36 ವರ್ಷದ ಸುಚಿಕಾ ಸಾಂಪ್ರದಾಯಿಕ ಎಂಎಂಎ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದರು. ಈ ಸ್ಪರ್ಧೆಯಲ್ಲಿ ಸೆಮಿಫೈನಲ್ನಲ್ಲಿ ಸೋತ ಇಬ್ಬರಿಗೂ ಕಂಚಿನ ಪದಕ ನೀಡಲಾಗುತ್ತದೆ. ಸುಚಿಕಾ ಭಾನುವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಮಂಗೋಲಿಯಾದ ಅಲ್ಟಾಂಚಿಮೆಗ್ ಬೈಗಲ್ಮಾ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದರು.
ಎಂಎಂಎ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ ಪದಕ ಸ್ಪರ್ಧೆಯಾಗಿ ಸೇರ್ಪಡೆಗೊಂಡಿದೆ. ಸುಚಿಕಾ ಈ ಮುನ್ನ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜುಡೋ ಮತ್ತು 2023ರ ಏಷ್ಯನ್ ಗೇಮ್ಸ್ನಲ್ಲಿ ಕುರಾಶ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು 2024ರಲ್ಲಿ ಜಿಯು-ಜಿತ್ಸು ವಿಶ್ವ ಚಾಂಪಿಯನ್ ಕೂಡ ಆಗಿದ್ದರು. 12ನೇ ವಯಸ್ಸಿನಲ್ಲಿ ಎದುರಿಸಿದ ಕಿರುಕುಳದ ಬಳಿಕ ಸುಚಿಕಾ ತಾನು ಕೂಡ ಹೋರಾಡಲು ಕಲಿಯಬೇಕೆಂದು ನಿರ್ಧರಿಸಿ ಆತ್ಮರಕ್ಷಣೆಗಾಗಿ ಜುಡೋ ಕಲಿಯಲಾರಂಭಿಸಿದ್ದರು.
ಇದೀಗ 24 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಪೋಡಿಯಂ ಏರಿ ಇತಿಹಾಸ ನಿರ್ಮಿಸುತ್ತಿದ್ದಾರೆ. ಸೆಮಿಫೈನಲ್ ಸೋಮವಾರ ನಡೆಯಲಿದೆ. ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಆಗಿದ್ದ ಸುಚಿಕಾ ಈಗ ಹರಿಯಾಣ ಕ್ರೀಡಾ ಇಲಾಖೆಯ ಕಿರಿಯ ಕೋಚ್ ಆಗಿದ್ದಾರೆ.