ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕು; ನಾರಾಯಣ ಮೂರ್ತಿಯವರ ಹೇಳಿಕೆಗೆ ಪತ್ನಿ ಸುಧಾಮೂರ್ತಿ ರಿಯಾಕ್ಷನ್​ ಹೀಗಿದೆ.. | Sudha Murthy

Untitled design (39)
Published on

ನವದೆಹಲಿ: ದೇಶದ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆ ಹಲವು ವಾದ-ವಿವಾದಗಳನ್ನು ಹುಟ್ಟುಹಾಕಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ನಾಂದಿ ಹಾಡಿತು. ಸದ್ಯ ಈ ಕುರಿತು ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಇನ್ಫೋಸಿಸ್​ ಫೌಂಡೇಶನ್​​​​​​​​​​ ಅಧ್ಯಕ್ಷೆ ಸುಧಾ ಮೂರ್ತಿ(Sudha Murthy) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜನರು ತಮ್ಮ ಕೆಲಸದ ಬಗ್ಗೆ ಉತ್ಸುಕರಾಗಿದ್ದರೆ ಸಮಯ ಎಂದಿಗೂ ಮಿತಿಯಾಗುವುದಿಲ್ಲ ಎಂದು ಸುಧಾ ಮೂರ್ತಿ ಹೇಳಿದರು. ಜನರು ಏನನ್ನಾದರೂ ಗಂಭೀರತೆ ಮತ್ತು ಉತ್ಸಾಹದಿಂದ ಮಾಡಲು ಬಯಸಿದರೆ ಅದಕ್ಕೆ ಯಾವುದೇ ಸಮಯದ ಮಿತಿ ಇರುವುದಿಲ್ಲ. ತಮ್ಮ ಪತಿ ಯಾವುದೇ ಹಣವಿಲ್ಲದೆ ಇನ್ಫೋಸಿಸ್ ಅನ್ನು ನಿರ್ಮಿಸಲು ನಿರ್ಧರಿಸಿದ್ದರು, ಆದರೆ ಕೆಲವು ಅತ್ಯಂತ ಶ್ರಮಶೀಲ ಮತ್ತು ಸಮರ್ಪಿತ ಸಹೋದ್ಯೋಗಿಗಳೊಂದಿಗೆ ಇಂದು ಅವರು ಈ ಸ್ಥಾನಕ್ಕೆ ತಲುಪಲು ಕಾರಣವಾಯಿತು ಎಂದು ಹೇಳಿದರು.

ಅವರು 70 ಗಂಟೆ ಅಥವಾ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿರುವುದು. ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಇನ್ಫೋಸಿಸ್ ಅನ್ನು ಇಷ್ಟು ದೊಡ್ಡದಾಗಿಸುವ ಮಂತ್ರದಂಡ ಯಾವುದೂ ಇರಲಿಲ್ಲ. ಇದರಲ್ಲಿ ಅವರ ಕಠಿಣ ಪರಿಶ್ರಮ, ಸ್ವಲ್ಪ ಅದೃಷ್ಟ, ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಕೆಲಸ ಮಾಡುವುದು ಇತ್ಯಾದಿ ಹಲವು ವಿಷಯಗಳು ಸೇರಿದ್ದವು ಎಂದರು.

ಅಲ್ಲದೆ ಆ ವರ್ಷಗಳಲ್ಲಿ ಮಾಡಿದ ವೈಯಕ್ತಿಕ ತ್ಯಾಗಗಳನ್ನು ಉಲ್ಲೇಖಿಸಿದ ಸುಧಾಮೂರ್ತಿ ಅವರು, ತಮ್ಮ ಪತಿಯ ಬೇಡಿಕೆಯ ವೃತ್ತಿಜೀವನದೊಂದಿಗೆ ಕುಟುಂಬ ಜೀವನವನ್ನು ಹೇಗೆ ಸಮತೋಲನಗೊಳಿಸಿದರು ಎಂಬುದನ್ನು ತಿಳಿಸಿದರು. ನಾನು ಕೆಲಸದಲ್ಲಿ ತೊಡಗಿಸಿಕೊಳ್ಳಲು ನನ್ನದೇ ಆದ ದಾರಿಯನ್ನು ಕಂಡುಕೊಳ್ಳಬೇಕು ಮತ್ತು 'ನನಗೆ ಸಮಯವಿಲ್ಲ ಅಥವಾ ನಿಮಗೂ ಸಮಯವಿಲ್ಲ ಎಂದು ಯೋಚಿಸಬಾರದು ಮತ್ತು ಅದನ್ನು ಆನಂದಿಸಬೇಕು ಎಂದು ನಾನು ಕಲಿತಿದ್ದೇನೆ. ನಾನು ಬರೆಯುತ್ತಿದ್ದೆ ಆದರೆ ನಾನು ಸ್ವಲ್ಪ ಹೆಚ್ಚು ಬರೆಯಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ನೀವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಸುಂದರರಾಗಿರಲಿ ಅಥವಾ ಕುರೂಪರಾಗಿರಲಿ ದೇವರು ಎಲ್ಲರಿಗೂ 24 ಗಂಟೆಗಳನ್ನು ನೀಡಿದ್ದಾನೆ. ನೀವು ಅದನ್ನು ಹೇಗೆ ಖರ್ಚು ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಮತ್ತು ನೀವು ಯಾವುದೇ ಕೆಲಸವನ್ನು ಉತ್ಸಾಹದಿಂದ ಮಾಡಲು ಬಯಸಿದರೆ ಅದಕ್ಕೆ ಸಮಯ ಬೇಕಾಗುತ್ತದೆ. ನೀವು ನಿಮ್ಮ ಕೆಲಸದ ಬಗ್ಗೆ ಉತ್ಸಾಹ ಹೊಂದಿದ್ದರೆ ಅದನ್ನು ನಿಮ್ಮ ಸಂಗಾತಿ ಅದನ್ನು ಬೆಂಬಲಿಸಬೇಕು ಎಂದು ಅವರು ಹೇಳಿದರು.

ಸಂದರ್ಶನವೊಂದರಲ್ಲಿ ನಾರಾಯಣ ಮೂರ್ತಿ ಅವರು, ದೇಶದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಹೇಳಿದ್ದರು. ಅದೇ ಸಮಯದಲ್ಲಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವುದನ್ನು ಪರಿಗಣಿಸಬೇಕು ಎಂದು ಸೂಚಿಸಿದರು. ಈ ಹೇಳಿಕೆಯು ಕೆಲಸ-ಜೀವನದ ಸಮತೋಲನದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net