ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ

workshop (2)
ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆತ್ಮಹತ್ಯೆ ತಡೆ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಆಪ್ತಸಮಾಲೋಚಕಿ ತನುಜಾ ಉಪನ್ಯಾಸ ನೀಡಿದರು.
Published on

ಶಿಕಾರಿಪುರ: ಮಾನಸಿಕ ಒತ್ತಡ, ಆಧುನಿಕ ಜೀವನಶೈಲಿ, ಅನಗತ್ಯ ಆಲೋಚನೆ, ಖಿನ್ನತೆ ಮತ್ತು ದೃಢ ಸಂಕಲ್ಪ ಶಕ್ತಿ ಕೊರತೆಯಿಂದ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಆಪ್ತಸಮಾಲೋಚಕಿ ತನುಜಾ ಹೇಳಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆತ್ಮಹತ್ಯೆ ತಡೆ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅವರು, ಆತ್ಮಹತ್ಯೆಗೆ ಮೂಲ ಕಾರಣ ನಮ್ಮ ಮನಸ್ಸು. ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಾಗ ಇಂತಹ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದರು.
ಬದುಕಿನ ದಾರಿಯಲ್ಲಿ, ಪ್ರೇಮ, ಪ್ರೀತಿ, ವ್ಯವಹಾರದಲ್ಲಿ, ಸಂಬಂಧಗಳನ್ನು ಜೋಡಿಸುವಾಗ ನಾವು ತಿಳಿದೋ, ತಿಳಿಯದೆಯೋ ಎಡವಿದರೆ ಅಥವಾ ಸೋತರೆ ನಮಗೆ ಮೊದಲು ಕಾಣುವುದು ಆತ್ಮಹತ್ಯೆ. ಹಾಗಾಗಿ ಮೊದಲು ಆ ಶಬ್ದವನ್ನು ನಮ್ಮ ಬದುಕಿನಿಂದ ತೆಗೆದುಹಾಕಬೇಕು. ಯೋಗ, ಧ್ಯಾನ ಎಲ್ಲರೊಂದಿಗೆ ಬೆರೆಯಬೇಕು. ಅಧ್ಯಯನ ಮಾಡಬೇಕು. ಸೋತಾಗ ಗೆಲ್ಲುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಸಾತ್ವಿಕ ಚಿಂತನೆಗಳಿಂದ ಮನಸ್ಸು ರಾಗದ್ವೇಷಗಳಿಂದ ಮುಕ್ತವಾಗುತ್ತದೆ. ನಾವು ತಿರಸ್ಕರಿಸಲ್ಪಟ್ಟಾಗ, ನಮ್ಮ ಗುರಿ ತಲುಪಲು ಸಾಧ್ಯವಾಗದೇ ಇದ್ದಾಗ ಸಹನೆ ಮತ್ತು ಶಾಂತಿ ನಮಗೆ ಜತೆಗಾರರಾಗಿರಬೇಕು. ಸದ್ವಿಚಾರಗಳನ್ನು ನಾವು ಹಂಚಬೇಕು. ಸೋಲುಗಳನ್ನೇ ಗೆಲುವಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net