ಯೋಗಕ್ಷೇಮ: ಯೋಗ ಸಾಧಕರ ಪ್ರೇರಣಾ ದಿನ ರಥಸಪ್ತಮಿ

sun
Published on
ಸೂರ್ಯ ಎಂಬ ಪದವೇ ತುಂಬಾ ಅರ್ಥಗಭಿರ್ತ. "ಸರತಿ ಆಕಾಶೇ ಇತಿ ಸೂರ್ಯಃ' ಯಾರು ಆಕಾಶದಲ್ಲಿ ನಿರಾಧಾರವಾಗಿ ಸುತ್ತುವನೋ ಆತನೇ ಸೂರ್ಯ. "ಸುವತಿ ಕರ್ಮಮಣಿ ಪ್ರೇರಯತಿ' ಯಾರು ತನ್ನ ಉದಯದಿಂದಲೇ ಲೋಕದ ಎಲ್ಲಾ ಜೀವಿಗಳಿಗೆ ತಮ್ಮ ತಮ್ಮ ಕೆಲಸದಲ್ಲಿ ತೊಡಗುವಂತೆ ಪ್ರೇರಣೆ ನೀಡುವನೋ ಆತನೇ ಸೂರ್ಯ. "ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ' ಎಂದು ಋಗ್ವೇದ ತಿಳಿಸುತ್ತದೆ. ಅಂದರೆ ಭಗವಂತನೇ ಇಡೀ ವಿಶ್ವದ ಸಕಲ ಜೀವಿಗಳಿಗೆ ಅಂತರಾತ್ಮನಾಗಿದ್ದಾನೆ.

ಸೂಯೋರ್ಪನಿಷತ್ತಿನಲ್ಲಿ– ಜಗತ್ತಿನ ಸೃಷ್ಟಿ–ಪಾಲನೆ ಹಾಗೂ ಲಯವು ಸೂರ್ಯನಿಂದಲೇ ಆಗುತ್ತಿರುವುದು ಸಂಪೂರ್ಣ ಜಗತ್ತಿನ ಅಂತರಾತ್ಮ ಸೂರ್ಯನೇ ಆಗಿರುವನು ಎಂದಿದೆ.

ಪಾತಂಜಲಯೋಗದರ್ಶನ ವಿಭೂತಿಪಾದ ಸೂತ್ರ 26ರಲ್ಲಿ "ಭುವನಜ್ಞಾನಂ ಸೂಯೇರ್ ಸಂಯಮಾತ್​;– ಸೂರ್ಯನ ಮೇಲೆ ಸಂಯಮ ಮಾಡಿದರೆ ಭುವನ ಜ್ಞಾನವುಂಟಾಗುತ್ತದೆ ಎಂದಿದೆ. ಸೂರ್ಯ ನಿರಂತರ ಕ್ರಿಯಾಶೀಲ, ಕರ್ಮದಲ್ಲಿ ತೊಡಗಿರುವ ಕರ್ಮಯೋಗಿ, "ಕ್ರಿಯಾ ಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ' ಎಂದು ಸುಭಾಷಿತವು ಸೂರ್ಯನ ಕುರಿತು– "ಯಾವುದೇ ಕಾರ್ಯಸಿದ್ಧಿ ಆಗುವುದು ನಮ್ಮೊಳಗಿನ ಅಂತಃ ಸತ್ವದಿಂದ ಹಾಗೂ ಸಂಕಲ್ಪ ಶಕ್ತಿಯಿಂದಲೇ ಹೊರತು ದೊಡ್ಡ ದೊಡ್ಡ ಸಲಕರಣೆಯಿಂದಲ್ಲ' ಎಂದು ಪ್ರೇರೇಪಿಸುತ್ತದೆ.

ನಮ್ಮ ದಿನಚರಿಯ ನಾಯಕ ಈ ದಿವಾಕರ. ಸಕಲರ ಹುಟ್ಟು ಸಾವು ಸರ್ವವೂ ಉದಯಾಸ್ತಗಳ ಮೇಲೆಯೇ ನಿಂತಿದೆ.

