

ಶ್ರೀದೇವಿಯು ಲೀಲಾಮಹಾರಾಣಿಯ ಪ್ರಶ್ನೆಗೆ ಉತ್ತರಿಸುತ್ತಿದ್ದಾಳೆ. ತೋರಿಕೆಯಲ್ಲಿ (ಭ್ರಾಂತಿಯಲ್ಲಿ) ದೇಶವಿಸ್ತಾರದ ನಿಯಮ ಇಲ್ಲದಿರುವಂತೆ ಕಾಲವಿಸ್ತಾರದ ನಿಯಮವೂ ಇಲ್ಲ ಎಂಬುದು ಶ್ರೀದೇವಿಯು ಕೊಡುತ್ತಿರುವ ಉತ್ತರದ ಪ್ರಧಾನ ಆಶಯ. ಯೋಗವಾಸಿಷ್ಠದ ಪ್ರತಿಪಾದನೆಯಲ್ಲಿ ಮರಣವೂ ಒಂದು ಭ್ರಾಂತಿ. ವೇದಾಂತದ ಸಿದ್ಧಾಂತದ ಪ್ರಕಾರ ಜನ್ಮ-ಮರಣಗಳೆಲ್ಲವೂ ಭ್ರಾಂತಿಯೇ ಆಗಿದೆ. ಆದರೆ ನೇರವಾದ ಶಬ್ದಗಳಿಂದ ಮರಣವನ್ನು ಭ್ರಾಂತಿಯೆಂಬುದಾಗಿ ಉಲ್ಲೇಖಿಸಿದ್ದು ಬೇರೆ ಗ್ರಂಥಗಳಲ್ಲಿ ಅಷ್ಟಾಗಿ ಕಂಡುಬಂದಿಲ್ಲ. ಯೋಗವಾಸಿಷ್ಠವು ‘ಮೃತಿಮೋಹಾದನಂತರಂ’ ಎಂಬಲ್ಲಿ ಮತ್ತು ಇನ್ನೂ ಅನೇಕ ಕಡೆ ನೇರ ಶಬ್ದದಿಂದ ಮರಣವನ್ನು ಭ್ರಾಂತಿಯೆಂದು ಹೇಳುತ್ತದೆ. ವಸ್ತುತಃ ತನಗೆ (ಆತ್ಮನಿಗೆ) ಮರಣವಿಲ್ಲ.
ಮರಣವಿರುವುದು ಶರೀರಕ್ಕೆ. ಶರೀರ ಧರ್ಮವು ತನ್ನಲ್ಲಿ ಆರೋಪಿಸಲ್ಪಟ್ಟಿದೆ. ಇದರಿಂದ ತಾನು ಸಾಯುತ್ತಿದ್ದೇನೆ ಎಂಬ ಅನುಭವವಾಗುತ್ತದೆ. ಹೀಗೆ ವಾಸ್ತವಿಕತೆಯನ್ನು ನೋಡಿದಾಗ ಮರಣವು ಭ್ರಾಂತಿಯೇ ಸರಿ ಎಂದು ಅರ್ಥವಾಗುತ್ತದೆ. ಯೋಗವಾಸಿಷ್ಠದಲ್ಲಿ ಇದು ಸ್ಪಷ್ಟ ಶಬ್ದದಲ್ಲಿ ಉಲ್ಲೇಖಗೊಂಡಿದೆ. ಗಾಢನಿದ್ರೆಯಿಂದ ಎಚ್ಚೆತ್ತು ಕಣ್ತೆರೆದಾಗ ಹೊರಗಿನ ಜಗತ್ತು ಹೊಸದಾಗಿ ತೋರಿಕೊಳ್ಳುತ್ತದೆ ಎಂಬುದು ದೃಷ್ಟಿ-ಸೃಷ್ಟಿವಾದದ ಅಭಿಪ್ರಾಯ. ಗಾಢನಿದ್ರೆಯಲ್ಲಿ ಜಗತ್ತು ಒಂದು ರೀತಿಯಲ್ಲಿ ಲಯಗೊಳ್ಳುತ್ತದೆ. ಎಚ್ಚರಗೊಂಡಾಗ ಪುನಃ ತೋರಿಕೊಳ್ಳುತ್ತದೆ.
