ವಾರಕ್ಕೆ 70 ಘಂಟೆಗಳ ಕೆಲಸ; ನನ್ನ ಪತಿ ವಾರಕ್ಕೆ 80-90 ಘಂಟೆ ಕೆಲಸ ಮಾಡುತ್ತಾರೆಂದ ಸುಧಾ ಮೂರ್ತಿ

Sudha Narayan Murthy
Published on

ಬೆಂಗಳೂರು: ಯುವ ಉದ್ಯೋಗಿಗಳು ವಾರಕ್ಕೆ ಕನಿಷ್ಠ ಎಂದರು 70 ಘಂಟೆಗ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದ್ದು, ಇದೀಗ ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಚರ್ಚೆಗೆ ದನಿಗೂಡಿಸಿದ್ದು ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ 14ನೇ ಟಾಟಾ ಲಿಟರೇಚರ್ ಫೆಸ್ಟಿವಲ್​ನಲ್ಲಿ ಭಾಗವಹಿಸಿದ ಸುಧಾ ಮೂರ್ತಿ ತಮ್ಮ ಪತಿಯ ಕಾರ್ಯ ಪ್ರವೃತ್ತಿಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದ್ದಾರೆ.

Sudha Murthy

ಅವರು ಒಂದು ವಾರದಲ್ಲಿ 80-90 ಗಂಟೆ ಕೆಲಸ ಮಾಡುತ್ತಾರೆ. ಅದಕ್ಕಿಂತ ಕಡಿಮೆ ಅವಧಿ ಕೆಲಸ ಮಾಡುವುದೆಂದರೆ ಗೊತ್ತಿಲ್ಲ. ನಿಜವಾದ ಪರಿಶ್ರಮದಲ್ಲಿ ಅವರಿಗೆ ನಂಬಿಕೆ ಇದೆ. ಅದರಂತೆಯೇ ಅವರು ಬದುಕಿದವರು. ತಮಗೆ ಅನಿಸಿದ್ದನ್ನು ಅವರು ಹೇಳಿದ್ದಾರೆ. ‘ಜನರು ಹೇಳುವ ರೀತಿ ಭಿನ್ನವಾಗಿರುತ್ತದೆ. ಅವರು ಏನು ಹೇಳಿದ್ದಾರೋ ಅದೇ ರೀತಿ ಬದುಕಿ ತೋರಿಸಿದ್ದಾರೆ. ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇತ್ತ ನಾರಾಯಣ ಮೂರ್ತಿ ಹೇಳಿಕೆಗೆ ದನಿಗೂಡಿಸಿರುವ ಮಹಿಳೆಯೊಬ್ಬರು ಆಫೀಸ್​ ಹಾಗೂ ಮನೆಯ ನಡುವೆ ಮಹಿಳೆಯರು 70 ಘಂಟೆಗೂ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ. ಯಾವುದೇ ಎಕ್ಸ್​ಟ್ರಾ ಪೇಮೆಂಟ್​ ಕೇಳದೆ ಮಹಿಳೆಯರು ದೇಶವನ್ನು ಕಟ್ಟಲು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಯಾರು ಧ್ವನಿ ಎತ್ತದೆ ಇರುವುದು ಬೇಸರದ ಸಂಗತಿ ಎಂದು ರಾಧಿಕಾ ಗುಪ್ತಾ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net