ಸುಭದ್ರಾ ಸಂಘಕ್ಕೆ ರೂ. 5.49 ಲಕ್ಷ ಲಾಭ

22bhr 5
ಬಾಳೆಹೊನ್ನೂರಿನ ಸುಭದ್ರಾ ಪತ್ತಿನ ಸೌಹಾರ್ದ ಸಹಕಾರ ಸಂಘ ವಾರ್ಷಿಕ ಮಹಾಸಭೆಯಲ್ಲಿ ಮೋಹನ್‌ದಾಸ್ ಹೆಗ್ಡೆ, ಎಚ್.ಸಿ.ಸುಬ್ರಹ್ಮಣ್ಯ, ಎಚ್.ಗೋಪಾಲ್, ಕೆ.ಬಿ.ಪೂವಮ್ಮ ಇದ್ದರು.
Published on

ಬಾಳೆಹೊನ್ನೂರು: ಪಟ್ಟಣದ ಸುಭದ್ರಾ ಪತ್ತಿನ ಸೌಹಾರ್ದ ಸಹಕಾರ ಸಂಘವು 2022-23ರಲ್ಲಿ 5.49 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಗ್ಡೆ ತಿಳಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘವು ವಾರ್ಷಿಕ 14.08 ಕೋಟಿ ರೂ. ವಹಿವಾಟು ನಡೆಸಿದ್ದು, 3.38 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ಸಂಘವು ಸತತವಾಗಿ ಲಾಭಾಂಶದಲ್ಲಿ ಮುನ್ನಡೆಯುತ್ತಿದೆ. ಸಂಘದ ಸದಸ್ಯರು ಉತ್ತಮ ವಹಿವಾಟು ನಡೆಸುತ್ತಿದ್ದಾರೆ. ಸಂಘ ಇನ್ನಷ್ಟು ಅಭಿವೃದ್ಧಿ ಕಾಣಲು ಸರ್ವ ಸದಸ್ಯರ ಸಹಕಾರ ಅಗತ್ಯ ಎಂದರು.
ಸಂಘದ ಉಪಾಧ್ಯಕ್ಷ ಎಚ್.ಸಿ.ಸುಬ್ರಹ್ಮಣ್ಯ, ನಿರ್ದೇಶಕರಾದ ಕೆ.ಆರ್.ದೀಪಕ್, ಡಾ. ಸುನೀಲ್ ರೈ, ಡಾ. ಪ್ರಸನ್ನಕುಮಾರ್ ಶೆಟ್ಟಿ, ಶಚೀಂದ್ರ, ಕೆ.ನಾರಾಯಣ್, ಕೆ.ಪ್ರಭಾಕರ್, ಶಕೀಲಾ ಹೆಗ್ಡೆ, ಕೆ.ಬಿ.ಪೂವಮ್ಮ, ಎ.ಜಿ.ದಿವಿನ್ ರಾಜ್, ಭಾಸ್ಕರ್ ವೆನಿಲ್ಲಾ, ಎಚ್.ಗೋಪಾಲ್, ಸಿಇಒ ಜಗತ್ ಗೌಡ, ಸಿಬ್ಬಂದಿ ಮಾನಸಾ, ಅನನ್ಯಾ, ನಿತೇಶ್, ರಂಜಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net