ಕಿಚ್ಚನ ಬಾಲ್ಯದ ಕ್ಷಣ ನೆನಪಿಸಿದ ಬಾಲಕ! ತಾನು ಹಾಕಿದ್ದ ಬ್ರೇಸ್‌ಲೆಟ್ ಗಿಫ್ಟ್ ಕೊಟ್ಟ ಸುದೀಪ್..Big Boss Finale

sudeep
Published on

ಬೆಂಗಳೂರು:  ( Big Boss Finale ) ಕನ್ನಡದ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಪೂರ್ಣಗೊಂಡಿದೆ. ಹನುಮಂತ ಸೀಸನ್ 11ರ ವಿನ್ನರ್​ ಆಗಿ ಹೊರ ಹೊಮ್ಮಿದ್ದು,  ತ್ರಿವಿಕ್ರಮ್​ ರನ್ನರ್​ ಆಪ್​ ಆಗಿದ್ದಾರೆ.  ಈ ಕಾರ್ಯಕ್ರಮದ ಸೂತ್ರಧಾರಿಯಾಗಿದ್ದ ಸುದೀಪ್​​ ಅವರಿಗೆ ಬಿಗ್​ಬಾಸ್​ ತಂಡ ಒಂದು ಸಾಂಗ್​​ ಅರ್ಪಣೆ ಮಾಡಲಾಗಿದೆ.

ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಅವರ 11 ವರ್ಷದ ಜರ್ನಿಗೆ ಬಿಗ್​ಬಾಸ್​ ತಂಡ ಡ್ಯಾನ್ಸ್ ಮೂಲಕ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ಬಿಗ್​ಬಾಸ್ ( Big Boss Finale ) ​ ವೇದಿಕೆ ಮೇಲೆ ಸುದೀಪ್​  ಭಾವುಕರಾಗಿದ್ದಾರೆ.

ಸುದೀಪ್​ ಅವರಿಗಾಗಿ ನಿರ್ದೇಶಕ ಯೋಗರಾಜ್ ಭಟ್ ಅವರು ಅಮ್ಮನಿಗಾಗಿ ಹಾಡನ್ನು ಬರೆದಿದ್ದಾರೆ. ಅಮ್ಮನ ಪೋಷನ್​ಗೆ ಧ್ವನಿ ಕೊಟ್ಟಿದ್ದು ಕಿಚ್ಚ ಸುದೀಪ್​ ಅವರ ಮಗಳು ಸಾನ್ವಿ. ಯೋಗರಾಜ್ ಭಟ್ ಅವರು ಬರೆದ ಅಮ್ಮನ ಹಾಡಿಗೆ ಧ್ವನಿ ಕೊಟ್ಟಿದ್ದು ಸ್ಟಾರ್ ಗಾಯಕ ವಾಸುಕಿ ವೈಭವ್.  ಕಿಚ್ಚ ಸುದೀಪ್​ ಅವರ ಅಮ್ಮನಿಗಾಗಿ ವೇದಿಕೆ ಮೇಲೆ ಅದ್ಭುತವಾಗಿ ಡ್ಯಾನ್ಸ್​ ಪರ್ಫಾರ್ಮೆನ್ಸ್​ ನೀಡುವ ಮೂಲಕ ನಮನವನ್ನು ಸಲ್ಲಿಸಲಾಗಿತ್ತು. ಈ ವೇಳೆ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಯುವನ್ ಕುಮಾರ್​ ಬಾಲ್ಯದ ಕಿಚ್ಚ ಸುದೀಪ್​ ಆಗಿ ಡ್ಯಾನ್ಡ್​ ಮಾಡಿದ್ದಾರೆ.

ಯುವನ್ ಕುಮಾರ್ ಡ್ಯಾನ್ಸ್​ ಮೆಚ್ಚಿದ ಕಿಚ್ಚ ಸುದೀಪ್ ಅವರು ತಾವು ಧರಿಸಿದ್ದ ಬೆಲೆ ಬಾಳುವ ಪ್ಲಾಟಿನಂ ಚೈನ್ ಅನ್ನು ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಕಿಚ್ಚನಿಂದ ಪ್ಲಾಟಿನಂ ಚೈನ್ ಗಿಫ್ಟ್​ ಆಗಿ ಪಡೆದ ಡ್ಯಾನ್ಸರ್​ ಯುವನ್ ಕುಮಾರ್ ಫುಲ್ ಖುಷ್​ ಆಗಿದ್ದಾನೆ.

ಕಿಚ್ಚ ಸುದೀಪ್ ಅವರು ಸೀಸನ್‌ 11 ನನ್ನ ಕೊನೆಯ ಬಿಗ್​ಬಾಸ್​ ಶೋ ಅಂತ ಘೋಷಣೆ ಮಾಡಿದ್ದಾರೆ. ಹೀಗಾಗಿ ಕಟ್ಟ ಕಡೆಯ ಬಿಗ್ ಬಾಸ್ ಶೋ ವೇಳೆ ಕಿಚ್ಚ ಸುದೀಪ್​ ಕಣ್ಣೀರು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net