ಅರ್ಥಾತ್ ಪುನಃ ಹುಟ್ಟಿಕೊಳ್ಳುತ್ತದೆ. ಇಲ್ಲಿ ಬರುವ ಬೇರೆ ಬೇರೆ ಪ್ರಶ್ನೆಗಳಿಗೆ ದೃಷ್ಟಿ-ಸೃಷ್ಟಿವಾದವು ಉತ್ತರ ನೀಡುತ್ತದೆ. ಆ ವಾದದಂತೆ ಹೇಗೆ ನಿದ್ದೆಯಿಂದ ಎದ್ದು ಮೊದಲ ದೃಷ್ಟಿಯಿಂದಲೇ ಸೃಷ್ಟಿಯೋ ಹಾಗೆಯೇ ಮರಣಾನಂತರ ಹೊಸ ಶರೀರ ಧರಿಸಿ ಈ ಜಗತ್ತಿನ ಕಡೆ ಮೊದಲು ಗಮನ ಹರಿದಾಗ ಗಮನ ಹರಿಯುವಿಕೆಯಿಂದಲೇ ಇದು ತೋರಿಕೊಳ್ಳುತ್ತದೆ. ಅರ್ಥಾತ್ ಹುಟ್ಟಿಕೊಳ್ಳುತ್ತದೆ. ಕಲ್ಪಾಂತದವರೆಗೆ ಸ್ಥಿರವಾಗಿ ನಿಂತಿರುವುದಾಗಿ ಪರಿಗಣಿಸಲ್ಪಟ್ಟಿರುವ ಈ ವಿಸ್ತಾರವಾದ ಜಗತ್ತು ಗಮನ ಹರಿಯುವಿಕೆಯಿಂದಲೇ ತೋರಿಕೊಂಡಿದೆ. ಅರ್ಥಾತ್ ಹುಟ್ಟಿಕೊಂಡಿದೆ. ಹಿಂದೆ ಅನುಭವಿಸದಿದ್ದ ಸಂಗತಿಗಳೂ ತೋರುತ್ತವೆ. ತೋರುತ್ತಿರುವಂತೆಯೇ ಮನಸ್ಸು ಇದನ್ನು ತಾನು ಹಿಂದೆ ಅನುಭವಿಸಿದ್ದೇನೆಂದು ಭಾವಿಸಿಕೊಳ್ಳುತ್ತದೆ. ಯಾಕೆಂದರೆ ಉಳಿದ ಸ್ಮರಣೆ ಹಿಂದಿನ ಅನುಭವದಿಂದಲೇ ಬಂದಿವೆ. ಹಿಂದೆ ಅನುಭವಿಸದಿದ್ದ ಸಂಗತಿಗಳು ತೋರುತ್ತವೆಯೆಂಬುದಕ್ಕೆ ಸ್ವಪ್ನದಲ್ಲಿ ತಾನು ಮರಣಹೊಂದಿದಂತೆ ಕಾಣುವುದು ಉದಾಹರಣೆ. ಎಚ್ಚರವಾಗುತ್ತಿದ್ದಂತೆ ಈ ಮರಣಾನುಭವವು ಸ್ಮರಣೆಯ ರೂಪ ಪಡೆಯುತ್ತದೆ. ಈ ಸ್ಮರಣೆಗೆ ಮೂಲವಾಗಿರುವ ಅನುಭವವು (ಸ್ವಪ್ನದಲ್ಲಿ ಕಂಡದ್ದು) ಯಥಾರ್ಥಾನುಭವವಲ್ಲ. ಯಥಾರ್ಥಾನುಭವಾ ಭಾಸದಿಂದ ಸ್ಮೃತ್ಯಾಭಾಸವು ಹುಟ್ಟಿಕೊಂಡಿದೆ. ಇಂಥದೇ ಒಂದು ದೊಡ್ಡ ಸ್ಮೃತಿಯಭ್ಯಾಸ ಜಗತ್ತಿನ ತೋರಿಕೆ. ಇದನ್ನು ಶ್ರೀದೇವಿಯ ಮುಂದುವರಿದ ಮಾತಿನಲ್ಲಿ ಗಮನಿಸಬಹುದಾಗಿದೆ.
