ವಿದ್ಯಾಭ್ಯಾಸದಿಂದ ಯಶಸ್ಸು ಸಾಧ್ಯ

sports (1)
ಆನಂದಪುರ ಸಮೀಪದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕ್ರೀಡಾಕೂಟವನ್ನು ಪಿಎಸ್‌ಐ ಯುವರಾಜ್ ಕಂಬಳಿ ಉದ್ಘಾಟಿಸಿದರು. ಅರುಣ್ ಕುಮಾರ ಗೌಡ ಕರಡಿಮನೆ, ಜ್ಯೋತಿ ರಘು, ಚಂದ್ರಶೇಖರ ಇತರರಿದ್ದರು.
Published on

ಆನಂದಪುರ: ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿದರೆ ಜೀವನ ಪೂರ್ತಿ ಯಶಸ್ಸಿನಲ್ಲಿ ಮುನ್ನಡೆಯಲು ಸಾಧ್ಯ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ವಿಶೇಷಾಧಿಕಾರಿ ಕೆ.ಸಿ.ಶಶಿಧರ ತಿಳಿಸಿದರು.

ಇರುವಕ್ಕಿಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕ್ರೀಡಾಕೂಟ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಮುಗ್ಧತೆ ಹೊಂದಿರುತ್ತಾರೆ. ಸಂಪೂರ್ಣ ಸಮಯವನ್ನು ಕಲಿಕೆ ಮತ್ತು ಸಾಮಾನ್ಯ ಜ್ಞಾನದ ವಿಷಯಗಳ ಸಂಗ್ರಹಕ್ಕೆ ಬಳಸಿಕೊಳ್ಳಬೇಕು ಎಂದರು.

ಪಿಎಸ್‌ಐ ಯುವರಾಜ ಕಂಬಳಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ಪ್ರತಿಭೆ ಹೊಂದಿರುತ್ತಾರೆ. ಅವರನ್ನು ನಿರಂತರವಾಗಿ ಹುರಿದುಂಬಿಸುವ ಅಗತ್ಯವಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಅಗತ್ಯ. ವಿದ್ಯಾರ್ಥಿಗಳು ವಿಭಿನ್ನ ಕ್ರೀಡೆಯಲ್ಲಿ ಪರಿಣತಿ ಹೊಂದಿರುತ್ತಾರೆ. ಅವರಿಗೆ ಆಸಕ್ತಿ ಇರುವ ಕ್ರೀಡೆಯ ಬಗ್ಗೆ ಹೆಚ್ಚು ತರಬೇತಿ ನೀಡಿದರೆ ಸಾಧನೆ ಮಾಡಬಲ್ಲರು ಎಂದರು.

ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ಚೇತನಾ ಮಾತನಾಡಿ, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಿರಂತರ ಸಾಧನೆ ಮಾಡುತ್ತಾ ಮುಂದುವರೆಯಬೇಕು ಎಂದರು.

ಗ್ರಾಪಂ ಸದಸ್ಯರಾದ ಅರುಣ್‌ಕುಮಾರ ಗೌಡ ಕರಡಿಮನೆ, ಜ್ಯೋತಿ ರಘು, ಪ್ರಾಚಾರ್ಯ ಚಂದ್ರಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net