ರಜಾ ದಿನಗಳಲ್ಲೂ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯ

subagistrar office
ವಿಜಯಪುರ ಉಪ ನೋಂದಣಿ ಇಲಾಖೆ.
Published on

ಬೆಂಗಳೂರು: ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ ಹಕ್ಕುಪತ್ರ ನೋಂದಣಿ ಸಲುವಾಗಿ ರಜೆ ದಿನವೂ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸೇವೆ ನಿರ್ವಹಿಸಲಿವೆ.

ಬುಧವಾರ (ಏ.30, ಬಸವ ಜಯಂತಿ), ಮೇ 1(ಕಾರ್ಮಿಕ ದಿನ) ಮತ್ತು ಮೇ 4 (ಭಾನುವಾರ) ರಜೆ ದಿನವೂ ಕೆಲಸ ಮಾಡುವಂತೆ ಸಬ್‌ರಿಜಿಸ್ಟ್ರಾರ್ ಕಚೇರಿ ತೆರೆಯಬೇಕು. ಇತರ ದಿನಗಳಲ್ಲಿ ಹಕ್ಕುಪತ್ರ ನೋಂದಣಿಗೆ ಸಮಯ ವಿಸ್ತರಣೆ ಅವಶ್ಯವಿದ್ದಲ್ಲಿ ಜಿಲ್ಲಾ ನೋಂದಣಾಧಿಕಾರಿ, ಉಪ ನೋಂದಣಾಧಿಕಾರಿಗಳ ಕೋರಿಕೆ ಅನುಗುಣವಾಗಿ ಅವಕಾಶ ಮಾಡಿಕೊಡಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ. ದಯಾನಂದ್ ಸೂಚನೆ ನೀಡಿದ್ದಾರೆ.

ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಲ್ಲಿ ಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಲುವಾಗಿ ದಸ್ತಾವೇಜುಗಳನ್ನು ನೋಂದಣಿ ಮಾಡುವುದು ಅತೀ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಮತ್ತು ಸುಗಮವಾಗಿ ಕಚೇರಿ ಕೆಲಸ ನಡೆಸುವ ಸಲುವಾಗಿ ರಜೆ ದಿನಗಳಲ್ಲಿಯೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net