Success Story| 1 ಕೋಟಿ ರೂ. ಉದ್ಯೋಗ ತ್ಯಜಿಸಿ, ತಿಂಗಳಿಗೆ 10,000 ರೂ.ಗಳಲ್ಲಿ ಬದುಕುತ್ತಿದ್ದಾಕೆ ಕಟ್ಟಿದ್ದು 4000 ಕೋಟಿ ಮೌಲ್ಯದ ಸಾಮ್ರಾಜ್ಯ

Vineetha Singh
Published on

ಮುಂಬೈ: ಯಶಸ್ಸು ಯಾವಾಗ ಯಾರನ್ನು ಹೇಗೆ ಹುಡುಕಿಕೊಂಡು ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಒಂದಿದ್ದರೆ ಸಾಕು ಯಶಸ್ಸು ನಮ್ಮದಾಗುತ್ತೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಆ ಸಾಲಿಗೆ ಖ್ಯಾತ ಯುವ ಉದ್ಯಮಿ ವಿನೀತಾ ಸಿಂಗ್ ಕೂಡ ಸೇರ್ಪಡೆಯಾಗುತ್ತಾರೆ. ಇವರು ಉದ್ಯಮದಲ್ಲಿ ಬೆಳೆದ ಹಾದಿ ಸ್ಪೂರ್ತಿದಾಯಕವಾಗಿದ್ದು, ಅವರ ಸಕ್ಸಸ್​ ಸ್ಟೋರಿಯನ್ನು (Success Story) ತಿಳಿಯೋಣ ಬನ್ನಿ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಪ್ರಸಿದ್ಧ ರಿಯಾಲಿಟಿ ಶೋ ಶಾರ್ಕ್​ಟ್ಯಾಂಕ್​ ನಾಲ್ಕನೇ ಆವೃತ್ತಿಯ ತೀರ್ಪುಗಾರರಾಗಿ ವಿನೀತಾ ಸಿಂಗ್​ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಂಪನಿ ಒಂದರ ಸಹಸಂಸ್ಥಾಪಕಿ ಆಗಿರುವ ವಿನೀತಾ ಅವರು ಬರೋಬ್ಬರಿ 4 ಸಾವಿರ ರೂ. ಕೋಟಿಯ ಒಡತಿ ಎಂದರೆ ನಿಮಗೆ ಸಂಬಲು ಕಷ್ಟವಾಗಬಹುದು. . ಭಾರತದ ಪ್ರಮುಖ ಸೌಂದರ್ಯವರ್ಧಕ ಕಂಪನಿಯಾದ ಶುಗರ್ ಕಾಸ್ಕೆಟಿಕ್ಸ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲತಃ ಗುಜರಾತ್​ನ ಆನಂದ್​ ಜಿಲ್ಲೆಯವರಾದ ವಿನೀತಾ ಅವರ ತಂದೆ ವೈದ್ಯರಾಗಿದ್ದು, ದೆಹಲಿಯ ಏಮ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಾಲ್ಯದಲ್ಲಿ ಹೆಚ್ಚಿನ ಸಮಯ ಅಜ್ಜಿಯೊಂದಿಗೆ ಕಳೆದ ವಿನೀತಾ ಅವರು 10 ವರ್ಷದವರಿದ್ದಾಗ ತಮ್ಮ ಸ್ನೇಹಿತರೊಂದಿಗೆ ಸಣ್ಣ ಪತ್ರಿಕೆಯನ್ನು ಆರಂಭಿಸಿ  ಅದನ್ನು 3 ರೂ.ಗೆ ಮಾರುತ್ತಿದ್ದರು. ಬಾಲ್ಯದಲ್ಲೇ ಉದ್ಯಮದ ಬಗ್ಗೆ ಆಸಕ್ತಿ ಹೊಂದಿದ್ದ ವಿನೀತಾ ಅವರು ಮದ್ರಾಸ್​ ಐಐಟಿ ಹಾಗೂ ಅಹಮದಾಬಾದ್​ ಐಐಎಂನಲ್ಲಿ ಪದವಿಯನ್ನು ಪಡೆದಿದ್ದಾರೆ.

