ಸುದ್ದಿ ಸಮಗ್ರ: ಗಡಿಯಲ್ಲಿ ಚೀನಾ ಸೇನಾಬಲ ಹೆಚ್ಚಳ

galwan
Published on

ನವದೆಹಲಿ: ಲಡಾಖ್​ನ ಗಲ್ವಾನ್​ ಕಣಿವೆ ರ್ಷಣೆ ನಡೆದ ಒಂದು ವರ್ಷದ ಬಳಿಕ ಚೀನಾ ಸೇನೆ ಗಡಿಯಲ್ಲಿ ಮತ್ತೆ ಬಲ ಹೆಚ್ಚಿಸಿಕೊಳ್ಳುತ್ತಿದ್ದು, ಅಗತ್ಯ ಮೂಲಸೌಕರ್ಯ ವೃದ್ಧಿಗೆ ಮುಂದಾಗಿದೆ. ಗಡಿಯ ತನ್ನ ಭಾಗದಲ್ಲಿ ಸೇನೆಗೆ ಉಳಿದುಕೊಳ್ಳಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಸೈನಿಕರ ನಿಯೋಜನೆ ಹೆಚ್ಚಿಸುವುದು ಅದರ ಉದ್ದೇಶ ಆಗಿರಬಹುದು. ಭಾರತದ ಜತೆಗೆ ದೀರ್ಘಾವಧಿ ಸಂರ್ಷಕ್ಕೆ ಚೀನಾ ಸಜ್ಜಾಗುತ್ತಿರುವ ಲಕ್ಷಣ ಕಂಡುಬರುತ್ತಿದೆ ಎಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಡಾಖ್​ ಗಡಿ ಸಮೀಪದಲ್ಲಿರುವ ರುಡೋಕ್​, ಕಾಂಗ್ಕಸಿವಾರ್​, ಗ್ಯಾಂಗ್ಟಸೆ, ಗೋಲ್ಮಡ್​ ಪ್ರದೇಶಗಳಲ್ಲಿ ಹೆಚ್ಚುವರಿ ಕಮಾಂಡಂಟ್​ಗಳನ್ನು ಚೀನಾ ಸೇನೆ ನಿಮಿರ್ಸುತ್ತಿದೆ. ಇವುಗಳಲ್ಲಿ ಕೆಲ ಸೇನಾ ಶಿಬಿರಗಳು ತಾತ್ಕಾಲಿಕ, ಹಲವು ಶಾಶ್ವತ ಸೇನಾ ಶಿಬಿರಗಳಾಗಿವೆ. ಭಾರತದ ಜತೆಗಿನ ಮಾತುಕತೆ ಬಳಿಕ ಪ್ಯಾಂಗಾಂಗ್​ ಸರೋವರ ದಡದಲ್ಲಿ ನಿಯೋಜನೆ ಮಾಡಲಾಗಿದ್ದ ಎರಡು ಸೇನಾ ತುಕಡಿಗಳನ್ನು ವಾಪಸ್​ ಪಡೆಯಲಾಗಿತ್ತು. ಆದರೆ ಈಗ ಗಡಿಯ ಬಳಿ ಮತ್ತೆ ಎರಡು ತುಕಡಿಗಳನ್ನು ಮರು ನಿಯೋಜನೆ ಮಾಡಲಾಗಿದೆ. ಇದರಲ್ಲಿ ಆಟಿರ್ಲರಿ ರೆಜಿಮೆಂಟ್​ ಹಾಗೂ ಏರ್​ ಡಿೆನ್ಸ್​ ರೆಜಿಮೆಂಟ್​ ಕೂಡ ಸೇರಿದೆ ಎಂದು ಮೂಲಗಳು ತಿಳಿಸಿವೆ. ಗಡಿಯ ಬಳಿ ಸೇನಾ ಆಸ್ಪತ್ರೆಗಳನ್ನೂ ನಿರ್ಮಾಣ ಮಾಡಿಕೊಂಡಿದೆ. ಜತೆಗೆ ಹಿಮದ ನಡುವೆ ಚಲಿಸುವ ಮಿಲಿಟರಿ ವಾಹನ, ಇನ್ನಿತರ ಅಗತ್ಯ ಪರಿಕರಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದೆ. ಚಳಿಗಾಲದ ಅವಧಿಯಲ್ಲೂ ಗಡಿಯಲ್ಲಿ ಸೈನಿಕರನ್ನು ನಿಯೋಜನೆ ಮಾಡಲು ಚೀನಾ ಯೋಜನೆ ರೂಪಿಸಿರುವಂತೆ ಕಾಣುತ್ತದೆ ಎಂದು ತಜ್ಞರು ಹೇಳಿದ್ದಾರೆ. ಲಡಾಖ್​ನಲ್ಲಿ ಚಳಿಗಾಲದಲ್ಲಿ ವಿಪರೀತ ಹಿಮಪಾತ ಉಂಟಾಗುವ ಕಾರಣ ಭಾರತ&ಚೀನಾ ತಮ್ಮ ಸೇನಾ ಪೋಸ್ಟ್​ಗಳಿಂದ ಕೆಲ ದಿನ ಹಿಂದೆ ಸರಿಯುತ್ತವೆ.