‘‘ಮಗಳೇ, ಸ್ವಪ್ನದಲ್ಲಿ ಕಂಡ ತನ್ನ ಮರಣದಂತೆಯೇ ಈ ಅನಂತ ವಾದ ಜಗತ್ತು ದೊಡ್ಡ ಭ್ರಾಂತಿಯಾಗಿ ಚೈತನ್ಯಾಕಾಶದ ಶಕ್ತಿಯಾದ ಮಾಯಾ ಕಾಶದಲ್ಲಿ ತೋರಿಕೊಂಡಿದೆ. ಕನ್ನಡಿಯಲ್ಲಿ ನಗರದ ಪ್ರತಿಬಿಂಬ ಕಾಣುವುದುಂಟು. ಪ್ರತಿಬಿಂಬ ದಂತೆಯೇ ಇದೆ. ಕನ್ನಡಿಯಲ್ಲಿರುವ ಪ್ರತಿಬಿಂಬಕ್ಕೂ ಈ ಪ್ರತಿಬಿಂಬಕ್ಕೂ ಇರುವ ಅಂತರವೇನೆಂದರೆ ಈ ಪ್ರತಿಬಿಂಬವು ಕನ್ನಡಿಯಿಲ್ಲದೇ ತೋರಿ ಕೊಂಡಿದೆ. ಅಂದರೆ ಕೇವಲ ಕಲ್ಪನೆಯಾ ಗಿದೆ.’ ‘‘ಇನ್ನೊಂದು ರೀತಿಯಲ್ಲಿ ಹೇಳುವು ದಾದರೆ, ಈ ಪ್ರಪಂಚವನ್ನು ‘ಸರ್ಗ ಮತ್ತು ಜಗತ್ತು’ ಎಂದು ಹೇಳಲಾಗಿದೆ. (ಹುಟ್ಟುವಿಕೆ, ಹುಟ್ಟಿನ ನಂತರ ಇರುವಿಕೆ, ಬೆಳವಣಿಗೆ ಹೊಂದುವಿಕೆ, ವಿಪರಿಣಾಮ ಹೊಂದುವಿಕೆ ಅಥವಾ ಬದಲಾಗುವಿಕೆ, ಕ್ಷಯಿಸುವಿಕೆ ಮತ್ತು ನಾಶವಾಗುವಿಕೆ ಈ ಆರು ವಿಕಾರಗಳನ್ನು ಭಾವವಿಕಾರಗಳೆಂದು ಕರೆಯುತ್ತಾರೆ. ಹುಟ್ಟುವ ಎಲ್ಲಾ ಭಾವಪದಾರ್ಥಗಳಿಗೆ ಇವಿಷ್ಟು ಅವಸ್ಥೆಗಳಿರುತ್ತವೆ. ಇವುಗಳಲ್ಲಿ ಮೊದಲ ಮೂರು ವಿಕಾರಗಳನ್ನು ಇಟ್ಟು್ಟಕೊಂಡು ಸರ್ಗ ಎಂಬ ಶಬ್ದ ಬಂದಿದೆ. ಅಂದರೆ ಹುಟ್ಟುವಿಕೆ, ಹುಟ್ಟಿನ ನಂತರ ಇರುವಿಕೆ, ಮತ್ತು ಬೆಳವಣಿಗೆ ಹೊಂದುವಿಕೆ ಈ ಮೂರು ವಿಕಾರಗಳುಳ್ಳ ಪ್ರಪಂಚವನ್ನು ಇಲ್ಲಿ ಸರ್ಗ ಎಂಬುದಾಗಿ ಕರೆಯಲಾಗಿದೆ.
