯ ದಳ ನಾಶಪಡಿಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಿತು.
ಸರ್ವೀಸ್ ರಸ್ತೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸೂಟ್‌ಕೇಸ್ ಕಂಡು ಬಂದಿದೆ. ಹತ್ತಿರಕ್ಕೆ ಹೋದವರಿಗೆ ಅದರೊಳಗಿಂದ ಶಬ್ದ ಕೇಳಿದ್ದು, ಇದರಿಂದ ಭಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಟಮಕ ಮೇಲ್ಸೇತುವೆಯಿಂದ ಬೇತಮಂಗಲ ರಸ್ತೆಯ ತಿರುವಿನವರೆಗಿನ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ, ಸಾರ್ವಜನಿಕರ ಓಡಾಟ ಹಾಗೂ ಯಾರೂ ಹತ್ತಿರಕ್ಕೆ ಬರದಂತೆ ತಡೆದರು. ಬಳಿಕ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ, ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಕೋಲಾರದ ಬಾಂಬ್ ಪತ್ತೆ ದಳವನ್ನು ಸ್ಥಳಕ್ಕೆ ಕರೆಯಿಸಲಾಯಿತು.
ಬಾಂಬ್ ಪತ್ತೆ ದಳದ ಸಿಬ್ಬಂದಿ ಉಪಕರಣಗಳ ಮೂಲಕ ಸ್ಕ್ಯಾನ್ ಮಾಡಿದಾಗ ಮೆಟಲ್ ಇರುವ ಸಾಧ್ಯತೆಯಿದ್ದು, ಸೋಟಕ ವಸ್ತುಗಳು ಇಲ್ಲ ಎನ್ನುವ ಮಾಹಿತಿ ಲಭ್ಯವಾಯಿತು. ಆದರೂ ಸಹ ಅದನ್ನು ತೆರೆಯುವ ಸಾಹಸಕ್ಕೆ ಪೊಲೀಸರು ಕೈ ಹಾಕಲಿಲ್ಲ. ಆಗ ಸ್ಥಳದಲ್ಲಿದ್ದ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ಹಿರಿಯ ಅಽಕಾರಿಗಳ ಗಮನಕ್ಕೆ ತಂದು ಬೆಂಗಳೂರಿನಿAದ ಬಾಂಬ್ ನಿಷ್ಕಿçಯ ದಳದವರನ್ನು ಕರೆಯಿಸಿಕೊಡುವಂತೆ ಮನವಿ ಮಾಡಿದರು,
ಈ ವಿಷಯ ಎಲ್ಲೆಡೆ ಹರಡಿ ತಂಡೋಪತAಡವಾಗಿ ಜನರು ಆಗಮಿಸಿ, ಸೂಟ್‌ಕೇಸ್‌ನಲ್ಲಿ ಬಾಂಬ್ ಇದೆಯಂತೆ ಎಂದು ಮಾತನಾಡಿಕೊಂಡಿದ್ದು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.
ಖಾಲಿಯಾಗಿದ್ದ ಸೂಟ್‌ಕೇಸ್
ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ ಕಾರ್ಯಾಚರಣೆಗಿಳಿಯಿತು. ಬಾಂಬ್ ನಿಷ್ಕಿçಯ ದಳದ ಶಶಿಧರ್ ಮತ್ತು ಸಿಬ್ಬಂದಿ ಮೊದಲಿಗೆ ಎಕ್ಸ್ರೇ ಮಾಡಲು ವೆಬ್ ಕ್ಯಾಮರಾವನ್ನು ಸೂಟ್‌ಕೇಸ್ ಬಳಿ ಇಟ್ಟರು. ಪುನಃ ಮತ್ತೊಂದು ಎಕ್ಸ್ರೇ ಮಾಡಿ ಯಾವುದೇ ಸೋಟಕ ವಸ್ತುಗಳು ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು, ಸೂಟ್‌ಕೇಸ್ ತೆರೆಯಲು ಮುಂದಾದರು. ಕೊನೆಗೆ ಕಾರ್ಡೆಕ್ಸ್ ಮೂಲಕ ಲಘುಸೋಟ ಮಾಡಿ ನಾಶಪಡಿಸಿದಾಗ ಯಾವುದೇ ಸೋಟಕ ವಸ್ತುಗಳು ಇರಲಿಲ್ಲ.
ಸೆನ್ಸರ್ ಸೂಟ್‌ಕೇಸ್ ಆಗಿದ್ದರಿಂದ ಒಂದು ಶೆಲ್ ಸೇರಿ ಸಣ್ಣ ಎಲೆಕ್ಟಿಕ್ ಉಪಕರಣಗಳು ಪತ್ತೆಯಾದವು. ಅಂತೂ ಸತತ ೪ ಗಂಟೆಗೂ ಅಧಿಕ ಕಾಲ ನಡೆದ ಕಾರ್ಯಾಚರಣೆ ಸುಖಾಂತ್ಯಗೊಂಡು ಪೊಲೀಸರು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು.
ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ
ಕಾರ್ಯಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಬಿ.ನಿಖಿಲ್, ಅನುಮಾನಾಸ್ಪದವಾಗಿ ದೊರೆತ ಸೂಟ್‌ಕೇಸ್‌ನಿಂದ ಶಬ್ದ ಬರುತ್ತಿದ್ದ ಹಿನ್ನೆಲೆಯಲ್ಲಿ ಆತಂಕ ಎದುರಾಗಿತ್ತು. ಸ್ಮಾರ್ಟ್ ಸೂಟ್‌ಕೇಸ್ ಆಗಿದ್ದು, ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲಾರಾಂ ಶಬ್ದ ಬರಲು ಆರಂಭಿಸಿದೆ. ಬಾಂಬ್ ನಿಷ್ಕ್ರಿಯದಳ ಸ್ಪೋಟಗೊಳಿಸಿದ್ದು, ಯಾವುದೇ ಅಪಾಯಕಾರಿ ವಸ್ತುಗಳು ಇರಲಿಲ್ಲ. ಸೂಟ್‌ಕೇಸ್‌ಅನ್ನು ಯಾರು ನಗರ ಸಮೀಪದ ಬಿಸಾಡಿ ಹೋಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.