ಅಣ್ವಸ್ತ್ರ ಟಕದಲ್ಲಿ ಸೋರಿಕೆ?: ಚೀನಾದ ಗುವಾಂಗ್​ಡಾಂಗ್​ ಪ್ರದೇಶದಲ್ಲಿರುವ ಅಣು ವಿದ್ಯುತ್​ ಟಕದಿಂದ ಸೋರಿಕೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಆದರೂ ಈ ಟಕ ಕಾರ್ಯ ಮುಂದುವರಿಸಿದೆ. ಈ ಟಕದಲ್ಲಿ ಪಾಲುದಾರಿಕೆ ಹೊಂದಿರುವ ್ರೆಂಚ್​ ಮೂಲದ ಕಂಪನಿ ಈ ವಿಚಾರವನ್ನು ಖಚಿತಪಡಿಸಿದೆ ಎಂದು ಅಮೆರಿಕ ಗುಪ್ತಚರ ವರದಿ ತಿಳಿಸಿದೆ.

ಏನಿದು ಗಲ್ವಾನ್​ ಗಲಾಟೆ?

ಕಳೆದ ವರ್ಷ ಜೂನ್​ 15ರ ರಾತ್ರಿ ಲಡಾಖ್​ನ ಗಲ್ವಾನ್​ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂರ್ಷ ನಡೆದಿತ್ತು. ಕಳೆದ ನಾಲ್ಕು ದಶಕದಲ್ಲೇ ಭಾರತ&ಚೀನಾ ಗಡಿಯಲ್ಲಿ ನಡೆದ ಭೀಕರ ಕಾಳಗ ಇದಾಗಿತ್ತು. ಸೇನೆಯ ಉನ್ನತ ಮಟ್ಟದ ಮಾತುಕತೆ ಪ್ರಕಾರ, ಚೀನಾ ಸೇನೆ ಗಲ್ವಾನ್​ ಕಣಿವೆಯ ಗಡಿಯಿಂದ ಹಿಂದೆ ಸರಿಯಬೇಕಿತ್ತು. ಸಭೆಯಲ್ಲಿ ಸೇನೆ ಒಪ್ಪಿಗೆ ನೀಡಿದ್ದರೂ, ವಾಸ್ತವದಲ್ಲಿ ಹಿಂದೆ ಸರಿದಿರಲಿಲ್ಲ. ಜೂನ್​ 15ರ ರಾತ್ರಿ ಭಾರತೀಯ ಸೇನೆಯ ಕಮಾಂಡರ್​ ಸಂತೋಷ್​ ಬಾಬು ನೇತೃತ್ವದ ತಂಡಕ್ಕೆ ಚೀನಾ ಸೈನಿಕರು ಎದುರಾದರು. ಈ ವೇಳೆ ಮಾರಾಮಾರಿ ನಡೆದು ಕರ್ನಲ್​ ಸಂತೋಷ್​ ಬಾಬು ಸಹಿತ 20 ಭಾರತೀಯ ಯೋಧರು ಹುತಾತ್ಮರಾದರು. ಚೀನಾದ 30ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಬೇಹುಗಾರಿಕಾ ಇಲಾಖೆ ಹೇಳಿದೆ. ಆದರೆ, ಚೀನಾ ಕೆಲವು ಯೋಧರು ಮೃತಪಟ್ಟಿದ್ದಾರೆ ಎಂದಷ್ಟೆ ಹೇಳಿದೆ.

ಸಮರಾಭ್ಯಾಸ: ಅರುಣಾಚಲ ಪ್ರದೇಶದ ಗಡಿಗೆ ಸಮೀಪವಿರುವ ಶಿಗಸ್ತೆ ಎಂಬ ಪ್ರದೇಶದಲ್ಲಿ ಚೀನಾ ಸೇನೆ ಇತ್ತೀಚೆಗೆ ಅತ್ಯಾಧುನಿಕ ಆಯುಧಗಳನ್ನು ಬಳಸಿ ಸಮರಾಭ್ಯಾಸ ನಡೆಸಿದೆ ಎಂದು "ಗ್ಲೋಬಲ್​ ಟೈಮ್ಸ್​' ವರದಿ ಮಾಡಿದೆ.

ಭಾರತವೂ ಸಿದ್ಧ: ಗಡಿಯಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಸೂಕ್ಷ$್ಮವಾಗಿ ಗಮನಿಸ ಲಾಗುತ್ತದೆ. ಯಾವುದೇ ಪರಿಸ್ಥಿತಿ ಎದುರಿಸಲು ಭಾರತದ ಸೇನೆ ಸಿದ್ಧವಾಗಿದೆ ಎಂದು ಮೂರೂ ಸೇನೆಗಳ ಮುಖ್ಯಸ್ಥ ಜ. ಬಿಪಿನ್​ ರಾವತ್​ ಹೇಳಿದ್ದಾರೆ.

ಅಕ್ಸಾಯ್​ ಚಿನ್​ ಪ್ರದೇಶದಲ್ಲೂ ಚಟುವಟಿಕೆ: ಲಡಾಖ್​ ಮಾತ್ರವಲ್ಲ ಅಕ್ಸಾಯ್​ ಚಿನ್​ ಪ್ರದೇಶದಲ್ಲೂ ಚೀನಾ ಸೇನೆ ಚಟುವಟಿಕೆ ಚುರುಕುಗೊಳಿಸಿದೆ. ಅಲ್ಲಿ ಹಲವು ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಸೇನೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಅದು ನಿರ್ಮಾಣ ಮಾಡುತ್ತಿದೆ. ಸೇನಾ ಸಿಬ್ಬಂದಿಗೆ ತಾತ್ಕಾಲಿಕ ವಸತಿಯನ್ನೂ ಇಲ್ಲಿ ನಿಮಿರ್ಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net