ಮಾನವನ ಎಲ್ಲಾ ವಿಧವಾದ ಬಾಳಬದುಕು ಸೂರ್ಯದೇವನ ಮೇಲೆಯೇ ಅವಲಂಬಿತವಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ– "ತೇನ ವಿನಾ ತೃಣಮಪಿ ನ ಚಲತಿ'– ನಿನ್ನ ಅನುಜ್ಞೆ ಹೊರತು ಹುಲ್ಲುಕಡ್ಡಿಯೂ ಅಲ್ಲಾಡದು. ಸೂರ್ಯನ ಶಾಖದಿಂದಲೇ ನೀರು ಕಾದು ಆವಿಯಾಗಿ ಮೋಡವಾಗಿ ಮಳೆ ಸುರಿಯುವುದು. ಸೂರ್ಯನ ಕಿರಣದಿಂದಲೇ ಹರಿತ್ತು–ಹಸಿರು ಉತ್ಪತ್ತಿಯಾಗುವುದು, ಕೆರೆ ತೊರೆ ತುಂಬಿ ಹರಿಯುವುದು. ಈ ನೀರಿನಿಂದ ಬೆಳೆ, ಬೆಳೆಯಿಂದ ಆಹಾರ, ಅದರಿಂದ ಬದುಕು. ಪ್ರಾಣಿಗಳ ಪ್ರಾಣದಾತ ಸೂರ್ಯನಾರಾಯಣ! ಅವನಿಲ್ಲದೇ ಪ್ರಪಂಚವೇ ಶೂನ್ಯ; ಬದುಕೇ ಬರಡು. ಸರ್ವವೂ ಅಂಧಕಾರಮಯ. ಸನಾತನ ಪರಂಪರೆಯಿಂದಲೂ ಭಾರತೀಯರಲ್ಲಿ ದಿವಾಕರನೇ ಪ್ರತ್ಯದೇವರೆಂಬ ನಂಬಿಕೆಯಿದೆ. ಬೆಳಗಾದೊಡನೆ ಎದ್ದು ಮೊದಲು ಮಾಡುವ ನಮಸ್ಕಾರವೇ ಸೂರ್ಯನಾರಾಯಣನಿಗೆ. ಸೂರ್ಯ ಕೃಷಿಕರ ಮಿತ್ರ, ಬಂಧು. ವಿಜ್ಞಾನಿಗಳ ಸ್ನೇಹಿತ, ವೈದಿಕರ– ಜ್ಯೋತಿಷಿಗಳ ಪರಮದೇವ ಈ ಭಾಸ್ಕರ. ವೇದ ಪುರಾಣ ಇತಿಹಾಸಗಳಲ್ಲಿ ವಣಿರ್ಸಲ್ಪಟ್ಟ "ಹಿರಣ್ಯಗರ್ಭ ಪ್ರತ್ಯ ದೇವತೆ.

ಸೂರ್ಯಾತ್​ ಭವತಿ ಭೂತಾನಿ ಸೂಯೇರ್ತಾ ಪಾಲಿತಾನಿ ತು

ಸೂಯೇರ್ ಲಯ ಪ್ರಾಪ್ನುವಂತಿ ಯಃ ಸೂರ್ಯ ಸೋಹಮೇವ ಚ

ಸೂಯೋರ್ಪನಿಷತ್ತಿನಲ್ಲಿ ಸೃಷ್ಟಿ ಕರ್ತ, ಪಾಲಕರ್ತ ಮತ್ತು ಲಯಕರ್ತ ರಾದ ತ್ರಿಮೂತಿರ್ಗಳ ಸ್ವರೂಪಿ ಈತ ಎಂದಿದೆ.

