ಪರಿಶ್ರಮ ವಹಿಸಿದರೆ ಜೀವನದಲ್ಲಿ ಯಶಸ್ಸು

15-ಎಸ್ಕೆಪಿ-4-ಉದ್ಘಾಟನೆ
ಶಿಕಾರಿಪುರದ ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಉದ್ಘಾಟಿಸಿದರು. ಬಿ.ಪಾಪಯ್ಯ, ಡಾ. ಶಿವಾನಂದ್, ರುದ್ರೇಶ್, ರತ್ನಮ್ಮ, ಪವಿತ್ರಾ ಇತರರಿದ್ದರು.
Published on

ಶಿಕಾರಿಪುರ: ವಿದ್ಯಾರ್ಥಿಗಳು ಪರಿಶ್ರಮ, ಶ್ರದ್ಧೆ ವಹಿಸಿ ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯ ಎಂದು ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯೆಯು ಸಮಾಜಮುಖಿ ಆಲೋಚನೆಗಳನ್ನು ಬೆಳೆಸುತ್ತದೆ. ಪ್ಯಾರಾಮೆಡಿಕಲ್ ಶಿಕ್ಷಣ ಜೀವ ಸಂರಕ್ಷಣೆಯ ದಾರಿ. ನಿಮ್ಮ ಪರಿಶ್ರಮದಿಂದ ಜನರು ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಪ್ರಾಮಾಣಿಕತೆ, ಸೇವಾ ಭಾವನೆ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಸಿಪಿಐ ರುದ್ರೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯ. ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಶಿವಾನಂದ್ ಮಾತನಾಡಿ, ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜು ಉತ್ತಮ ಆರೋಗ್ಯ ಸೇವೆ ಒದಗಿಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎಂದು ತಿಳಿಸಿದರು.

ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಪಡೆದ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅವರನ್ನು ಸನ್ಮಾನಿಸಲಾಯಿತು. ಬಾಪೂಜಿ ಸಂಸ್ಥೆ ಸಂಸ್ಥಾಪಕ ಬಿ.ಪಾಪಯ್ಯ, ಜ್ಞಾನಗಂಗೋತ್ರಿ ಪ್ಯಾರಾಮೆಡಿಕಲ್ ಕಾಲೇಜಿನ ಚೇರ್ಮನ್ ಬಿ.ಯು.ವೀರೇಂದ್ರಕುಮಾರ, ಸಾಗರದ ಸಿಡಿಪಿಯು ರತ್ನಮ್ಮ, ಕಾರ್ಯದರ್ಶಿ ಪವಿತ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net