ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಪ್ರಚೋದನೆ ಮಹಿಳೆಯ ಬಂಧನ

IMG-20211211-WA0014
Published on

ಮಂಗಳೂರು : ನಗರದ ಜೆಪ್ಪು ಬಳಿ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣದಲ್ಲಿ ನೂರ್ ಜಹಾನ್ ಎಂಬ ಮಹಿಳೆ ಮತಾಂತರ ಮಾಡಲು ಯತ್ನಿಸಿದ ಬಗ್ಗೆ ಸಾಕ್ಷ್ಯಾಧಾರ ಲಭಿಸಿದ ಕಾರಣ ಆಕೆಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಶನಿವಾರ ತಿಳಿಸಿದ್ದಾರೆ.
ಪತಿ ನಾಗೇಶ್ ಗೆ ಡೈವೋರ್ಸ್ ಕೊಡು, ನಾನು ಮುಸ್ಲಿಂ ಹುಡುಗನ ಜತೆ ನಿನ್ನ ಮದುವೆ ಮಾಡುತ್ತೇನೆ ಎಂದು ಕೂಡ ನೂರ್ ಜಹಾನ್ ಹೇಳಿದ್ದಳು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ನೂರ್ ಜಹಾನ್ ಳನ್ನು ಬಂಧನ ಮಾಡಲಾಗಿದೆ. ನೂರ್ ಜಹಾನ್ ಮುಸ್ಲಿಮರ ಮದುವೆ ಬ್ರೋಕರ್ ಆಗಿ ಕೆಲಸ ಮಾಡತ್ತಿದ್ದಳು.
ವಿಜಯಲಕ್ಷ್ಮೀ ತನ್ನ ಗಂಡ ನಾಗೇಶ್ ಗೆ ಡೈವೋರ್ಸ್ ನೀಡಲು ನಿರ್ಧರಿಸಿದ್ದಳು ಎಂದು ಕಮಿಷನರ್ ತಿಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net