ಸುಧಾಮದಾಸ್ ನಾಮಕರಣ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡದೆ ಈಗ ಬಂದವರಿಗೆ ಮಣೆ ಹಾಕಿದ್ದು ತಪ್ಪು

kh muniyappa
Published on

ಬೆಂಗಳೂರು:

ಸುಧಾಮದಾಸ್ ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಹೈಕಮಾಂಡ್‌ಗೆ ಪತ್ರ ಬರೆದಿರುವುದು ನಿಜ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪಕ್ಷಕ್ಕೆ ಸಂಬಂದಿಸಿದ ವಿಚಾರ ಆಗಿರುವುದರಿಂದ ನಮ್ಮ ಅಭಿಪ್ರಾಯವನ್ನು ಎಲ್ಲಿ ಹೇಳಬೇಕೊ ಅಲ್ಲಿ ಹೇಳಿದ್ದೇವೆ ಎಂದರು.

30-40 ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡದೆ, ಸರ್ಕಾರಿ ನೌಕರಿ ಬಿಟ್ಟು, 3 ತಿಂಗಳ ಹಿಂದೆಯಷ್ಟೆ ಪಕ್ಷಕ್ಕೆ ಸೇರಿದ ಸುಧಾಮದಾಸ್ ಅವರಿಗೆ ಮಣೆ ಹಾಕಿರುವುದು ಸರಿಯಲ್ಲ ಎನ್ನುವ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಲಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಲು ಅವಕಾಶವಿದೆ ಎಂದು ಪ್ರಶ್ನಯೊಂದಕ್ಕೆ ಉತ್ತರಿಸಿದರು. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ ಎಂದು ಹೇಳಿದರು.

ಪಕ್ಷದ ಆಂತರಿಕ ವಿಚಾರ:

ಸುಧಾಮದಾಸ್ ವಿಷಯದಲ್ಲಿ ಹೈಕಮಾಂಡ್‌ಗೆ ಬರೆದಿರುವ ಪತ್ರಕ್ಕೆ ಸಹಿ ಹಾಕಿರುವುದು ನಿಜ. ಆದರೆ, ಇದೆಲ್ಲವೂ ಪಕ್ಷದ ಆಂತರಿಕೆ ವಿಚಾರವಾಗಿದೆ. ಪಕ್ಷದೊಳಗಿನ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಹೈಕಮಾಂಡ್ ಯಾವ ರೀತಿಯಲ್ಲಿ ಯೋಚಿಸಿ ತೀರ್ಮಾನ ಮಾಡಿದೆಯೋ ಗೊತ್ತಿಲ್ಲ. ಆ ತೀರ್ಮಾನಕ್ಕೆ ನಾವು ಬದ್ದ. ಈ ಬಗ್ಗೆ ನಾನು ಮಾಧ್ಯಮ ಎದುರು ಮಾತನಾಡುವುದಿಲ್ಲ.

-ಆರ್.ಬಿ.ತಿಮ್ಮಾಪೂರ, ಅಬಕಾರಿ ಸಚಿವ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net