ವಿಪರಿಣಾಮ ಹೊಂದುವಿಕೆ ಅಥವಾ ಬದಲಾಗುವಿಕೆ, ಕ್ಷಯಿಸುವಿಕೆ ಮತ್ತು ನಾಶ ಹೊಂದುವಿಕೆ ಈ ಮೂರು ವಿಕಾರಗಳನ್ನು ಇಟ್ಟುಕೊಂಡು ಜಗತ್ತೆಂಬ ಶಬ್ದ ಬಳಕೆ ಮಾಡಲಾಗಿದೆ.) ಏನೇ ಇದ್ದರೂ ಸ್ಮೃಗೆ ಕಾರಣವಾದ ವಾಸನಗಳೇ ಪ್ರಪಂಚದ ರೂಪವನ್ನು ಧರಿಸಿ ನಿಂತಿವೆ. ಆ ವಾಸನೆಗಳು ಹತ್ತಿರವೇ ಇದ್ದ ವಸ್ತುಗಳನ್ನು ದೂರ ಇದ್ದಂತೆ ತೋರಿಸುತ್ತವೆ, ಕೆಲವೇ ಕ್ಷಣಗಳ ಪರಿಮಿತಿಯಲ್ಲಿರುವ ಘಟನೆಗಳನ್ನು ದೀರ್ಘಕಾಲ ಇರುವಂತೆ ತೋರಿಸುತ್ತವೆ. ಶಾಶ್ವತವೂ ನಿಷ್ಕಿ›ಯವೂ ಆದ ಚೈತನ್ಯದಲ್ಲಿ ಇಂತಹ ವಿಚಿತ್ರ ಭ್ರಾಂತಿಗಳನ್ನು ವಾಸನೆಗಳು ಉಂಟುಮಾಡುತ್ತವೆ. ಆ ವಾಸನೆಗಳಿಂದ ಉಂಟಾದ ಸ್ಮೃಯೇ ಈ ಪ್ರಪಂಚ.’ ‘‘ಈ ಸ್ಮೃಯೆಂಬ ಜ್ಞಾನವು ಹಿಂದೆ ಹೇಳಿದಂತೆ ಎರಡು ರೂಪದಲ್ಲಿ ಕೆಲಸ ಮಾಡುತ್ತದೆ. ಕೆಲವೊಮ್ಮೆ ಹಿಂದೆ ಅನುಭವಿಸಿದ ವಿಷಯಗಳ ಸ್ಮೃಯೇ ಬರುತ್ತದೆ. ಮತ್ತೆ ಕೆಲವೊಮ್ಮೆ ಹಿಂದೆ ಯಥಾರ್ಥದಲ್ಲಿ ಅನುಭವಿಸದೇ ಇರುವ ವಿಷಯಗಳ ಸ್ಮೃಯು ಬರುತ್ತದೆ. ಈ ಸ್ಮೃರೂಪವಾದ ಜ್ಞಾನಕ್ಕೆ ಹಿಂದೆ ಅನುಭವವೆಂಬ ಕಾರಣ ಎಷ್ಟೋ ಸಲ ಇರುವುದೇ ಇಲ್ಲ. ಚೈತನ್ಯದ ಛಾಯೆಯನ್ನು ಪಡೆದು ಚೈತನ್ಯದಂತೆ ರೂಪ ಧರಿಸುವ ಸ್ಮೃರೂಪವಾದ ಜ್ಞಾನವು ಎಲ್ಲವನ್ನೂ ಮಾಡಿಕೊಂಡು ಹೋಗುತ್ತಿರುತ್ತದೆ.’