ರಥಸಪ್ತಮಿ: ಸೂರ್ಯದೇವನು ಹುಟ್ಟಿದ ದಿನ ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರ ಮಾರ್ಗದಲ್ಲಿ ಹೊರಟದಿನ. ಹಿಂದುಗಳಿಗೆ ಹಬ್ಬದ ದಿನ. ಮನೆಯ ಮುಂದೆ ಅಥವಾ ತುಳಸಿ ಕಟ್ಟೆಯ ಮುಂದೆ ರಂಗವಲ್ಲಿಯಿಂದ ಸೂರ್ಯರಥದ ಚಿತ್ರಣ. ಅದರಲ್ಲಿ ರವಿಯ ಚಿತ್ರ. ಅದಕ್ಕೆ ಗಂಧ ಪುಷ್ಪ ದೂಪ–ದೀಪಗಳಿಂದ ಪೂಜೆ.ಯೋಗ ಸಾದಕರಂತೂ ಈ ವಿಶೇಷ ದಿನದಂದು ಸೂರ್ಯ ನಮಸ್ಕಾರವನ್ನು ಮಂತ್ರ ಸಹಿತವಾಗಿ 108, 2008 ಆವರ್ತನ ಮಾಡುವವರಿದ್ದಾರೆ.

ಸೂರ್ಯನ ವರ್ಣನೆ: ಸೂರ್ಯ ಹೇಗಿದ್ದಾನೆ? ಮುತ್ತುಗದ ಬಣ್ಣ; ಶ್ವೇತವಸ್ತ್ರಧಾರಿ; ದ್ವಿಭುಜ ಅಥವಾ ದ್ವಾದಶ ಭುಜಗಳು; ಪದ್ಮಹಸ್ತ; ಸಮುದ್ರ ಧ್ವನಿ; ಪಾದಗಳು ಎರಡು ಅಥವಾ ನಾಲ್ಕು ರಥಕ್ಕೆ ಕುದುರೆಗಳು ಏಳು; ಸಾರಥಿ ಅರುಣ; ಕೆಲವೆಡೆ ಸಾರಥಿ ಹೆಸರು ಕನಕಮೂಲ ಮತ್ತು ಬಲಿಜಿತ್​ ಎಂದು ಹೇಳಿದೆ. ತಂದೆ ಕಶ್ಯಪ, ತಾಯಿ ಅದಿತಿ. ಇಬ್ಬರು ಪತ್ನಿಯರು ಎಂದು ಮರೀಚಿ ಮತ್ತು ಭೃಗು ಮಹಷಿರ್ಗಳು ಉಲ್ಲೇಖಿಸಿದ್ದಾರೆ.

ನಮಸ್ತೆ ರುದ್ರರೂಪಾಯ ರಸಾನಾಂ ಪತಯೇ ನಮಃ / ಅರುಣಾಯ ನಮಸ್ತೇಸ್ತು ಹರಿರಶ್ಚ ನಮೋಸ್ತುತೇ

ಇದು ಪ್ರಾರ್ಥನೆ. ಅನಂತರ ನೈವೇದ್ಯ ಪಾತ್ರೆಯಲ್ಲಿ ಹಾಲು ತಂದು ಸೂರ್ಯನ ಕಿರಣದಿಂದಲೇ ಕಾಯಿಸುವುದು. ಸಾಧ್ಯವಾದಲ್ಲಿ ಬೆರಣಿಯ ಬೆಂಕಿಯಿಂದ ಹಾಲುಕ್ಕಿಸಬೇಕು. ಸೂರ್ಯದೇವನಿಗೆ ನೈವೇದ್ಯವಾಯಿತೆಂಬ ನಂಬಿಕೆ. ಮಳೆಯಿಂದಾಗಿ ತರುಲತೆಗಳು ಚಿಗುರೊಡೆಯುವುದರೊಂದಿಗೆ ಮನುಷ್ಯನ ಆಸೆ ಆಕಾಂಕ್ಷಗಳೂ ಚಿಗುರೊಡೆದು ಜೀವನೋತ್ಸಾಹ ಹೆಚ್ಚುವುದರಿಂದ ಮಾನವ ರಥಸಪ್ತಮಿಯ ಆಚರಣೆಯಿಂದ ಕೃತಜ್ಞತೆ ಸಲ್ಲಿಸುತ್ತಾನೆ. ಹಾಗೆಯೇ ಸೂರ್ಯನನ್ನು ಪೂಜಿಸುವ ಇನ್ನೊಂದು ಹಬ್ಬ ಸಂಕ್ರಾಂತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net