Vineetha Singh

23 ವರ್ಷದವರಿದ್ದಾಗಲೇ ವಿನೀತಾ ಅವರಿಗೆ ಒಂದು ಕೋಟಿ ರೂ . ಪ್ಯಾಕೇಜ್​ಅನ್ನು ಕಂಪನಿ ಆಫರ್ ಮಾಡಿತ್ತು. ಆದರೆ, ಅದನ್ನು ತಿರಸ್ಕರಿಸಿ ತಮ್ಮ ಸ್ವಂತ ಉದ್ಯಮ ಆರಂಭಿಸಿದ ವಿನೀತಾ ಅವರು ಮೊದಲ ಹಂತದಲ್ಲಿ ಮಹಿಳೆಯರ ಒಳುಡುಪಿನ ಉದ್ಯಮವನ್ನು ಪ್ರಾರಂಭಿಸಲು ಮುಂದಾದರು. ಆದರೆ, ಅನುಭವದ ಕೊರತೆ ಹಾಗೂ ಹೂಡಿಕೆದಾರರು ಮುಂದೆ ಬಾರದ ಕಾರಣ ಅವರು ಈ ಉದ್ಯಮಕ್ಕೆ ಕೈ ಹಾಕಲಿಲ್ಲ. ಬಳಿಕ ಕಂಪನಿ ಒಂದರಲ್ಲಿ 10 ಸಾವಿರ ರೂ. ಸಂಬಳಕ್ಕೆ ಸೇರಿಕೊಂಡ ವಿನೀತಾ ಅವರು ಜೀವನ ಸಾಗಿಸುತ್ತಿದ್ದರು. ಆ ಬಳಿಕ 5 ವರ್ಷಗಳ ಕಾಲ ಕಂಪನಿಯನ್ನು ನಡೆಸಿದ್ದರು.

2012ರಲ್ಲಿ ಪತಿ ಕೌಶಿಕ್​ ಮುಖರ್ಜಿ ಸಹಾಯದೊಂದಿಗೆ ವಿನೀತಾ ಕಾಸ್ಮೆಟಿಕ್​ ಕಂಪನಿ ಒಂದನ್ನು ಆರಂಭಿಸಿದರು. ಯುವ ಸಮೂಹಕ್ಕೆ ಕೈಗೆಟುಕುವ ಉತ್ತಮ ಗುಣಮಟ್ಟದ ಮೇಕಪ್ ಉತ್ಪನ್ನಗಳನ್ನು ತಯಾರಿಸುವತ್ತ ಗಮನಹರಿಸಿದರು. ದಿನಕಳೆದಂತೆ ಇವರ ಯಉತ್ಪನ್ನಗಳಿಗೆ ಹೆಚ್ಚು ಮನ್ನಣೆ ಪಡೆದ ಕಾರಣಕ್ಕೆ ಕಂಪನಿಯು ವೇಗವಾಗಿ ಬೆಳೆಯಲು ಶುರುವಾಯಿತು. ದಂಪತಿಗಳು 2015ರಲ್ಲಿ ಶುಗರ್ ಕಾಸ್ಮೆಟಿಕ್​ ಕಂಪನಿಯನ್ನು ಶುರು ಮಾಡಿದರು. ದಿನ ಕಳೆದಂತೆ ಕಂಪನಿಯ ಪ್ರಾಡಕ್ಟ್​ಗಳು ಹೆಚ್ಚು ಖ್ಯಾತಿ ಪಡೆದ ಕಾರಣ ವಿನೀತಾ ಅವರು ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಕಂಪನಿ ಬ್ರ್ಯಾಂಡ್​ ವ್ಯಾಲ್ಯೂ 4 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net