

ಪ್ರವಾದಿ ಮುಹಮ್ಮದ್ (ಸ) ಅವರು ಕಪಟ ವಿಶ್ವಾಸಿಯ ಲಕ್ಷಣಗಳಲ್ಲಿ ನಾಲ್ಕು ಲಕ್ಷಣಗಳನ್ನು ಹೆಸರಿಸುತ್ತಾರೆ. ಸುಳ್ಳು, ವಂಚನೆ, ವಚನಭಂಗ ಮತ್ತು ಬೈಗುಳ. ನೆರೆಹೊರೆಯವರಿಗೆ ಕಿರುಕುಳ ಕೊಡುವವನು ಸತ್ಯವಿಶ್ವಾಸಿಯಲ್ಲ. ಶರಾಬು,
ದೇವರು ಮಾನವನಿಗೆ ನೀಡಿರುವ ಅನುಗ್ರಹಗಳಿಗೆ ಪ್ರತಿಯಾಗಿ ಕೃತಜ್ಞತೆಯ ರೂಪದಲ್ಲಿ ನಿರ್ಗತಿಕರಿಗೆ ಬಟ್ಟೆಯನ್ನು ಕೊಡಿಸಬೇಕು. ಅನ್ನ ನೀಡಬೇಕು. ಯಾವ ವ್ಯಕ್ತಿ ಬಡವನ ಮಾನವನ್ನು ಮುಚ್ಚಲು ಬಟ್ಟೆಯನ್ನು ತೊಡಿಸುವನೋ ಆ ವ್ಯಕ್ತಿಯ ಮಾನವನ್ನು ನಿರ್ಣಾಯಕ ದಿನದಂದು ದೇವರು ಸ್ವರ್ಗದ ಹಸಿರು ಬಟ್ಟೆಯಿಂದ ಮುಚ್ಚುವನು.
‘ಈ ಲೋಕದ ಸೇವಕರು ನಿಮ್ಮ ಬಂಧು ಬಳಗದವರು. ದೈವವು ಅವರನ್ನು ನಿಮ್ಮ ವಶಕ್ಕೆ ನೀಡಿದೆ. ನೀವು ಅವರಿಗೆ ಕುಡಿಸಿರಿ, ನೀವು ಉಣ್ಣುವುದನ್ನು ಅವರಿಗೆ ಉಣಿಸಿರಿ. ಅವರ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಅವರಿಂದ ಸೇವೆಯನ್ನು ಪಡೆಯಿರಿ. ಒಂದು ನಿರ್ದಿಷ್ಟ ಕಾರ್ಯವು ಅವರಿಂದ ಮಾಡಲು ಸಾಧ್ಯವಾಗದಿದ್ದರೆ ಆ ಕಾರ್ಯದಲ್ಲಿ ಅವರಿಗೆ ಸಹಕರಿಸಿ.’ ಪವಿತ್ರವೂ ಮಾನವೀಯತೆಯಿಂದ ಕೂಡಿದವುಗಳೂ ಆದ ಪೈಗಂಬರರ ಈ ನುಡಿಗಳು ಜಗತ್ತಿಗೆ ಬೆಳಕನ್ನು ನೀಡುವಂಥವುಗಳಾಗಿವೆ.
ನಾಳಿನ ಅಂತರಂಗದಲ್ಲಿ: ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು