ಬಿಕಿನಿಯಲ್ಲಿ ಕಣ್ಮರೆಯಾದ ಭಾರತೀಯ ವಿದ್ಯಾರ್ಥಿನಿ ಕೇಸ್​ಗೆ ಸ್ಫೋಟಕ ತಿರುವು! ಬಾರ್​ನಲ್ಲಿ ಆಕೆ ಜತೆಗಿದ್ದಿದ್ದು ಯಾರು? Sudiksha Konanki

Sudiksha Konanki
Published on

Sudiksha Konanki : ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೊನಂಕಿ (20) ಬಿಕಿನಿ ಉಡುಗೆಯಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಭಾರಿ ಚರ್ಚೆ ಹುಟ್ಟುಹಾಕಿದೆ.

ಅಮೆರಿಕದ ವರ್ಜೀನಿಯಾದಲ್ಲಿ ನೆಲೆಸಿದ್ದ ಸುದೀಕ್ಷಾ, ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು. ತಮ್ಮ ಐವರು ಸ್ನೇಹಿತರೊಂದಿಗೆ ಕೆರಿಬಿಯನ್ ದೇಶಕ್ಕೆ ರಜೆಯ ಮೇಲೆ ಹೋಗಿದ್ದರು. ಮಾರ್ಚ್ 6 ರಂದು ಬೀಚ್‌ನಲ್ಲಿ ಅಡ್ಡಾಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಕಣ್ಮರೆಯಾದರು. ಆಕೆ ಕಾಣದಿದ್ದಾಗ ಆಕೆಯ ಸ್ನೇಹಿತರು ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂತು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ದೋಣಿಗಳೊಂದಿಗೆ ಹುಡುಕಾಟ ನಡೆಸಿದರು. ಆದರೆ, ಇಂದಿನವರೆಗೂ ಆಕೆಯ ಸುಳಿವು ಕೂಡ ಸಿಕ್ಕಿಲ್ಲ. ರಿಯು ರಿಪಬ್ಲಿಕಾ ರೆಸಾರ್ಟ್‌ನಲ್ಲಿರುವ ವಿಡಿಯೋಗಳನ್ನು ಪರಿಶೀಲಿಸಿದಾಗ, ಆಕೆ ಯುವಕ ಜೋಶುವಾ ರೆಬೆ ಜೊತೆ ರೆಸಾರ್ಟ್‌ನಿಂದ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಅನುಮಾನದ ಮೇಲೆ ಆತನನ್ನು ಬಂಧಿಸಿ ಪ್ರಶ್ನಿಸಿದಾಗ, ತನಗೇನು ತಿಳಿದಿಲ್ಲ ಎಂದು ಹೇಳಿದ್ದಾನೆ.

ನಾವಿಬ್ಬರು ಬೀಚ್‌ಗೆ ಹೋಗಿದ್ದು ನಿಜ. ಒಮ್ಮೆ ಅಲೆ ಬಂದಾಗ ಸುದೀಕ್ಷಾ ಕೆಳಗೆ ಬಿದ್ದರು. ಈ ವೇಳೆ ನೀರು ನುಂಗಿ ವಾಂತಿ ಮಾಡಿಕೊಂಡರು. ಆನಂತರ ಆಕೆ ಬೀಚ್‌ನಲ್ಲೇ ನಿದ್ರೆಗೆ ಜಾರಿದಳು. ನಂತರ ಆಕೆಗೆ ಏನಾಯಿತು ಅನ್ನೋದು ನನಗೆ ತಿಳಿದಿಲ್ಲ ಎಂದು ಜೋಶುವಾ ರೆಬೆ ಹೇಳಿದ್ದಾನೆ. ಇದಾದ ಬಳಿಕ ಪೊಲೀಸರು ಜೋಶುವಾ ಮೇಲೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ ಆದರೆ, ಆತನ ಮೇಲೆ ನಿಗಾ ಇಟ್ಟಿದ್ದಾರೆ.

