ಎಸ್​ಎಸ್​ಎಲ್​ಸಿಯಲ್ಲಿ ಪೇಲಾಗಿದ್ದಕ್ಕೆ ಆತ್ಮಹತ್ಯೆ

sucide pic
Published on

ಕೋಲಾರ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪೇಲಾಗಿದ್ದಕ್ಕೆ ಮನನೊಂದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾವ್ಯಾ(16) ನೇಣಿಗೆ ಶರಣಾಗಿದ್ದಾರೆ.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾರಹಳ್ಳಿ ನಿವಾಸಿ ತೇರುಪಿಲ್ಲಪ್ಪ ಮತ್ತು ಪದ್ಮಮ್ಮ ದಂಪತಿ ಪುತ್ರಿ ಕಾವ್ಯಾ 2024ರ ಎಸ್​.ಎಸ್​.ಎಲ್​.ಸಿ ಪರೀಕ್ಷೆಯಲ್ಲಿ ಬರೆದಿದ್ದರು. ಗುರುವಾರ ಫಲಿತಾಂಶದಲ್ಲಿ 6 ವಿಷಯಗಳಲ್ಲಿ ಪೇಲಾಗಿದ್ದನ್ನು ಕಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಎನ್ನಲಾಗಿದೆ. ಎಸ್​.ಎಸ್​.ಎಲ್.​ಸಿಯಲ್ಲಿ ಉತ್ತೀರ್ಣರಾಗಿ ಮುಂದೆಯೂ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಒಳ್ಳೆ ಸ್ಥಾನ ಪಡೆಯಬೇಕು ಎಂಬ ಕನಸು ಕಂಡಿದ್ದಳು. ಆದರೆ ಫಲಿತಾಂಶ ಕನಸನ್ನು ನುಚ್ಚುನೂರು ಮಾಡಿದ್ದು, ಅಯ ತೃತೀಯ ಸಾವಿನ ಬಾಗಿಲು ತೆರೆದಿದೆ.

ಶುಕ್ರವಾರ ಬೆಳಗ್ಗೆ ಎಲ್ಲರೊಂದಿಗೆ ಸಂತಸದಿಂದ ಕಾಲ ಕಳೆದ ಕಾವ್ಯ ಮನೆಯವರು ಎಲ್ಲರೂ ಹೊರಗೆ ಹೋದ ನಂತರ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ. ನೇಣುಬಿಗಿದುಕೊಂಡಿದ್ದನ್ನು ಕಂಡ ಕುಟುಂಬಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಉಳಿಸಿಕೊಳ್ಳಲು ಪ್ರಯತ್ನಪಟ್ಟರಾದರೂ ಸಾಧ್ಯವಾಗಲಿಲ್ಲ. ಮಗಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಬಿ.ಇ.ಒ ಸುಕನ್ಯಾ ಸೇರಿ ಶ ಇಲಾಖೆಯ ಇತರ ಅಧಿಕಾರಿಗಳು ಕಾವ್ಯಾಳ ಅಂತಿಮ ದರ್ಶನ ಪಡೆದು ಪಾಲಕರಿಗೆ ಧೈರ್ಯ ತುಂಬಿದರು. ಬಿ.ಇ.ಒ ಸುಕನ್ಯಾ ಮಾತನಾಡಿ, ಪರೀಕ್ಷೆಯಲ್ಲಿ ಪಾಸೂ, ಪೇಲ್​ ಸಾಮಾನ್ಯ. ಪೇಲಾದವರು ಧೃತಿಗೆಡದೆ ಮುಂದಿನ ಪರೀೆಗೆ ತಯಾರಾಗಿ ಉತ್ತೀರ್ಣರಾಗಿ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನ ಪಡಬೇಕು. ವಿದ್ಯಾರ್ಥಿಗಳು ಮೊದಲ ಪ್ರಯತ್ನದ ಪರೀಕ್ಷೆಯಲ್ಲಿ ಪೇಲಾದರೆ ಜೂನ್​ನಲ್ಲಿ ಮತ್ತೆ ಪರೀಕ್ಷೆ ಬರೆದು ಪಾಸಾಗಿ ಪಿಯುಸಿಗೆ ದಾಖಲಾಗುವ ಅವಕಾಶವಿದೆ. ಯಾರೂ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಜೀವನಕ್ಕೆ ಬೇಕಾಗಿರುವುದು ಶಿಣವಾಗಿದ್ದು, ಪೇಲಾದರೆ ಜೀವನವೇ ಇಲ್ಲ ಎನ್ನದೆ ಧೈರ್ಯವಾಗಿ ಇರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net