ಇದನ್ನೂ ಓದಿ: ಸಾಯಲೆಂದು ವಿದ್ಯುತ್ ಟವರ್ ಏರಿದ ಮಗ: ಪರಿ ಪರಿಯಾಗಿ ಬೇಡಿಕೊಂಡ್ರೂ ಅಮ್ಮನ ಎದುರೇ ಸಾವಿಗೆ ಶರಣಾದ ಪುತ್ರ! Electrocution ಇತ್ತೀಚೆಗೆ ಅಧಿಕಾರಿಗಳು ಹೆಚ್ಚಿನ ವಿಡಿಯೋಗಳನ್ನು ಪರಿಶೀಲಿಸಿದ್ದಾರೆ. ಬಾರ್‌ನಲ್ಲಿನ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಸ್ನೇಹಿತರೊಂದಿಗೆ ಸುದೀಕ್ಷಾ ಇರುವ ವಿಡಿಯೋಗಳು ಹೊರಬಿದ್ದಿವೆ. ಒಂದು ವಿಡಿಯೋದಲ್ಲಿ ಜೊಶುವಾ ಹೊರತು ಬೇರೆ ವಿದ್ಯಾರ್ಥಿಯೊಂದಿಗೆ ಆಕೆ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಆತ ಸುದೀಕ್ಷಾ ಜತೆ ಬಹಳ ಹೊತ್ತು ಮಾತನಾಡುತ್ತಿರುವುದು ಕಂಡುಬಂದಿದೆ. ಇಬ್ಬರು ಮದ್ಯ ಸೇವಸಿ, ಮೋಜು ಮಸ್ತಿ ಮಾಡಿರುವುದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜೋಶುವಾ ರೆಬೆ ಪ್ರಸ್ತುತ ಪೊಲೀಸ್ ವಶದಲ್ಲಿದ್ದಾನೆ. ಆತನ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದಾಗ್ಯೂ, ತನಿಖೆಗೆ ಸಹಕರಿಸುವುದಾಗಿ ಜೋಶುವಾ ಹೇಳಿದ್ದಾನೆ.

ಅಂದಹಾಗೆ ಸುದೀಕ್ಷಾ, ಅಮೆರಿಕದಲ್ಲಿ ನೆಲೆಸಿದ್ದರಿಂದ ಅಮೆರಿಕದ ಅಧಿಕಾರಿಗಳು ಡೊಮಿನಿಕನ್ ರಿಪಬ್ಲಿಕ್ ಅಧಿಕಾರಿಗಳ ಜೊತೆಗೆ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದಾಗ್ಯೂ, ಸ್ಥಳೀಯ ಅಧಿಕಾರಿಗಳು ಆಕೆ ಬೀಚ್‌ನಿಂದಲೇ ನಾಪತ್ತೆಯಾಗಿರಬೇಕು ಅಂದ್ರೆ ಸಮುದ್ರ ಪಾಲಾಗಿರಬಹುದು ಎಂದು ಊಹಿಸಿದ್ದಾರೆ. ಆದರೆ ಸುದೀಕ್ಷಾಳ ಪೋಷಕರು ಮಾತ್ರ ಅದನ್ನು ಒಪ್ಪುತ್ತಿಲ್ಲ. ತಮ್ಮ ಮಗಳನ್ನು ಯಾರೋ ಅಪಹರಿಸಿರಬೇಕು ಎಂದು ಆರೋಪಿಸಿದ್ದಾರೆ. ಪ್ರಸ್ತುತ, ಅಧಿಕಾರಿಗಳು ವಿವಿಧ ಆಯಾಮಗಳಿಂದ ತನಿಖೆಯನ್ನು ಮುಂದುವರಿಸಿದ್ದಾರೆ. ಮಾರ್ಚ್ 5ರ ರಾತ್ರಿ ಪಂಟಾ ಕಾನಾದ ರೆಸಾರ್ಟ್ ನೈಟ್‌ಕ್ಲಬ್‌ನಲ್ಲಿ ನಡೆದ ಪಾರ್ಟಿಯ ಇತ್ತೀಚಿನ ದೃಶ್ಯಗಳು ಸಹ ವೈರಲ್ ಆಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net